ಸಂಘಟಿತ ಹೋರಾಟದಿಂದ ಗಂಗಾಮತಸ್ಥರ ಅಭಿವೃದ್ಧಿ ಸಾಧ್ಯ

ಮಂಡ್ಯ: ಗಂಗಾಮತಸ್ಥರು ಸಾಮಾ ಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಬೇಕಾದರೆ ಸಂಘಟಿತ ಹೋರಾಟ ನಡೆಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ನಗರದ ಗಾಂಧಿ ಭವನದಲ್ಲಿ ಬುಧವಾರ ಜಿಲ್ಲಾ ಗಂಗಾಮತಸ್ಥರ ಸಂಘ ಆಯೋ ಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿಯೂ ಮೀನುಗಾರರ ಬೇಡಿಕೆ ಈಡೇರಿಲ್ಲ. ಅವರಿಗೆ ದೊರೆಯ ಬೇಕಿದ್ದ ಸೌಲಭ್ಯಗಳು ಸಿಗದೆ ಉಳ್ಳವರ ಪಾಲಾಗುತ್ತಿವೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟಿತ ಹೋರಾಟ ನಡೆಸಬೇಕು. ಆ ಮೂಲಕ ಆಳುವ ವರ್ಗದ ಕಣ್ಣು ತೆರೆಸಬೇಕು ಎಂದು ಹೇಳಿದರು.

ಕಾವೇರಿಕೊಳ್ಳ ವ್ಯಾಪ್ತಿಯ ಕೆರೆ, ಕಟ್ಟೆ ಗಳಲ್ಲಿ ಬಲಾಢ್ಯ ದಲ್ಲಾಳಿಗಳ ಮೂಲಕ ನಡೆಯುತ್ತಿದ್ದ ಮೀನುಗಾರಿಕೆಯನ್ನು ತಪ್ಪಿಸಿ, 70ವರ್ಷಗಳಿಂದ ಮೀನುಗಾರಿಕೆ ಯನ್ನೇ ನಡೆಸುತ್ತ ಬಂದಿರುವ ಗಂಗಾಮತ ಸ್ಥರ ಸಂಘಗಳಿಗೆ ನೀಡುವಲ್ಲಿ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಅವರ ಅವಧಿ ಯಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗಂಗಾಮತಸ್ಥರು ಬಹು ಸಂಖ್ಯಾತ ರಾಗಿದ್ದು, ಸಂಘಟನೆಯೊಂದಿಗೆ ಬೆರೆಯ ಬೇಕಿದೆ. ಏಕತೆಯಲ್ಲಿ ಐಕ್ಯತೆಕಾಣುವ ಮನೋಭಾವ ಮೂಡಿಸಿಕೊಂಡು ಆರ್ಥಿಕ ವಾಗಿ ಬೆಳೆಯಬೇಕಿದೆ ಎಂದರು.

ಕೆರೆಕಟ್ಟೆಗಳಲ್ಲಿ ಮೀನುಗಾರಿಕೆ ಮಾಡಲು ಮೀನುಗಾರರನ್ನೇ ನೇಮಿಸಬೇಕು. ಕೆರೆಕಟ್ಟೆಗಳನ್ನು ದತ್ತು ಪಡೆಯಲು ಗಂಗ ಮತಸ್ಥರಿಗೆ ಮೊದಲ ಆದ್ಯತೆ ನೀಡಿ ನಂತರ ಮುಂದುವರಿಯಲಿ ಎಂದು ಹೇಳಿದರು.
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಬಹುದಿನಗಳಿಂದ ಗಂಗಾಮತಸ್ಥರ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನದ ಬೇಡಿಕೆ ಇನ್ನೂ ಈಡೇರಿಲ್ಲ, ಮುಂದಿನ ದಿನಗಳಲ್ಲಿ ಸಂಬಂಧಪಟ್ಟರವ ಜೊತೆ ಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ಶ್ರಮಿ ಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮತ್ತು ಸಾಧಕರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಳವಳ್ಳಿಯ ರಾಮಾ ರೂಢಮಠದ ಶ್ರೀ ಬಸವಾನಂದಸ್ವಾಮೀಜಿ, ಸಂಘದ ರಾಜ್ಯಾಧ್ಯಕ್ಷ ಬಿ.ಮೌಲಾಲಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿಕೊಟ್ಯಾನ್, ಜಿಲ್ಲಾಧ್ಯಕ್ಷ ಎನ್.ನಂಜುಂಡಯ್ಯ, ಪ್ರಶಾಂತ್, ಶಿವ ಲಿಂಗಪ್ಪ, ಎಸ್.ರಮೇಶ್, ಶಿವಕುಮಾರಿ, ದೇವರಾಜು, ಕನ್ನಲಿ ಈರಯ್ಯ, ಗಾಯಕ ಬಸವರಾಜು ಶಿವಗಂಗಾ, ರಮೇಶ್, ಹೊನ್ನಪ್ಪ, ಪ್ರಕಾಶ್ ಹಾಜರಿದ್ದರು.