ಬಿದರಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಹನೂರು: ಮೈಸೂರಲ್ಲಿ ಚಿಕಿತ್ಸೆ ಪಡೆಯುತ್ತಿರುವ 94ಮಂದಿ ಪೈಕಿ 45 ಮಂದಿ ಬಿದರಹಳ್ಳಿ ಯವರೇ ಆಗಿದ್ದಾರೆ. ಆಸ್ಪತ್ರೆಯಲ್ಲಿ ಸರಿ ಯಾದ ಚಿಕಿತ್ಸೆ ಸಿಗುತ್ತಿಲ್ಲ. ನೋಡಲು ಬಿಡು ತ್ತಿಲ್ಲಾ. ದಿನ ಸತ್ತವರ ಶವ ತರಲಾಗುತ್ತಿದೆ ಎಂದು ಭಾನುವಾರ ಬಿದರಹಳ್ಳಿ ಗ್ರಾಮ ಸ್ಥರು ಪ್ರತಿಭಟನೆ ನಡೆಸಿದರು.

ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಾಲಮ್ಮ ಸಾವಿಗೀಡಾಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸುಮಾರು 1 ಗಂಟೆ ಕಾಲ ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.

ನಮ್ಮ ಗ್ರಾಮದಲ್ಲಿ ಸಾವಿನ ಸರಣಿ ಹೆಚ್ಚು ತ್ತಿದೆ. ಸರ್ಕಾರ ಆಸ್ಪತ್ರೆಯಲ್ಲಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ ನಮಗೂ ವಿಷ ನೀಡಿ ಎಂದು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಮಂಜುನಾಥ್, ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಪ್ಪ ಇನ್ನಿತರರು ಪ್ರತಿಭಟನಾಕಾರರ ಮನವೊಲಿಸಿ ದರು. ಆಸ್ಪತ್ರೆಯಲ್ಲಿ ಸೂಕ್ತ ರೀತಿ ಚಿಕಿತ್ಸೆ ನೀಡಲಾಗುತ್ತಿದೆ. ನೋಡುವವರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಪ್ರತಿಭಟನಾಕಾರ ರನ್ನು ಸಮಾಧಾನಗೊಳಿಸಿದರು. ಬಳಿಕ ಗ್ರಾಮ ದಲ್ಲಿ ಸಾಲಮ್ಮ ಅಂತ್ಯಕ್ರಿಯೆ ನಡೆಸಲಾಯಿತು.

ಸಾವಿನ ಸರಣಿ ನಿಲ್ಲಲಿ: ದೇವರೇ ನಿನಗೆ ಕರುಣೆ ಇಲ್ಲವೇ? ಶನಿವಾರ ನಮ್ಮ ಗ್ರಾಮದ ನಾಲ್ಕು ಮಂದಿಯನ್ನು ಒಂದೇ ಕಡೆ ಸಂಸ್ಕಾರ ಮಾಡಿದ್ದೆವು. ಇಂದು ಮತ್ತಿಬ್ಬರನ್ನು ಸಂಸ್ಕಾರ ಮಾಡಬೇಕಾಯಿತಲ್ಲ ಎಂದು ಸಾಲಮ್ಮ ಕಳೆದುಕೊಂಡ ಬಂಧುಗಳ ರೋಧನ ಮುಗಿಲು ಮುಟ್ಟುವಂತಿತ್ತು.

ನಮ್ಮಗ್ರಾಮಕ್ಕೆ ಏನಾಗಿದೆ. ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿರುವ ದಾಖಲಾಗಿರುವ 40ಕ್ಕೂ ಹೆಚ್ಚು ಮಂದಿ ಬಿದರಹಳ್ಳಿ ಗ್ರಾಮ ದವರೇ ಆಗಿದ್ದಾರೆ. ಅವರಿಗೆ ಏನಾಗಿದೆ. ಹುಷಾರಾಗಿದ್ದಾರಾ? ಎಂಬುದೇ ತಿಳಿಯ ದಾಗಿದೆ. ನಮ್ಮ ಗ್ರಾಮದ ಸಾವಿನ ಸಂಖ್ಯೆ ಇಲ್ಲಿಗೆ ಅಂತ್ಯವಾಗಲಿ. ಇನ್ನುಳಿದವರು ಗುಣ ಮುಖರಾಗಲಿ ಎಂದು ಸಾಲಮ್ಮ ಬಂಧು ಗಳ ಬಳಿ ತಮ್ಮ ವೇದನೆ ತೋಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಸತ್ತವರ ಶವ ತರು ತ್ತಿದ್ದ ಸ್ಥಿತಿ ತರುತ್ತಿರುವುದನ್ನು ನೋಡಿದರೆ ನಮಗೆ ಭಯವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.