ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಅವಶ್ಯ

ಮೈಸೂರು: ದೇಶದಲ್ಲಿ ಐದು ವರ್ಷಕ್ಕೊಮ್ಮೆ ನಡೆ ಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಮೂಲಾಗ್ರ ಬದಲಾ ವಣೆ ಅವಶ್ಯ. ಕೇವಲ ಎರಡು ಪಕ್ಷಗಳ ನಡುವೆ ಚುನಾವಣೆಗಳು ನಡೆಯುವಂತಿ ರಬೇಕು ಎಂದು ಜಿಲ್ಲಾ ಹೋರಾಟಗಾರ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಜಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಹಾಗೂ ಕೆ.ಆರ್.ನಗರದ ಡಾ.ಕೆ.ಎಸ್. ಗೌಡಯ್ಯ ಪ್ರತಿಷ್ಠಾನದ ವತಿಯಿಂದ ಆಯೋಜಿ ಸಿದ್ದ ಮರೆಯಲಾಗದ ಮಹನೀಯರು ಶೀರ್ಷಿಕೆಯಡಿ `ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ ತಗಡೂರು ರಾಮಚಂದ್ರ ರಾಯರು- ಒಂದು ನೆನಪು’ ಕುರಿತು ಅವರು ಮಾತನಾಡಿದರು.
ದೇಶದಲ್ಲಿ 2 ಸಾವಿರಕ್ಕೂ ಅಧಿಕ ಪಕ್ಷ ಗಳು ನೋಂದಣಿಯಾಗಿವೆ. ಇದರಲ್ಲಿ ಕೆಲವು ಪಕ್ಷಗಳು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿವೆ. ಜಾತಿಗೊಂದು ಪಕ್ಷ ಕಟ್ಟುತ್ತಾ ಹೋದರೆ, ಯುವಕರಲ್ಲಿ ರಾಷ್ಟ್ರೀಯ ಜಾಗೃತಿ ಉಳಿಯಲು ಸಾಧ್ಯವೇ?. 1947ರ ಸ್ವಾತಂತ್ರ್ಯ ಹೋರಾಟ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಬ್ರಿಟಿಷರ ವಿರುದ್ಧ ಶಾಂತಿಯುತ ಹೋರಾಟ ಆರಂಭಿಸಿದರು. ಇದರ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿ ಸಿತು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರಿಗೆ ಇಂದಿನ ಸರ್ಕಾರದಲ್ಲಿ ಕನಿಷ್ಠ ಗೌರವ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಗಡೂರು ರಾಮಚಂದ್ರರಾಯರು ಗಾಂಧೀಜಿಯವರಿಂದ ಪ್ರಭಾವಿತರಾಗಿ, ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಇವರ ತ್ಯಾಗ ಬಲಿದಾನಗಳನ್ನು ಎಂದಿಗೂ ಮರೆಯುವಂತಿಲ್ಲ. ತಗಡೂರು ರಾಮ ಚಂದ್ರರಾಯರು ಸೇರಿದಂತೆ ಹಲವು ರಾಷ್ಟ್ರ ಪ್ರೇಮಿಗಳು `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಮೈಸೂರಿಂದ ಪಾಲ್ಗೊಂಡಿದ್ದರು. ಆದರೆ, ಇಂಥ ಮನ ಸ್ಥಿತಿ ಇಂದಿನ ಯುವಕರಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಲಕ್ಷಾಂತರ ಜನರ ಬಲಿದಾನವಾಗಿದೆ. ಅವರೆಲ್ಲಾ ಈ ರಾಷ್ಟ್ರ ನಮ್ಮದು ಎಂಬ ಕಲ್ಪನೆಯನ್ನು ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯ ನಂತರ ನಾವೇ ಆಡಳಿತ ನಡೆಸುತ್ತಿದ್ದರೂ ರಾಜಕೀಯ ಪಕ್ಷಗಳ ನೇತಾರರು ಬೃಹತ್ ಪ್ರಜಾಪ್ರಭುತ್ವ ವನ್ನು ತಮ್ಮದೇ ಖಾಸಗಿ ಆಸ್ತಿ ಎಂಬಂತೆ ಬಳಸಿಕೊಳ್ಳಲು ಯತ್ನಿಸುತ್ತಿರುವುದು ಪ್ರಜಾ ಪ್ರಭುತ್ವದ ಅಣಕ ಎಂದು ಬೇಸರ ವ್ಯಕ್ತಪಡಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ, ದೇಶದ ಎಲ್ಲಾ ಬಡ ವರಿಗೂ 6 ಸಾವಿರ ರೂ.