ಮೈಸೂರು: ಮೈಸೂರಿನ ಫೋರಂ ಮಾಲ್‍ನಲ್ಲಿ ಆ.3 ಮತ್ತು 4ರಂದು `ಫೋರಂ ಆಹಾರ ಮೇಳ’ ಆಯೋಜಿಸಲಾಗಿದೆ ಎಂದು ಮಾಲ್‍ನ ಮಾರುಕಟ್ಟೆ ವಿಭಾಗದ ಸಮಂತ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋರಂ ಮಾಲ್‍ನಲ್ಲಿ ಗ್ರಾಹಕರಿಗೆ ಒಂದೇ ಸೂರಿನಡಿ ವಿವಿಧ ