ವೈದ್ಯನ ಎಡವಟ್ಟು: ಮಂಡಿ ನೋವಿನ ಚಿಕಿತ್ಸೆಗೆ ಬಂದ ಮಹಿಳೆ ಸಾವು

ಹಾಸನ: ಮಂಡಿ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯು ವೈದ್ಯನ ಎಡವಟ್ಟಿನಿಂದ ಸಾವನ್ನಪ್ಪಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಚನ್ನರಾಯಪಟ್ಟನ ತಾಲೂಕು ಬಾಗೂರು ಹೋಬಳಿಯ ಅಗಸರಹಳ್ಳಿಯ ನಿವಾಸಿ ರಾಧ ಮೃತಪಟ್ಟವರು. ರಾಧ ಅವರು ಎರಡು ದಿನಗಳ ಹಿಂದೆ ಮಂಡಿ ನೋವೆಂದು ವಾಯುಪುತ್ರ ಕ್ಲಿನಿಕ್‍ಗೆ ಚಿಕಿತ್ಸೆಗೆಂದು ಬಂದಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಂಪಿಗೆ ರಸ್ತೆಯಲ್ಲಿರುವ ಮಂಗಳಾ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದರು. ಅದ ರಂತೆ ಮಂಗಳಾ ಆಸ್ಪತ್ರೆಗೆ ಕುಟುಂಬ ದವರು ಸೇರಿಸಿದರು. ಮೂಳೆ ತಜ್ಞ ಡಾ. ರವಿಕುಮಾರ್ ಎಂಬುವರು ಬುಧವಾರ ಬೆಳಿಗ್ಗೆ ಒಂದು ಇಂಜೆಕ್ಷನ್ ನೀಡಿದ್ದಾರೆ. ಚುಚ್ಚುಮದ್ದು ಕೊಟ್ಟ ಕೆಲವೇ ಕ್ಷಣದಲ್ಲಿ ರಾಧ ಅವರು ಕಾಲಿನ ಸ್ವಾಧೀನ ಕಳೆದು ಕೊಂಡರು. ಈ ಬಗ್ಗೆ ಆಕೆಯ ಪತಿ ಪ್ರಶ್ನೆ ಮಾಡಿದರೇ ಮೂಳೆ ವೈದ್ಯರಾದ ರವಿ ಉಡಾಫೆ ಉತ್ತರ ಕೊಟ್ಟಿದಲ್ಲದೇ ಇನ್ನೊಂದು ಇಂಜೆಕ್ಷನ್ ನೀಡಿದರೇ ಎಲ್ಲಾ ಸರಿಯಾ ಗುತ್ತದೆ ಎಂದು ಹೇಳಿದ್ದಾರೆ. ಇದಾದ ನಂತರ ರಾಧ ಅವರಿಗೆ ಆರೋಗ್ಯದಲ್ಲಿ ಏರು ಪೇರು ಆಗಿದ್ದು, ತಕ್ಷಣ ಐಸಿಯುಗೆ ದಾಖ ಲಿಸಲಾಯಿತು. ಅಷ್ಟರಲ್ಲಿ ಮತ್ತೊಂದು ಇಂಜೆಕ್ಷನ್ ನೀಡಿದರೂ ಇದರಿಂದ ತೀವ್ರ ಅಸ್ವಸ್ಥಗೊಂಡು ರಾಧ ಸಾವನ್ನಪ್ಪಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ತಾಲೂ ಕಿನ ಕಟ್ಟಾಯ ನಿವಾಸಿ ಸರ್ವೆಯರ್ ಆಗಿದ್ದ ಧರ್ಮ ಎಂಬುವರು ನಗರದ ಜನಪ್ರಿಯ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದರು. ಇದರಿಂದ ಕುಟುಂಬ ದವರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಮತ್ತೊಂದು ಇಂತಹ ಘಟನೆ ನಡೆದಿರುವುದು ಇಲ್ಲಿನ ಸುತ್ತ ಮುತ್ತ ಜನತೆ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದಕ್ಕೆ ಭಯಪಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.