ನಂತೆ ವರ್ಷಕ್ಕೆ 72 ಸಾವಿರ ರೂ. ನೀಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ. ಈ ಹಣವನ್ನು ಯಾವ ರೀತಿ ಭರಿಸುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದರೆ, ಅಂಬಾನಿ, ಅದಾನಿ ಸಹೋದರರಂಥ ದೊಡ್ಡ ಉದ್ಯಮಿಗಳಿಂದ ವಸೂಲಿ ಮಾಡಿ ನೀಡುತ್ತೇವೆ ಎಂದು ಹೇಳುತ್ತಾರೆ. ಇದು ಸಾಧ್ಯವೇ? ಮೇಲಾಗಿ, ದೊಡ್ಡ ಉದ್ಯಮಿದಾರರು ಅಷ್ಟೊಂದು ತೆರಿಗೆ ಉಳಿಸಿಕೊಳ್ಳಲು ದಡ್ಡರೇ? ಈ ಕನಿಷ್ಠ ಜ್ಞಾನವೂ ಇಲ್ಲದಂತೆ ಸಾರ್ವಜನಿಕ ಭಾಷಣ ದಲ್ಲಿ ಪೊಳ್ಳು ಭರವಸೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಆದ್ದರಿಂದ ಈಗಿನ ರಾಜಕಾರಣವನ್ನು ನೋಡಿದರೆ, ಲೋಕಸಭಾ-ವಿಧಾನಸಭೆಗೆ ನಡೆಯುವ ಚುನಾವಣಾ ಪದ್ಧತಿಗೆ ಅಮೂಲಾಗ್ರ ಬದಲಾವಣೆ ತರಬೇಕು. ದೇಶದಲ್ಲಿ ಎರಡು ಪಕ್ಷಗಳ ನಡುವೆ ಹಣಾ ಹಣಿ ಇರಬೇಕು. ಒಂದು ಪಕ್ಷ ಸೋತರೆ, ಮತ್ತೊಂದು ಪಕ್ಷ ಗೆಲ್ಲಬೇಕು. ಹಲವು ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿದ್ದರೆ ಅದು ಪ್ರಜಾಪ್ರಭುತ್ವ ಅಳಿವಿಗೆ ಹಾಗೂ ದೇಶದ ಐಕ್ಯತೆ ಭಂಗ ತರಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಗ್ರಾಪಂನಿಂದ ಲೋಕಸಭಾ ಚುನಾವಣೆವರೆಗೂ ಅಭ್ಯರ್ಥಿ ಗಳು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರದ ಬುನಾದಿಯಾಗಿದ್ದು, 1947ರ ಸ್ವಾತಂತ್ರ್ಯ ಹೋರಾಟಕ್ಕೆ ಗೌರವ ನೀಡುವುದಾದರೆ, ಮೊದಲು ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರತಿಯೊಬ್ಬರು ಬೆಲೆ ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರಾದ ಅಶ್ವತ್ಥ ನಾರಾ ಯಣ, ಪ್ರೊ.ಟಿ.ವೆಂಕಟಾಚಲಯ್ಯ, ಟಿ.ಪುಟ್ಟಣ್ಣ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ವೈ. ಡಿ.ರಾಜಣ್ಣ, ಹಿರಿಯ ಸಾಹಿತಿ ಪ್ರೊ.ಮಲೆ ಯೂರು ಗುರುಸ್ವಾಮಿ, ರಂಗಕರ್ಮಿ ನಾ.ನಾಗಚಂದ್ರ, ವಿಪ್ರ ಮುಖಂಡ ಕೆ.ರಘುರಾಂ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್, ಕಸಾಪ ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಎಂ.ಚಂದ್ರ ಶೇಖರ್, ಮೂಗೂರು ನಂಜುಂಡಸ್ವಾಮಿ, ಕೆ.ಎಸ್.ನಾಗರಾಜು ಉಪಸ್ಥಿತರಿದ್ದರು. ರಾಜಶೇಖರ್ ಕದಂಬ ಸ್ವಾಗತಿಸಿದರೆ, ಸಾಹಿತಿ ಡಾ.ಜಯಪ್ಪ ಹೊನ್ನಾಳಿ ನಿರೂಪಿ ಸಿದರು. ಸಾಂಬಮೂರ್ತಿ ಪ್ರಾರ್ಥಿಸಿದರು.