ಮಕ್ಕಳಿಗೆ ಕರಾಟೆ ಕಲಿಸಿ: ಪೋಷಕರಿಗೆ ಸಲಹೆ

ಬೇಲೂರು, ಜು.16- ಕರಾಟೆ ಉತ್ತಮ ಸಮರ ಕಲೆ. ಎಲ್ಲ ಪೋಷಕರೂ ತಮ್ಮ ಮಕ್ಕಳಿಗೆ ಸ್ವರಕ್ಷಣೆಯ ಕಲೆ ಕಲಿಸಲು ಆಸಕ್ತಿ ತೋರಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ ಹೇಳಿದರು.

ಬೇಲೂರಿನ ಹೊಳೆಬೀದಿ ಪಾಂಡುರಂಗ ದೇವಸ್ಥಾನದಲ್ಲಿ ನ್ಯಾಷನಲ್ ಶೋಟೋಕಾನ್ ಕರಾಟೆ ಶಾಲೆಯ ವಜ್ರಕಾಯ ಶಾಖೆ ಆಯೋಜಿಸಿದ್ದ ಕರಾಟೆ ಕಲರ್ ಬೆಲ್ಟ್ ಪ್ರಧಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ಉಮೇಶ್, ಮಕ್ಕಳಿಗೆ ಕರಾಟೆ ಜೊತೆಗೇ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತದ ಬಗ್ಗೆ ತಿಳಿಸಿಕೊಡಬೇಕು ಎಂದರು.

ಮುಖ್ಯ ಶಿಕ್ಷಕ ಕರಾಟೆ ಕೌಶಿಕ್ ರಾವ್, ಕರಾಟೆ ಕಲಿಯು ವುದರಿಂದ ಉತ್ತಮ ಆರೋಗ್ಯದ ಜತೆಗೆ ಏಕಾಗ್ರತೆ, ಬುದ್ಧಿ ಶಕ್ತಿಯೂ ಹೆಚ್ಚುತ್ತದೆ ಹಾಗೂ ಪ್ರತಿ ಶಾಲೆಯಲ್ಲಿಯೂ ಕರಾಟೆ ಕಡ್ಡಾಯ ಮಾಡಿದರೆ ಮಕ್ಕಳಿಗೂ ಉಪಯೋಗವಾಗುತ್ತದೆ ಎಂದು ಹೇಳಿದರು.
ನ್ಯಾಷನಲ್ ಶೋಟೋಕಾನ್ ಕರಾಟೆ ಶಾಲೆ ಅಧ್ಯಕ್ಷ ಅನಂತ್ ಕುಮಾರ್, ಮಕ್ಕಳಿಗೆ ಬೆಲ್ಟ್ ಪ್ರದಾನ ಮಾಡಿದರು.