ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರಿಗೆ ಮೈಸೂರಿನ ಕ್ರಿಶ್ಚಿಯನ್ ಸಂಘಟನೆಗಳ ಶ್ರದ್ಧಾಂಜಲಿ

ಮೈಸೂರು: ಶ್ರೀಲಂಕಾ ದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕರುಣಿಸಿ, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ ಮೈಸೂರು ಬಿಷಪ್ ಹಾಗೂ ಯುಸಿಎಫ್ ಮೈಸೂರು ವಲಯ ಅಧ್ಯಕ್ಷ ರೆವರೆಂಡ್ ಫಾದರ್ ಕೆ.ಎಂ. ವಿಲಿಯಂ, ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಮನ್ನಿಸಿ ಅವರ ಮನಪರಿವರ್ತನೆ ಮಾಡು ವಂತೆಯೂ ದೇವರಲ್ಲಿ ಪ್ರಾರ್ಥಿಸಿದರು.

ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್) ಮೈಸೂರು ವಲಯದ ವತಿಯಿಂದ ಮೈಸೂರಿನ ಸಂತ ಫಿಲೋ ಮಿನಾ ಚರ್ಚ್‍ನಲ್ಲಿ ಬುಧವಾರ ಶ್ರೀಲಂಕಾ ದಲ್ಲಿ ಬಾಂಬ್ ಸ್ಫೋಟದಿಂದ ಮೃತಪಟ್ಟವ ರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಯಲ್ಲಿ ಅವರು ಮಾತನಾಡಿದರು.

ಶ್ರೀಲಂಕಾ ರಾಜಧಾನಿ ಕೊಲಂಬೋ ದಲ್ಲಿ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟದಿಂದ ಈಸ್ಟರ್ ಸಂಡೆ ಹಿನ್ನೆಲೆಯಲ್ಲಿ ಪ್ರಾರ್ಥನೆಯಲ್ಲಿ ಮಗ್ನ ರಾಗಿದ್ದ ಮುಗ್ಧರು ಬಲಿಯಾಗಿದ್ದಾರೆ. ಅಮಾ ಯಕರು ಗಾಯಗೊಂಡು ನರಳುವಂತಾ ಗಿದೆ. ಈ ಪರಿಯ ದ್ವೇಷವೇಕೆಂದು ಅರ್ಥ ವಾಗುತ್ತಿಲ್ಲ ಎಂದು ನೊಂದು ನುಡಿದರು.

ಇಡೀ ವಿಶ್ವವೇ ಒಂದು ದೊಡ್ಡ ಕುಟುಂಬ ಎಂದು ಹೇಳುತ್ತೇವೆ. ಅಂತಹ ಕುಟುಂಬದೊಳಗೆ ಪರಸ್ಪರ ಈ ರೀತಿಯ ದ್ವೇಷ ಸಾಧನೆಗೆ ಮಾನವ ಬಂದು ನಿಂತಿ ರುವುದು ದುರ್ದೈವ. ಶ್ರೀಲಂಕಾದ ಬಾಂಬ್ ದಾಳಿ ಸಂಬಂಧ ಕೆಲ ಮಾಧ್ಯಮ ವರದಿ ಗಳಲ್ಲಿ `ಧಾರ್ಮಿಕ ಭಯೋತ್ಪಾದನೆ’ ಪದ ಬಳಕೆಯಾಗಿದೆ. ಆದರೆ ಧಾರ್ಮಿಕತೆ ಹಾಗೂ ಭಯೋತ್ಪಾದನೆ ನಡುವೆ ಸಂಬಂಧ ಬರಲು ಸಾಧ್ಯವಿಲ್ಲ. ಇವೆರಡೂ ಒಂದಕ್ಕೊಂದು ಅಂಟಿಕೊಳ್ಳಲಾಗದು.

ಕಾರಣ ಯಾವುದೇ ಧರ್ಮವು ಹಿಂಸೆ ಬೋಧಿಸಿಲ್ಲ. ಹೀಗಾಗಿ ಯಾವುದೇ ಧಾರ್ಮಿಕ ವ್ಯಕ್ತಿಯಲ್ಲಿ ಹಿಂಸೆಯ ಆಲೋಚನೆ ಮೂಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಮಾನವರಾದ ನಾವು ಪರಸ್ಪರ ಸೌಹಾ ರ್ದತೆ ಬೆಳೆಸಿಕೊಳ್ಳಬೇಕು. ಪ್ರೀತಿಸಿ, ಕ್ಷಮಿಸಿ ಹಾಗೂ ಪ್ರಾರ್ಥಿಸಿ ಎಂಬ ಯೇಸುವಿನ ಸಂದೇಶ ನಮ್ಮಲ್ಲಿ ಜಾಗೃತಗೊಳ್ಳಬೇಕು. ನಮ್ಮನ್ನು ಧಿಕ್ಕರಿಸುವವರನ್ನೂ ಪ್ರೀತಿಸ ಬೇಕೆಂದು ಯೇಸುಸ್ವಾಮಿ ಹೇಳುತ್ತಾರೆ. ಆ ಮೂಲಕ ಅವರ ಮನಪರಿವರ್ತಿಸುವ ಸಂದೇಶ ವನ್ನು ಸಾರಿದ್ದಾರೆ. ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುವ ಜೊತೆಗೆ ಅವರ ಕುಟುಂಬದವರಿಗೆ ಆತ್ಮ ಸ್ಥೈರ್ಯ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸಬೇಕಿದೆ. ಇದರೊಂದಿಗೆ ಇಂತಹ ಹೀನಕೃತ್ಯ ನಡೆಸಿದ ದುಷ್ಕರ್ಮಿಗಳ ಮನ ಪರಿವರ್ತನೆಗೂ ನಾವು ಪ್ರಾರ್ಥಿಸೋಣ ಎಂದು ನುಡಿದರು. ಮೈಸೂರು ವಲಯದ ಎಲ್ಲಾ ಕ್ರೈಸ್ತ ಪಂಗಡಗಳ ಧರ್ಮಗುರು ಗಳು ಹಾಗೂ ಭಕ್ತರು ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಶ್ರಾಂತ ಮೈಸೂರು ಬಿಷಪ್ ಥಾಮಸ್ ಆಂತೋಣಿ ವಾಜಪಿಳೈ, ಸಿಆರ್‍ಐ ಅಧ್ಯಕ್ಷ ರೆವರೆಂಡ್ ಫಾದರ್ ಡೊಮಿನಿಕ್ ವಾಜ್, ಯುಸಿಎಫ್ ಮೈಸೂರು ವಲಯ ಉಪಾಧ್ಯಕ್ಷ ರೆವರೆಂಡ್ ದೇವಕುಮಾರ್, ರೆವರೆಂಡ್ ಸಿ.ರಾಯಪ್ಪ, ಸಿಸ್ಟರ್ ಸುಜಾತ ಮತ್ತಿತರರು ಹಾಜರಿದ್ದರು.