Tag: Temple Tragedy

7 ಮಂದಿ ವಿರುದ್ಧ FIR
ಮೈಸೂರು

7 ಮಂದಿ ವಿರುದ್ಧ FIR

December 17, 2018

ಹನೂರು: ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 13 ಮಂದಿ ಸಾವನ್ನಪ್ಪಿ, 91 ಮಂದಿ ಅಸ್ವಸ್ಥ ಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ರಾಮಾಪುರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಕಿರಾತಕರು ಇನ್ನೂ ಪತ್ತೆಯಾಗಿಲ್ಲವಾ ದರೂ, ದೇವಸ್ಥಾನದ ಟ್ರಸ್ಟಿಗಳು ಹಾಗೂ ಪ್ರಸಾದ ತಯಾರಿಸಿದ ಬಾಣಸಿಗರ ವಿರುದ್ಧ ಭಾರತೀಯ ದಂಡ ಸಂಹಿತೆ 304ರಡಿ (ಉದ್ದೇಶವಲ್ಲದ ಕೊಲೆ) ಎಫ್‍ಐಆರ್ ದಾಖಲಿಸಲಾಗಿದೆ. ಸುಳವಾಡಿ ಮಾರಮ್ಮ ದೇವಸ್ಥಾನದ ಟ್ರಸ್ಟಿ ಚಿನ್ನತ್ತಿ, ವ್ಯವಸ್ಥಾಪಕ…

ಬಿದರಹಳ್ಳಿ ಗ್ರಾಮದಲ್ಲಿ ಮಡುಗಟ್ಟಿದ ದುಃಖ!
ಚಾಮರಾಜನಗರ

ಬಿದರಹಳ್ಳಿ ಗ್ರಾಮದಲ್ಲಿ ಮಡುಗಟ್ಟಿದ ದುಃಖ!

December 17, 2018

ಹನೂರು: ಒಂದೆಡೆ ನಿತ್ಯ ಬೆಳಿಗ್ಗೆ ಪ್ರೀತಿಯಿಂದ ಟಾಟಾ ಮಾಡುತ್ತ ಸ್ಕೂಲಿಗೆ ಹೋಗಿ ಬರುತ್ತಿದ್ದ ಮಕ್ಕಳು, ಹೆತ್ತವರ ಎದುರು ಶವವಾಗಿ ಮಲಗಿದ್ದರು. ಮತ್ತೊಂದೆಡೆ ಮಕ್ಕಳ ಭವ್ಯ ಭವಿಷ್ಯ ಕಣ್ತುಂಬಿಕೊಳ್ಳಬೇಕಿದ್ದ ಹೆತ್ತವರು ಮಾತನಾಡದೆ ಚಿರನಿದ್ರೆಗೆ ಜಾರಿದ್ದರು.ಎಲ್ಲಿ ನೋಡಿದರೂ ನೀರವ ಮೌನ, ತಮ್ಮ ವರನ್ನು ನೆನೆಸಿಕೊಂಡ ಕುಟುಂಬದವರ ಮುಖದಲ್ಲಿ ಮಡುಗಟ್ಟಿದ್ದ ದುಃಖ. ಇದು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ವಿಷ ಮಿಶ್ರಣ ಪ್ರಸಾದ ಸೇವಿಸಿ ಮೃತಪಟ್ಟವರ ಗ್ರಾಮದಲ್ಲಿ ಕಂಡುಬಂದ ದೃಶ್ಯ. ಪಾಪಿಗಳ ಕೃತ್ಯದಿಂದ ದೇವರ ಪ್ರಸಾದ ಸೇವಿಸಿ…

ಮಗನ ಆರೋಗ್ಯಕ್ಕಾಗಿ ದೇಗುಲಕ್ಕೆ ತೆರಳಿದ್ದ ತಾಯಿ ಮರಳಿ ಬಂದದ್ದು ಶವವಾಗಿ..!
ಚಾಮರಾಜನಗರ

ಮಗನ ಆರೋಗ್ಯಕ್ಕಾಗಿ ದೇಗುಲಕ್ಕೆ ತೆರಳಿದ್ದ ತಾಯಿ ಮರಳಿ ಬಂದದ್ದು ಶವವಾಗಿ..!

December 17, 2018

ಚಾಮರಾಜನಗರ:  ಮಗನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಲು ಮಾರಮ್ಮನ ದೇವಸ್ಥಾನಕ್ಕೆ ತೆರಳಿದ್ದ ತಾಯಿ ಮತ್ತೆ ಬಂದದ್ದು ಶವವಾಗಿ. ಇಂದು ಮೃತರಾದ ಸಾಲಮ್ಮ ಸಾವಿನ ಹಿಂದೆ ಮಗನ ಆರೋಗ್ಯದ ಹರಕೆಯ ಸಂಗತಿ ಅಡಗಿದೆ. ಸಾಲಮ್ಮನ ಮಗ ವೆಟ್ರಿವೇಲು ಕಾಲು ಊತ, ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದು, ಈ ಸಮಸ್ಯೆಯಿಂದ ತನ್ನ ಮಗನನ್ನು ಕಾಪಾಡು ಮಾರಮ್ಮ ಎಂದು ಬೇಡಿಕೊಳ್ಳಲು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನಕ್ಕೆ ಸಾಲಮ್ಮ ತೆರಳಿದ್ದರು. ಈ ವೇಳೆ ಅಲ್ಲಿ ನೀಡಿದ ವಿಷ ಪ್ರಸಾದ ಸೇವಿಸಿ ಈಗ ಮೃತಪಟ್ಟಿದ್ದಾಳೆ. ತನ್ನ ತಾಯಿ…

ಬಿದರಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಚಾಮರಾಜನಗರ

ಬಿದರಹಳ್ಳಿ ಗ್ರಾಮಸ್ಥರ ಪ್ರತಿಭಟನೆ

December 17, 2018

ಹನೂರು: ಮೈಸೂರಲ್ಲಿ ಚಿಕಿತ್ಸೆ ಪಡೆಯುತ್ತಿರುವ 94ಮಂದಿ ಪೈಕಿ 45 ಮಂದಿ ಬಿದರಹಳ್ಳಿ ಯವರೇ ಆಗಿದ್ದಾರೆ. ಆಸ್ಪತ್ರೆಯಲ್ಲಿ ಸರಿ ಯಾದ ಚಿಕಿತ್ಸೆ ಸಿಗುತ್ತಿಲ್ಲ. ನೋಡಲು ಬಿಡು ತ್ತಿಲ್ಲಾ. ದಿನ ಸತ್ತವರ ಶವ ತರಲಾಗುತ್ತಿದೆ ಎಂದು ಭಾನುವಾರ ಬಿದರಹಳ್ಳಿ ಗ್ರಾಮ ಸ್ಥರು ಪ್ರತಿಭಟನೆ ನಡೆಸಿದರು. ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಾಲಮ್ಮ ಸಾವಿಗೀಡಾಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸುಮಾರು 1 ಗಂಟೆ ಕಾಲ ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು. ನಮ್ಮ ಗ್ರಾಮದಲ್ಲಿ ಸಾವಿನ ಸರಣಿ ಹೆಚ್ಚು ತ್ತಿದೆ. ಸರ್ಕಾರ ಆಸ್ಪತ್ರೆಯಲ್ಲಿರುವವರಿಗೆ ಸೂಕ್ತ…

29 ಮಂದಿ ಸ್ಥಿತಿ ಇನ್ನೂ ಗಂಭೀರ
ಮೈಸೂರು

29 ಮಂದಿ ಸ್ಥಿತಿ ಇನ್ನೂ ಗಂಭೀರ

December 16, 2018

ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷಯುಕ್ತ ಪ್ರಸಾದ ಸೇವಿಸಿ ಅಸ್ವಸ್ಥರಾಗಿರುವ 93 ಮಂದಿಗೆ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಬಹುತೇಕ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲದೆ, ತಮಿಳು ನಾಡಿನ ಕೆಲ ಗಡಿ ಗ್ರಾಮಗಳಲ್ಲಿಯೂ ತನ್ನದೇ ಆದ ಪ್ರಭಾವ ಬೀರಿದ್ದ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ಶುಕ್ರವಾರ ನಡೆದ ಗೋಪುರ ನಿರ್ಮಾಣದ ಗುದ್ದಲಿ ಪೂಜಾ ಕಾರ್ಯ ದಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರು ದೇವಾಲಯದ ವತಿಯಿಂದ…

