ನಿಶ್ಚಿತಾರ್ಥ ಆಗಿಲ್ಲವೆಂದು ನೊಂದು ಬಾವಿಗೆ ಬಿದ್ದು ಶಿಕ್ಷಕಿ ಆತ್ಮಹತ್ಯೆ!

ಬೀದರ್, ಮಾ.8- ಮಕ್ಕಳಿಗೆ ಬುದ್ಧಿ ವಾದ ಹೇಳಿ, ತಿದ್ದ ಬೇಕಿದ್ದ ಶಿಕ್ಷಕಿಯೊ ಬ್ಬರು ತನಗೆ ನಿಶ್ಚಿ ತಾರ್ಥ ಆಗಲಿಲ್ಲ ಎಂಬ ಕಾರಣಕ್ಕೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.

24 ವರ್ಷದ ಪೂಜಾ ಎಂಬುವರು ಭಾಲ್ಕಿ ತಾಲೂಕಿನ ಭಾಲ್ಕೇಶ್ವರ ದೇವಸ್ಥಾನದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಡೆತ್‍ನೋಟ್‍ನಲ್ಲಿ ಪೂಜಾ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿಟ್ಟಿ ದ್ದಾರೆ. ಪೂಜಾ ಭಾಲ್ಕಿಯ ಖಾಸಗಿ ಚನ್ನ ಬಸವ ಪದವಿ ಕಾಲೇಜಿನಲ್ಲಿ ರಾಸಾ ಯನಿಕ ಶಾಸ್ತ್ರದ ಶಿಕ್ಷಕಿಯಾಗಿ ಕೆಲಸ ಮಾಡು ತ್ತಿದ್ದರು. ವರನ ಕಡೆಯವರು ಹಲವು ಬಾರಿ ನೋಡಿ ಹೋಗಿದ್ದರು ನಿಶ್ಚಿತಾರ್ಥ ಮಾಡಿಕೊಂಡಿರಲಿಲ್ಲ. ಹೀಗಾಗಿ ಮನ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಭಾಲ್ಕಿನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.