ಚನ್ನರಾಯಪಟ್ಟಣ: ಪಟ್ಟಣ ದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಸಲುವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಕಾರ್ಯಾಚರಣೆಗೆ 15 ಅಧಿಕಾರಿಗಳ ತಂಡ ರಚಿಸಲು ಪುರಸಭೆ ಮುಂದಾಗಿದೆ.
ಪ್ಲಾಸ್ಟಿಕ್ ನಿಷೇಧ ಕುರಿತು ಪಟ್ಟಣದ ಪುರಸಭೆ ಏರ್ಪಡಿಸಿದ್ದ ಸಭೆಯಲ್ಲಿ ಮಾತ ನಾಡಿದ ಪುರಸಭೆ ಆಡಳಿತಾಧಿಕಾರಿ ಹೆಚ್.ಎಲ್. ನಾಗರಾಜ್, ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟದ ಅಂಗಡಿ, ಬಳಸುವ ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಿದೆ ಎಂದರು.
ತಾಲೂಕಿನಲ್ಲಿರುವ ಬಹುತೇಕ ಸಮು ದಾಯ ಭವನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಸಾರ್ವಜನಿಕರ ಸಭೆ, ಮದುವೆ ಹಾಗೂ ಯಾವುದೇ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿ ನೀರು ಬಳಸುವಂತಿಲ್ಲ. ಪ್ಲಾಸ್ಟಿಕ್ ಬಳಸಿದರೆ ಸಮುದಾಯ ಭವನ ಮಾಲೀಕರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪುರಸಭೆಯ 23 ವಾರ್ಡ್‍ಗಳಲ್ಲಿ ಪ್ಲಾಸ್ಟಿಕ್ ಕಂಡುಬಂದಲ್ಲಿ, ಎಲ್ಲೆಂದರಲ್ಲಿ ಕಸ ಸುರಿದಿದ್ದರೆ ತಾಲೂಕು ಆರೋಗ್ಯಾಧಿಕಾರಿ ಫೆÇೀಟೋ ಸಮೇತ ಪುರಸಭೆಗೆ ವರದಿ ಮಾಡಬೇಕು ಎಂದು ಸೂಚಿಸಿದರು. ಬಟ್ಟೆ ಹಾಗೂ ಕಾಗದದ ಕೈಚೀಲ ತಯಾರಿಕೆಗೆ ಸ್ತ್ರೀಶಕ್ತಿ ಸಂಘಗಳು ಮುಂದೆ ಬಂದಿದ್ದು, ತರಬೇತಿ ನೀಡಲಾಗು ವುದು. ಈ ಸಂಘಗಳು ಕೈಚೀಲ ತಯಾ ರಿಸಿ ಅಂಗಡಿಗಳಿಗೆ ಪೂರೈಸಲಿವೆ. ವರ್ತಕ ರು ಇವರಿಂದ ಕೈಚೀಲ ಖರೀದಿಸಬೇಕು ಎಂದು ಸೂಚನೆ ನೀಡಿದರು.
ವರ್ತಕರಾದ ಸಿ.ಕೆ.ಕೃಷ್ಣಪ್ಪ, ಸಿ.ವೈ.ಸತ್ಯ ನಾರಾಯಣ್, ಮಾಲಿನ್ಯ ಮಂಡಳಿ ಉಪ ಪರಿಸರಾಧಿಕಾರಿ ರವಿಚಂದ್ರ, ಅಧಿಕಾರಿ ಶಿವನಂಜಪ್ಪ ಕಂಬಾರ್, ಪುರಸಭೆಯ ಮುಖ್ಯಾಧಿಕಾರಿ ಎಂ.ಕುಮಾರ್, ಸಿಪಿಐ ಎಚ್.ಎಂ.ಕಾಂತರಾಜ್ ಇದ್ದರು.