ನಿವೃತ್ತ ನೌಕರರ ಸಂಘದ 11ನೇ ವಾರ್ಷಿಕೋತ್ಸವ: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯ

ಚಾಮರಾಜನಗರ:  ‘ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು 6ನೇ ವೇತನ ಆಯೋಗದ ಶಿಫಾರಸುಗಳನ್ನು ನಿವೃತ್ತ ನೌಕರ ರಿಗೂ ಯಥಾವತ್ ಜಾರಿ ಗೊಳಿಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಬೋಬಡೆ ಒತ್ತಾಯಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ನಡೆದ 11ನೇ ವಾರ್ಷಿಕೋತ್ಸವ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಮುಖ್ಯಮಂತ್ರಿಯವರು ನಿವೃತ್ತ ನೌಕರರಿಗೆ 6ನೇ ವೇತನ ಆಯೋಗದ ಮೊದಲನೇ ವರದಿಯನ್ನು ಸಂಪೂರ್ಣ ಜಾರಿಗೊಳಿಸುವುದಾಗಿ ಭರವಸೆ ನೀಡಿ ದ್ದರು. ಆದರೆ ಭಾಗಶಃ ಜಾರಿಯಾಗಿದೆಯೇ ಹೊರತು ಸಂಪೂರ್ಣ ಜಾರಿಯಾಗಿಲ್ಲ. ಇದರಿಂದ ನಿವೃತ್ತ ನೌಕರರಿಗೆ ನ್ಯಾಯ ದೊರಕಿಲ್ಲ. ಈಗಿನ ಮುಖ್ಯಮಂತ್ರಿ ಯವರು ಜಾರಿಗೊಳಿಸಬೇಕು ಎಂದರು.
1993ರ ಜುಲೈ 1ರ ನಂತರ ನಿವೃತ್ತ ರಾದ 80 ವರ್ಷತುಂಬಿದವರಿಗೂ ಪಿಂಚಣಿ ಹೆಚ್ಚಳ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಅದನ್ನು ಜಾರಿ ಗೊಳಿಸಬೇಕು. ನಿವೃತ್ತರಿಗೂ ಸಂಜೀವಿನಿ ಯೋಜನೆಯಂತೆ ವೈದ್ಯಕೀಯ ಭತ್ಯೆ ನೀಡಬೇಕು ಎಂದು ಶಿಫಾರಸು ಮಾಡ ಲಾಗಿದೆ. ವಾಸ್ತವವಾಗಿ ಸೇವೆಯಲ್ಲಿರುವ ವರಿಗಿಂತ ನಿವೃತ್ತರಾದವರಿಗೆ ವೈದ್ಯಕೀಯ ಸೇವೆಯ ಅಗತ್ಯ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ನಿವೃತ್ತರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೆ, ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು. ನಿವೃತ್ತ ನೌಕರರ ಕುಟುಂಬದ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ 1 ಸಾವಿರ ರೂ. ನೀಡ ಬೇಕು. ನಿವೃತ್ತರ ನೆರವಿಗೆ ಸಹಾಯವಾಣಿ ಸ್ಥಾಪಿಸಬೇಕು ಎಂದು ವೇತನ ಆಯೋಗ ಶಿಫಾರಸು ಮಾಡಿದೆ ಎಂದು ತಿಳಿಸಿದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ನಾವು ಮುಖ್ಯಮಂತ್ರಿಯವರಿಗೆ ಪತ್ರ ಬರೆದರೆ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಆದ್ದರಿಂದ ಜಿಲ್ಲಾ ಸಂಘಗಳ ಪದಾಧಿ ಕಾರಿಗಳು ನಿಯೋಗ ತೆರಳಿ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ವರದಿ ಜಾರಿಗಾಗಿ ಒತ್ತಾಯಿಸೋಣ ಎಂದು ಹೇಳಿದರು.

2017ರ ಕೇಂದ್ರ ಅಧಿನಿಯಮ ಕುರಿ ತಂತೆ ಮಕ್ಕಳು, ಮೊಮ್ಮಕ್ಕಳಿಗೆ ಆಸ್ತಿ ದಾನ ಮಾಡಿದ ಬಳಿಕ ಅವರು ಮನೆಯಿಂದ ಹೊರ ಹಾಕಿದರೆ, ಅದನ್ನು ಮತ್ತೆ ವಾಪಸ್ ಕೊಡಿಸುವ ನಿರ್ವಹಣಾ ಕಾಯ್ದೆಯನ್ನು ನಿವೃತ್ತರಿಗೂ ಜಾರಿಗೊಳಿಸಬೇಕು. ನಿವೃತ್ತ ರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು. ನಿವೃತ್ತ ಸಂಸದರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ. ಸರ್ಕಾರಿ ನೌಕರರಿಗೆ ಇಲ್ಲದಂತಾಗಿದೆ. ಜನೌಷಧಿ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಔಷಧಿ ದೊರೆಯುತ್ತಿದೆ. ಆದರೆ ಅಲ್ಲಿ ಎಲ್ಲ ಔಷಧಿಗಳೂ ದೊರಕುತ್ತಿಲ್ಲ. ಹಾಗಾಗಿ ಎಲ್ಲ ಔಷಧಿಗಳೂ ಅಲ್ಲಿ ದೊರಕುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತುಮಕೂರು ಸಂಘದ ಕಾರ್ಯದರ್ಶಿ ನಾಗಪ್ಪ ಮಾತನಾಡಿ, ನಿವೃತ್ತ ನೌಕರರು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಏಕಾಂಗಿ ಯಾಗಿ ಇರಬೇಡಿ. ದುಶ್ಚಟಗಳನ್ನು ಬೆಳೆಸಿ ಕೊಳ್ಳಬೇಡಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗೇಶ್ ಮಾತನಾಡಿ, ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ

ಜಿಲ್ಲಾ ಶಾಖೆಯಲ್ಲಿ ಸದಸ್ಯತ್ವ ಪಡೆದು ಸಂಘವನ್ನು ಬಲವರ್ಧನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆಯಲ್ಲಿ 962 ಮಂದಿ ನೋಂದಾಯಿತ ಸದಸ್ಯರುಗಳಿದ್ದು, ಅವರಿಂದ ತಲಾ ಸದಸ್ಯತ್ವ ಶುಲ್ಕ 250 ರೂ. ಪಡೆಯಲಾಗಿದ್ದು, ಒಟ್ಟು ಸಂಘದಲ್ಲಿ 2.40 ಲಕ್ಷ ರೂ. ಇದ್ದು ಅದರಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದ ಕಾರಣ ಸಂಘದ ಕಚೇರಿಯನ್ನು ಸ್ಥಾಪನೆಗಾಗಿ 1.5 ಲಕ್ಷ ರೂ. ವೆಚ್ಚದಲ್ಲಿ ಒಂದು ಕೊಠಡಿಯನ್ನು ಭೋಗ್ಯ ಮಾಡಲಾಗಿದೆ. ಪ್ರತಿದಿನ ಸಂಘದ ಕಚೇರಿಯನ್ನು ಬೆಳಿಗ್ಗೆ 11 ರಿಂದ 2 ಗಂಟೆಯವರಗೆ ತೆರೆದು ಸದಸ್ಯರ ಸೇವೆ ಮಾಡಲಾಗುತ್ತದೆ ಎಂದರು.

ಸಂಘದ ಸದಸ್ಯರ ಪಿಂಚಣಿ ವಿಚಾರ ದಲ್ಲಿ ಎಲ್ಲಾ ಬ್ಯಾಂಕ್‍ಗಳಿಗೂ ಭೇಟಿ ನೀಡಿ ವ್ಯವಸ್ಥಾಪಕರ ಜತೆಯಲ್ಲಿ ಚರ್ಚೆ ಮಾಡಿ ಯಾವುದೇ ತೊಂದರೆ ಇಲ್ಲದಂತೆ ಮಾಡಲಾಗಿದೆ. ಸಂಘದ ನಿರ್ದೇಶಕರು, ಸದಸ್ಯರ ಸಹಕಾರದಲ್ಲಿ ಸಂಘದ ಕಾರ್ಯ ಕ್ರಮಗಳನ್ನು ಯಶ್ವಸಿಯಾಗಿ ಮಾಡಿ ಕೊಂಡು ಬರಲಾಗಿದೆ. ನಿಮ್ಮ ಸಹಕಾರ ಇದ್ದರೆ ಔದರ್ಯ ನಿಧಿಯನ್ನು ಸ್ಥಾಪನೆ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ 80 ವರ್ಷ ತುಂಬಿದ ನಿವೃತ್ತ ನೌಕರರಾದ ಮುತ್ತಣ್ಣ, ಕೆ.ಸಿ. ಶ್ರೀಕಂಠಾರಾಧ್ಯ, ಪುಟ್ಟಶೇಖರಮೂರ್ತಿ, ಭುಜಂಗಯ್ಯ, ಮಲ್ಲಯ್ಯ, ಮಾಧು ಸೇರಿ ದಂತೆ ಸಂಘದ ಹಿರಿಯ 19 ಮಂದಿ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಅಗಲಿದ ಸಂಘದ ಸದಸ್ಯ ರುಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತುಮಕೂರು ಜಿಲ್ಲಾ ಉಪಾಧ್ಯಕ್ಷ ರಂಗಪ್ಪ, ಪ್ರಧಾನ ಕಾರ್ಯ ದರ್ಶಿ ಆನಂತರಾಮಯ್ಯ, ಸಾಹಿತಿ ನಾಗಪ್ಪ, ಮಂಡ್ಯ ಜಿಲ್ಲಾಧ್ಯಕ್ಷ ಬಿ.ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಅಪ್ಪಾಜಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ನಾಗ ರಾಜಪ್ಪ, ಯಳಂದೂರು ತಾಲೂಕು ಅಧ್ಯಕ್ಷ ವೈ.ಎನ್. ನಾಗರಾಜಪ್ಪ, ಜಿಲ್ಲಾ ಉಪಾಧ್ಯಕ್ಷ ಹೊನ್ನೂರಯ್ಯ, ಖಜಾಂಚಿ ಎಂ.ಶಿವಣ್ಣ, ಕಾರ್ಯದರ್ಶಿ ರಾಜು, ಲೆಕ್ಕಪರಿಶೋಧಕ ಬಿ.ರಾಮು, ಜಂಟಿ ಕಾರ್ಯದರ್ಶಿ ಕೆ.ಆರ್. ಲಕ್ಷ್ಮೀನಾರಾಯಣ, ಸಂಘಟನಾ ಕಾರ್ಯ ದರ್ಶಿ ಎ.ಸಿದ್ದಯ್ಯ, ನಿರ್ದೇಶಕರಾದ ಕೆ. ಮಹದೇವಯ್ಯ, ಬಿ.ಕೃಷ್ಣಸ್ವಾಮಿನಾಯಕ, ಎಂ.ಎ.ಶ್ರೀಕಂಠಯ್ಯ, ಕೆ.ಸಿ.ಮರಿಸ್ವಾಮಿ, ಎ.ಎನ್.ಪದ್ಮಾಕ್ಷಿ, ಚಂದ್ರಶೇಖರ್, ಆನಂದ ಚಾರ್, ರಾಜಗೋಪಾಲ್, ಸುಂದರ್, ಸಿ.ಎಸ್. ಜಗದೀಶ್ ಇತರರು ಹಾಜರಿದ್ದರು.