ಚಿಕ್ಕಬಳ್ಳಾಪುರ, ಜು.12- ಸಮ್ಮಿಶ್ರ ಸರ್ಕಾರಕ್ಕೆ ಅತೃಪ್ತತೆಯ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ. ನಾವು ಬೆಂಕಿ ಹಾರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿ ದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಎಂದೂ ರೆಸಾರ್ಟಿಗೆ ಹೋದವನಲ್ಲ, ಹಾಗಾಗಿ ರೆಸಾರ್ಟಿಗೆ ಹೋಗಲ್ಲ. ನಾನು ನನ್ನ ಊರು ಬೆಳ ಗಾವಿಗೆ ತೆರಳುತ್ತಿದ್ದೇನೆ ಎಂದರು. ಅತೃಪ್ತ ಶಾಸಕರು ಯಾರೂ ಬಿಜೆಪಿಯವರಲ್ಲ. ಕಾಂಗ್ರೆಸ್-ಜೆಡಿಎಸ್‍ನ ನಮ್ಮ ಅರ್ಧಕ್ಕೂ ಹೆಚ್ಚು ಶಾಸಕರು ವಾಪಸ್ ಬರುತ್ತಾರೆ. ಸಿಎಂ ಸಹ ಸಚಿವ ಸಂಪುಟ ಸಭೆಯಲ್ಲಿ ಅಭಯ ನೀಡಿದ್ದಾರೆ. ನೀವು ಯಾರೂ ಹೆದರಬೇಡಿ ಎಂದು ಮುಖ್ಯಮಂತ್ರಿ ನಮಗೆ ಆಭಯ ನೀಡಿದ್ದಾರೆ ಎಂದರು.