ಮೈಸೂರು,ಜ.11(ಎಸ್‍ಪಿಎನ್)-ಭಾರ ತೀಯ ಪರಂಪರೆಯಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಎಲ್ಲಾ ಸಾಹಿತಿ ಗಳು, ಚಿಂತಕರು ವೇದಿಕೆಗಳಲ್ಲಿ ಮಾತನಾ ಡುತ್ತಾರೆ. ಆದರೆ, ನಮ್ಮ ಕೊಡವ ಸಂಪ್ರ ದಾಯದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ಇದೆ. ಅದರಲ್ಲೂ ವಿಧವಾ ಮಹಿಳೆ ಯರಿಗೆ ವಿಶೇಷ ಸ್ಥಾನಮಾನವೇ ಇದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಭಿಪ್ರಾಯಪಟ್ಟರು.
ಕಲಾಮಂದಿರ ಆವರಣದ ಚಿಂತಕ ಚಾವಡಿ ಯಲ್ಲಿ ರಂಗಬಂಡಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಡಾ.ಸುಜಾತ ಅಕ್ಕಿ ರಚಿತ `ಪ್ರಜಾರಾಜ ನಾಲ್ವಡಿ ಕೃಷ್ಣರಾಜ ಒಡೆ ಯರ್’ ನಾಟಕ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧವೆ ಯವರಿಗೆ ಮದುವೆ ಶಾಸ್ತ್ರದಲ್ಲಿ ಹೆಣ್ಣು-ಗಂಡಿಗೆ ಅಕ್ಷತೆ ಹಾಕಲು ಮೊದಲ ಪ್ರಾಶಸ್ತ್ಯವಿದೆ. ಅವರಿಗೆ ಪುನರ್ ವಿವಾಹ ವಾಗಲು ಅನುಮತಿ ಇದೆ. ಇವೆಲ್ಲಾವನ್ನು ನಾವು ಪ್ರಗತಿ ಪರ ಚಿಂತನೆ ಎಂದು ಕರೆಯಬಹುದಲ್ಲವೆ? ಎಂದರು.
ಕಾವೇರಿ, ಕರ್ನಾಟಕದ ಜೀವನದಿ. ಕೊಡವರ ಕುಲದೈವವೆಂದೇ ಕಾವೇರಿ ಮಾತೆ ಯನ್ನು ಪೂಜಿಸುತ್ತಾರೆ. ನಮ್ಮ ಹಿರಿಯರ ಪ್ರಕಾರ ತುಲಾಮಾಸದಲ್ಲಿ ಕಾವೇರಿ ನದಿ ಯಲ್ಲಿ ಸ್ನಾನ ಮಾಡಿದರೆ, ಮನುಷ್ಯನ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆ ಇದೆ. ಭಾರತದ ಸಪ್ತ ಪುಣ್ಯ ನದಿ ಗಳಲ್ಲಿ ಕಾವೇರಿಯೂ ಒಂದು. ಕಾವೇರಿ ನದಿ ತಲಕಾವೇರಿಯಲ್ಲಿ ಹುಟ್ಟುವುದಕ್ಕೆ ಐತಿಹಾಸಿಕ ಘಟನೆಯೇ ಇದೆ ಎಂದು ಅಗಸ್ತ್ಯ ಮಹಾಮುನಿ ಹಾಗೂ ಕಾವೇರಿಯ ಮದುವೆ ಕಥೆ ವಿವರಿಸಿದರು.
ಕವೇರ ಮುನಿಯ ಮಗಳಾದ ಕಾವೇರಿ ಲೋಕಕಲ್ಯಾಣಕ್ಕಾಗಿ ಭೂಲೋಕದಲ್ಲಿ ಜನ್ಮ ತಾಳಿರುತ್ತಾಳೆ. ಒಮ್ಮೆ ತಮಿಳುನಾಡು ಕಡೆ ಯಿಂದ ಅಗಸ್ತ್ಯ ಮಹಾಮುನಿಯ ಕೊಡ ಗಿಗೆ ಬಂದಾಗ ಸುಂದರವಾಗಿದ್ದ ಕಾವೇರಿ ಯನ್ನು ನೋಡಿ ಮೋಹಿಸುತ್ತಾನೆ. ನಂತರ ಮದುವೆಯಾಗುವಂತೆ ಕಾವೇರಿಗೆ ದುಂಬಾಲು ಬೀಳುತ್ತಾನೆ. ಅಗಸ್ತ್ಯ ಮಹಾಮುನಿ ಉಗ್ರ ತಪಸ್ವಿಯಾದ್ದರಿಂದ ಕಾವೇರಿ ತಂದೆ ಎಲ್ಲಿ ತನ್ನ ಮಗಳು ಆತನ ಕೋಪಕ್ಕೆ ಬಲಿ ಯಾಗುತ್ತಾಳೋ ಎಂದು ಹೆದರಿ, ಮದುವೆ ಯಾಗುವಂತೆ ಕಾವೇರಿಯನ್ನು ಮನ ವೊಲಿಸುವ ಪ್ರಸಂಗವನ್ನು ವಿವರಿಸಿದರು.
