ಮೈಸೂರು: ಮೈಸೂರಿನ ಬನ್ನಿಮಂಟಪ ಜೋಡಿ ತೆಂಗಿನಮರ ಸ್ಮಶಾನ ರಸ್ತೆಯಲ್ಲಿ ಆಳವಾದ ಹೊಂಡ ನಿರ್ಮಾಣವಾಗಿದೆ.
ಸಿಮೆಂಟ್ ಗೋಡೌನ್ ಸಮೀಪ ಮ್ಯಾನ್‍ಹೋಲ್ ಪಕ್ಕದಲ್ಲೇ ರಸ್ತೆ ಕುಸಿದು, ಹೊಂಡ ಬಿದಿದ್ದು, ಜೀವ ಬಲಿ ಗಾಗಿ ಕಾದಿರುವಂತಿದೆ. ರೈಲ್ವೆ ಗೂಡ್ಸ್ ಶೆಡ್‍ನಿಂದ ಸರಕು ಸಾಗಿಸುವ ನೂರಾರು ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿ ಸುತ್ತವೆ. ಹೈವೇ ವೃತ್ತದ ಕಡೆಯಿಂದ ಕರಕುಶ ಲನಗರ, ಬಿ.ಎಂ.ಶ್ರೀನಗರ, ರಿಂಗ್‍ರಸ್ತೆಗೆ ಹೋಗುವ ವಾಹನಗಳೂ ಇಲ್ಲೇ ಸಾಗು ತ್ತವೆ. ನಿರಂತರವಾಗಿ ದ್ವಿಚಕ್ರ ವಾಹನ ಗಳೂ ಓಡಾಡುತ್ತಿರುತ್ತವೆ.
ರಸ್ತೆ ಕುಸಿದಿರುವುದನ್ನು ದೂರದಲ್ಲೇ ಗುರುತಿಸಲಾಗುವುದಿಲ್ಲ. ಸಾರ್ವಜನಿ ಕರು ಕಲ್ಲೊಂದನ್ನು ಹೊಂಡದ ಪಕ್ಕದಲ್ಲಿ ಇಟ್ಟಿರುವುದಷ್ಟೇ ಸೂಚನೆ. ಇಲ್ಲಿ ಬೀದಿ ದೀಪವೂ ದುರಸ್ತಿಯಲ್ಲಿರುವುದರಿಂದ ರಾತ್ರಿ ವೇಳೆ ದ್ವಿಚಕ್ರ ವಾಹನಗಳು ಗುಂಡಿಗೆ ಇಳಿಯುವ ಸಾಧ್ಯತೆ ಇದೆ. ಅಪಘಾತ ವಾಗಿ ಜೀವ ಹಾನಿಯಾಗಬಹುದು. ಲಾರಿ, ಟ್ರಕ್‍ಗಳು ಪಕ್ಕದಲ್ಲಿ ಸಾಗಿದರೆ ಮತ್ತಷ್ಟು ರಸ್ತೆ ಕುಸಿದು, ವಾಹನಗಳೇ ಹೂತುಕೊಳ್ಳ ಬಹುದು. ಕೂಡಲೇ ಇದನ್ನು ದುರಸ್ತಿ ಮಾಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.