ತಂತ್ರಜ್ಞಾನ ಮನುಷ್ಯನ ಅಭಿವೃದ್ಧಿಗೆ ಬಳಕೆಯಾಗಬೇಕು

ಮೈಸೂರು: ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಯಾಗಿದ್ದು, ಮನುಷ್ಯನ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಬೆಂಗ ಳೂರಿನ ನಿವೃತ್ತ ಇಸ್ರೋ ವಿಜ್ಞಾನಿ ವಿ. ಜಗನ್ನಾಥ ಅಭಿಪ್ರಾಯಪಟ್ಟರು.

ಮೈಸೂರಿನ ಇಂಜಿನಿಯರುಗಳ ಸಭಾಂ ಗಣದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವ ಹಣೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪಾತ್ರ ಕುರಿತು ಮಾತನಾಡಿದ ಅವರು, ವಿಜ್ಞಾನ 300 ವರ್ಷವಷ್ಟೇ ಹಳೆಯದು. ಅದಕ್ಕಿಂತ ಹಿಂದೆ ವೇದ-ಉಪನಿಷತ್ ನಮ್ಮಲ್ಲಿದ್ದು, ಅದನ್ನು ಪುನಃ ಓದುವ ಕೆಲಸವಾಗ ಬೇಕು ಎಂದು ಹೇಳಿದರು.

ಬಾಹ್ಯಾಕಾಶ ವಿಜ್ಞಾನ ಅಪರೂಪ ವಾಗಿದ್ದು, ಇದರಿಂದ ಎಲ್ಲದಕ್ಕೂ ಪರಿ ಹಾರ ರೂಪಿಸುವ ಸಾಧ್ಯತೆ ಇದೆ. ತಂತ್ರ ಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದ್ದು, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ಜಪಾನ್ ಸ್ವಾವಲಂಬನೆ ಬದುಕಿನ ಕಡೆಗೆ ಗಮನ ನೀಡಿದರೆ, ನಮ್ಮಲ್ಲಿ ಸ್ವಾವಲಂ ಬನೆ ಬದುಕು ಇಲ್ಲವೇ ಇಲ್ಲ. ಸಾಲ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರಸ್ತುತ ತಂತ್ರಜ್ಞಾನದಿಂದ 10 ನಿಮಿಷ ಮೊದಲೇ ಯಾವ ದುರಂತ ಸಂಭವಿ ಸುತ್ತದೆಂದು ಎಲ್ಲವುದರ ಬಗ್ಗೆ ತಿಳಿದು ಕೊಳ್ಳಬಹುದು. ನಾವು ತಾತ್ವಿಕವಾಗಿ ಬಡವರಲ್ಲ. ಆದರೆ, ಮಾನವೀಯತೆ ಮೌಲ್ಯ ಬೆಳೆಸುವ ವಾತಾವರಣ ನಮ್ಮ ಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ. ಆರ್.ಸುರೇಶ್, ಕಾರ್ಯದರ್ಶಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು.