51ಅಡಿ ಎತ್ತರದ ಬೃಹತ್ ಶ್ರೀ ಆಂಜನೇಯಮೂರ್ತಿ ಲೋಕಾರ್ಪಣೆ ಗುಡಿ, ಗೋಪುರ ಭಾರತೀಯ ಸಂಸ್ಕøತಿ, ಪರಂಪರೆಯ ಪ್ರತೀಕ

ಕೆ.ಆರ್.ಪೇಟೆ: ಗುಡಿ-ಗೋಪುರ ಗಳು ನಮ್ಮ ಭಾರತೀಯ ಸಂಸ್ಕøತಿ ಹಾಗೂ ಪರಂಪರೆಯ ಪ್ರತೀಕವಾಗಿವೆ. ಹೀಗಾಗಿ ಅವುಗಳ ರಕ್ಷಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್ ತಿಳಿಸಿದರು.

ಪಟ್ಟಣದ ಕೆರೆ ಬೀದಿಯಲ್ಲಿರುವ ಮೂಡಲ ಆಂಜನೇಯಸ್ವಾಮಿ ದೇವಾಲಯದ ಆವ ರಣದಲ್ಲಿ ಶ್ರೀಕಾರ್ಯ ಸಿದ್ಧಿ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಸುಮಾರು 30ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 51 ಅಡಿ ಎತ್ತರದ ಬೃಹತ್ ಶ್ರೀ ಆಂಜನೇಯ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಂಜನೇಯಸ್ವಾಮಿಗೆ ಪೂರ್ಣಕುಂಭ ಕಳಸದಲ್ಲಿ ಅಭಿಷೇಕ ಮತ್ತು ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಮನುಷ್ಯನಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಬಹುದು. ಆದರೆ ಶಾಂತಿ ಹಾಗೂ ನೆಮ್ಮದಿಯನ್ನು ಯಾವುದೇ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಧಾರ್ಮಿಕ ಕಾರ್ಯ ಗಳು ಹಾಗೂ ದಾನ ಧರ್ಮಗಳಿಂದ ಮಾತ್ರ ಮನಸ್ಸಿಗೆ ಶಾಂತಿ-ನೆಮ್ಮದಿ ಪಡೆಯಲು ಸಾಧ್ಯ. ಮನಸ್ಸಿಗೆ ಬೇಕಾದ ಶಾಂತಿ-ನೆಮ್ಮದಿ ಯನ್ನು ದೇವಾಲಯಗಳಲ್ಲಿ ದೇವರ ದರ್ಶನ ಮಾಡುವ ಮೂಲಕ ಪಡೆಯ ಬಹುದಾಗಿದ್ದು, ನಾವೆಲ್ಲರೂ ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ದೇವಾಲಯಗಳನ್ನು ರಕ್ಷಿಸಬೇಕಾದ ಅಗತ್ಯವಿದೆ. ನೂತನ ದೇವಾಲಯ ನಿರ್ಮಿಸುವವರಿಗೆ ಪೂರ್ಣ ಸಹಕಾರ ನೀಡುವ ಮೂಲಕ ಒಳ್ಳೆಯ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಪಟ್ಟಣದ ಕಾರ್ಯ ಸಿದ್ಧಿ ಆಂಜನೇಯ ಟ್ರಸ್ಟ್ ಪದಾಧಿಕಾರಿಗಳು ಸುಮಾರು 30ಲಕ್ಷ ರೂ. ವೆಚ್ಚದಲ್ಲಿ 51ಅಡಿ ಎತ್ತರದ ಬೃಹತ್ ಆಂಜನೇಯಸ್ವಾಮಿ ಮೂರ್ತಿಯನ್ನು ನಿರ್ಮಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅಲ್ಲದೆ ಸುಮಾರು 3 ದಿನಗಳ ಕಾಲ ನಿರಂತರವಾಗಿ ಧಾರ್ಮಿಕ ಕಾರ್ಯ ಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮೂರ್ತಿಯನ್ನು ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ. ಇದರಿಂದ ಪಟ್ಟಣದ ಪ್ರವೇಶ ದ್ವಾರದಲ್ಲಿರುವ ಆಂಜನೇಯಸ್ವಾಮಿ ದರ್ಶನದಿಂದ ತಾಲೂಕಿನ ಜನತೆ ಶಾಂತಿ-ನೆಮ್ಮದಿ ಪಡೆಯಲು ಸಾಧ್ಯ ವಾಗುತ್ತದೆ. ಇಂತಹ ಪುಣ್ಯ ಕಾರ್ಯಕ್ಕೆ ಶ್ರಮಿಸಿದ ಕಾರ್ಯ ಸಿದ್ಧಿ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳನ್ನು ತಾಲೂಕು ಮುಜ ರಾಯಿ ಅಧಿಕಾರಿಯಾಗಿ ವಿಶೇಷವಾಗಿ ಅಭಿನಂದಿಸುವುದಾಗಿ ತಹಶೀಲ್ದಾರ್ ಹಿರೇಮಠ್ ತಿಳಿಸಿದರು.

ವಿಶೇಷ ಪೂಜೆ ನಂತರ ಅನ್ನದಾನದಲ್ಲಿ ಭಾಗವಹಿಸಿದ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್, ಸಾರ್ವಜನಿಕರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ತಮ್ಮ ಸರಳ ವ್ಯಕ್ತಿತ್ವವನ್ನು ಪ್ರದರ್ಶಿಸಿದರು. ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆವ ದಾನಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು 3 ದಿನಗಳ ಕಾಲ ನಡೆದವು. ಭಾನುವಾರ ಮುಂಜಾನೆ 5.30 ರಲ್ಲಿ ಶ್ರೀ ಆಂಜನೇಯ ಮೂರ್ತಿಯನ್ನು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ನಾರಾಯಣ ಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ನಾಗಮಂಗಲ ಡಿವೈಎಸ್‍ಪಿ ಮುದವಿ, ಆರ್‍ಐ ಚಂದ್ರಕಲಾ, ಸಿಪಿಐ ಹೆಚ್.ಬಿ.ವೆಂಕಟೇಶಯ್ಯ, ಎಸ್‍ಐಗಳಾದ ಹೆಚ್.ಎಸ್.ವೆಂಕಟೇಶ್, ಕೆ.ಎನ್.ಗಿರೀಶ್, ಸೇರಿದಂತೆ ವಿವಿಧ ಗಣ್ಯರು ಹಾಗೂ ಶ್ರೀ ಕಾರ್ಯ ಸಿದ್ಧಿ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್‍ನ ಎಲ್ಲಾ ಪದಾಧಿಕಾರಿಗಳು ಆಂಜ ನೇಯಸ್ವಾಮಿ ಲೋಕಾರ್ಪಣಾ ಸಮಾ ರಂಭದಲ್ಲಿ ಭಾಗವಹಿಸಿದ್ದರು. 3 ದಿನಗಳ ಕಾಲ ನಡೆದ ಧಾರ್ಮಿಕ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.