ಶಾಸಕ ರಾಮದಾಸ್‍ರಿಂದ ಮುಂದುವರೆದ ಸ್ವಚ್ಛತಾ ಅಭಿಯಾನ

ಮೈಸೂರು: ಸ್ವಚ್ಛ ಭಾರತ್ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಮೈಸೂ ರಿನ 49ನೇ ವಾರ್ಡ್ ವ್ಯಾಪ್ತಿಯ ಹಲವು ಪ್ರದೇಶ ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಅಗ್ರಹಾರ ವೃತ್ತ, ವಾಣಿವಿಲಾಸ ಮಾರುಕಟ್ಟೆ, ಮಧ್ವಾಚಾರ್ ರಸ್ತೆ, ನಂಜುಳಿಗೆ ಸುತ್ತಮುತ್ತ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಸ್ವಚ್ಛತಾ ಕಾರ್ಯದ ಜೊತೆಗೆ ಅಲ್ಲಿನ ನಿವಾಸಿ ಗಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿ ಸುವ ಪ್ರಯತ್ನ ನಡೆಸಿದರು. ಸಾರ್ವಜನಿಕರು ಮನೆಗಳಲ್ಲಿಯೇ ಹಸಿ ಕಸ, ಒಣ ಕಸ ವಿಂಗ ಡಿಸಿ ಅಲ್ಲಲ್ಲಿ ಇಟ್ಟಿರುವ ಕಸದ ಡಬ್ಬಗಳ ಲ್ಲಿಯೇ ಹಾಕುವ ಮೂಲಕ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮನವರಿಕೆ ಮಾಡಿ ಕೊಟ್ಟರು. ಈ ಸಂದರ್ಭದಲ್ಲಿ ಅಲ್ಲಲ್ಲಿ ಅಂಗಡಿ ಮಳಿಗೆಗಳ ಬಳಿ ಬಿದ್ದಿದ್ದ ಕಸವನ್ನು ಕಂಡ ಶಾಸಕರು, ಈ ಕುರಿತು ಅಂತಹವರಿಗೆ ನೋಟಿಸ್ ನೀಡುವ ಮೂಲಕ ಅವರಲ್ಲಿ ತಿಳುವಳಿಕೆ ಮೂಡಿಸುವಂತೆ ನಗರಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಅಗ್ರಹಾರ ವೃತ್ತದ ವಾಣಿ ವಿಲಾಸ ಮಾರು ಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಸ ಹರಡಿರುವುದನ್ನು ಗಮನಿಸಿ, ಪಾಲಿಕೆ ಸಿಬ್ಬಂದಿ ಇಲ್ಲಿನ ಕಸವನ್ನು ಕೊಂಡೊಯ್ಯ ದಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರು. ಕೂಡಲೇ ಪ್ರತಿನಿತ್ಯ ಕಸ ಸಂಗ್ರಹಣೆ ವ್ಯವಸ್ಥೆ ಮಾಡಬೇಕು. ಮಳಿಗೆದಾರಿಂದ ಇದಕ್ಕೆಂದೇ ಪ್ರತ್ಯೇಕ ಹಣ ಸಂಗ್ರಹಿಸಿ, ಇಲ್ಲಿನ ಸ್ವಚ್ಛತೆಗೆ ಗಮನ ನೀಡುವಂತೆ ಸೂಚಿಸಿದರು.

ಮಧ್ವಾಚಾರ್ ರಸ್ತೆಯಲ್ಲಿ ನಂಜುಮಳಿಗೆ ವರೆಗೆ ಎರಡು ಬದಿಯ ಫುಟ್‍ಪಾತ್‍ನಲ್ಲಿ ತಳ್ಳುಗಾಡಿಯಲ್ಲಿ ಮಾಂಸದ ಅಂಗಡಿ, ಮೀನು ಮಾರಾಟ, ಫಾಸ್ಟ್ ಫುಡ್, ಟೀ ಹೋಟೆಲ್, ಇನ್ನಿತರ ತಳ್ಳುಗಾಡಿಗಳು ಫುಟ್‍ಪಾತ್ ಅತಿ ಕ್ರಮಿಸಿ, ಸಾರ್ವಜನಿಕರಿಗೆ ತೊಂದರೆಯಾಗಿ ರುವ ಬಗ್ಗೆ ಇರುವ ದೂರುಗಳನ್ನು ಖುದ್ದು ಪರಿಶೀಲಿಸಿದ ಶಾಸಕರು, ಕೂಡಲೇ ಫುಟ್ ಪಾತ್ ತಳ್ಳುಗಾಡಿಗಳನ್ನು ತೆರವುಗೊಳಿಸಿ, ಪಾದ ಚಾರಿಗಳು ಸುಗಮವಾಗಿ ಓಡಾಡಲು ಅನುವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ವಚ್ಛತಾ ಕಾರ್ಯದಲ್ಲಿ ಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ವಲಯ ಆಯುಕ್ತ ಸುನೀಲ್ ಬಾಬು, ಸೋಮಶೇಖರ್, ಆರೋ ಗ್ಯಾಧಿಕಾರಿ ಡಾ.ನಾಗರಾಜ್, ಆರೋಗ್ಯ ಪರಿ ವೀಕ್ಷಕರು ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಪ್ರಮುಖರು, ಪೌರ ಕಾರ್ಮಿಕರು, ಸಾರ್ವಜನಿಕರು ಭಾಗವಹಿಸಿದ್ದರು.