ನಂತರ ಕಾವೇರಿ, ಅಗಸ್ತ್ಯಮುನಿಗೆ ತನ್ನನ್ನು ಯಾವುದೇ ಸಂದರ್ಭದಲ್ಲೂ ಒಬ್ಬಳನ್ನೇ ಬಿಟ್ಟು ಎಲ್ಲಿಗೂ ಹೋಗಬಾರದೆಂಬ ಷರತ್ತು ವಿಧಿಸಿ ಮದುವೆಗೆ ಒಪ್ಪುತ್ತಾಳೆ. ಮದುವೆ ನಂತರ ಅಗಸ್ತ್ಯ ಮುನಿ ಕಾವೇರಿಯನ್ನು ತನ್ನ ಕಮಂಡಲದೊಳಗೆ ನೀರಿನ ರೂಪದಲ್ಲಿ ಜೊತೆಯಲ್ಲಿಟ್ಟುಕೊಳ್ಳುತ್ತಾನೆ. ಸ್ವಲ್ಪ ದಿನದ ನಂತರ ಅಗಸ್ತ್ಯಮುನಿ ಕನ್ನಿಕೆ ಎಂಬ ಮತ್ತೊಂದು ಹೆಣ್ಣನ್ನು ಪ್ರೀತಿಸಿ, ಕಾವೇರಿ ಯನ್ನು ಮರೆಯುತ್ತಾನೆ. ಈ ವಿಷಯ ತಿಳಿದ ಕಾವೇರಿ ಅಗಸ್ತ್ಯಮುನಿಯ ಕಮಂ ಡಲದಿಂದ ಹೊರಗೆ ಬಂದು ನದಿಯಾಗಿ ತಲಕಾವೇರಿಯಲ್ಲಿ ಜನ್ಮತಾಳುವ ಸಂಗತಿ ಯನ್ನು ಬಿಡಿಸಿದರು. ಇದನ್ನು ಪ್ರಗತಿಪರ ಆಲೋಚನಾ ಲಹರಿಯಲ್ಲಿ ಹೇಳುವು ದಾದರೆ, ಪುರಾಣದ ಮೊದಲ ವಿಚ್ಛೇದನ ವೆಂದೇ ಹೇಳಬಹುದು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿ ತಾವಧಿಯಲ್ಲಿ ಮೈಸೂರು ಸಂಸ್ಥಾನದ ಬದಲಾವಣೆಗೆ ಶ್ರಮಿಸಿದ ಸಂಗತಿಗಳ ಕುರಿತು ಬರಹಗಾರ್ತಿ ಡಾ.ಸುಜಾತ ಅಕ್ಕಿ ತಮ್ಮ `ಪ್ರಜಾರಾಜ ನಾಲ್ವಡಿ ಕೃಷ್ಣರಾಜ ಒಡೆ ಯರ್’ ನಾಟಕದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆ ಯರ್ ಜನಪರ ಆಡಳಿತದಿಂದ ಅವರ ವಂಶಸ್ಥರಿಗೆ ಇಂದಿಗೂ ಮಹಾರಾಜ ರೆಂದೇ ಜನಮಾನಸದಲ್ಲಿರುವುದನ್ನು ಕಾಣಬಹುದಾಗಿದೆ ಎಂದರು.
ಈ ವೇಳೆ ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಎನ್.ಎಸ್.ಗೋಪಿ ನಾಥ್, ಡಾ.ಸುಜಾತ ಅಕ್ಕಿ, ನಾಟಕ ಕುರಿತು ಕುಪ್ನಳ್ಳಿ ಡಾ. ಭೈರಪ್ಪ, ಚಿಂತನ ಚಿತ್ತಾರದ ಪ್ರಕಾಶನದ ನಿಂಗರಾಜು ಚಿತ್ತಣ್ಣವರ್ ಉಪಸ್ಥಿತರಿದ್ದರು.