ಮೈತ್ರಿ ಸರ್ಕಾರದಿಂದ ಪಕ್ಷಗಳಿಗಿಂತ ಜನರಿಗೆ ಆಗುವ ಲಾಭ ಮುಖ್ಯ: ಎಚ್.ವಿಶ್ವನಾಥ್

ಕೋಲಾರ: ಪದೇಪದೆ ಚುನಾವಣೆಗೆ ಹೋಗಿ ಜನರ ತೆರಿಗೆ ಹಣ ಪೆÇೀಲು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. ಕೋಲಾರ ದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಏನು ಲಾಭವಾಯಿತು ಎಂಬುದು ಮುಖ್ಯವಲ್ಲ, ಜನರಿಗೆ ಏನು ಲಾಭವಾಗಿದೆ ಎಂಬುದು ಬಹಳ ಮುಖ್ಯವಾಗಿದೆ ಎಂದರು. ಮುಖ್ಯಮಂತ್ರಿ ಕುಮಾರ ಸ್ವಾಮಿ ಹಲವು ಜನ ಕಲ್ಯಾಣ ಕಾರ್ಯಕ್ರಮ ಜಾರಿಗೆ ತರುತ್ತಿರುವಾಗ ಅದನ್ನು ಎರಡೂ ಪಕ್ಷಗಳು ಸೇರಿ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಸದ್ಯ ಸರ್ಕಾರವನ್ನು ಉಳಿಸಿಕೊಳ್ಳುವುದು, ಬಿಡುವುದರ ಬಗ್ಗೆ ಕಾಂಗ್ರೆಸ್ ನಾಯಕರು ಆಲೋಚನೆ ಮಾಡಬೇಕು, ಮೈತ್ರಿ ಪಕ್ಷಗಳಲ್ಲಿ ಗೊಂದಲ ಸಹಜ, ಅದನ್ನು ನಿವಾರಣೆ ಮಾಡಿಕೊಂಡು ಹೋಗಬೇಕು, ಹಿಂದೆ ಯುಪಿಎ ಅವಧಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರು 23 ಪಕ್ಷಗಳ ನಾಯಕರನ್ನು ಹೊಂದಾಣಿಕೆ ಮಾಡಿ ಆಡಳಿತ ಮಾಡಿದ್ದರು. ಇಲ್ಲಿ ಕೇವಲ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ಕೊಡುವುದಕ್ಕೆ ಇರುವ ಅಡ್ಡಿ ನಿವಾರಣೆ ಮಾಡುವುದು ಬಹಳ ಮುಖ್ಯ ಎಂದು ಹೇಳಿದರು.