ಉನ್ನತ ಮಟ್ಟದ ತನಿಖೆಗೆ ಡಿಸಿಎಂ ಆದೇಶ
ಮೈಸೂರು

ಉನ್ನತ ಮಟ್ಟದ ತನಿಖೆಗೆ ಡಿಸಿಎಂ ಆದೇಶ

December 16, 2018

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಸುಳ ವಾಡಿಯ ದೇವಸ್ಥಾನ ಪ್ರಸಾದ ದುರಂತ ನಂತರ ಸೂಕ್ತ ಕ್ರಮಕೈಗೊಳ್ಳು ವಲ್ಲಿ ಜಿಲ್ಲಾಡಳಿತ ವಿಫಲಗೊಂಡಿದೆ. ಮಾಹಿತಿ ದೊರೆತ ನಂತರವೂ ತಕ್ಷಣ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದು, ನೆರೆಯ ಮೈಸೂರು ಜಿಲ್ಲಾ ಆಸ್ಪತ್ರೆ ಗಳಿಂದ ಆಂಬುಲೆನ್ಸ್ ಮತ್ತು ತುರ್ತು ಚಿಕಿತ್ಸೆ ನೆರವು ಪಡೆಯುವಲ್ಲಿ ಸ್ಥಳೀಯ ಜಿಲ್ಲಾ ಆರೋಗ್ಯಾಧಿಕಾರಿ ವಿಫಲಗೊಂಡಿ ದ್ದಾರೆ. ಸರ್ಕಾರಕ್ಕೆ ಬಂದಿರುವ ಪ್ರಾಥ ಮಿಕ ಮಾಹಿತಿಯ ಆಧಾರದ ಮೇಲೆ ಘಟನೆ ನಡೆದ ಹಲವು ಗಂಟೆ ನಂತರ ಸಾವು-ನೋವುಗಳು ಉಂಟಾದವು. ಆನಂತರವೇ ರಕ್ಷಣಾ ಕಾರ್ಯಗಳಿಗೆ ಮುಂದಾಗಿದ್ದಾರೆ….

ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರು, ಸಂಬಂಧಿಕರ ರೋಧನ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರು, ಸಂಬಂಧಿಕರ ರೋಧನ

December 16, 2018

ಮೈಸೂರು: ಸುಳವಾಡಿ ಘಟನೆಯಿಂದ ಅಸ್ವಸ್ಥ ರಾದವರಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ನಿರತರಾಗಿರು ವುದರಿಂದ 2ನೇ ದಿನವಾದ ಇಂದೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಒಳ ಹಾಗೂ ಹೊರ ರೋಗಿಗಳಿಗೆ ತೊಂದರೆಯಾಯಿತು. ಏಕ ಕಾಲದಲ್ಲಿ ಸುಮಾರು 100ಕ್ಕೂ ಹೆಚ್ಚು ಅಸ್ವಸ್ಥರು ಬಂದ ಕಾರಣ ಅವರಿಗೆ ತುರ್ತು ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿರುವುದರಿಂದ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ (ಕಲ್ಲು ಕಟ್ಟಡ), ಐಪಿಡಿ-ಓಪಿಡಿ ಬ್ಲಾಕ್ (ಜಯದೇವ ಹೃದ್ರೋಗವಿದ್ದ ಕಟ್ಟಡ), ಕಿವಿ-ಮೂಗು-ಗಂಟಲು ವಿಭಾಗಗಳಲ್ಲಿ ಒಳ ರೋಗಿಗಳಾಗಿರುವವರನ್ನು ನೋಡಿ ಕೊಳ್ಳಲು ನರ್ಸ್‍ಗಳಾಗಲೀ, ರೌಂಡ್ಸ್ ಮಾಡುವ ವೈದ್ಯರುಗಳಿಲ್ಲದೇ…

Translate »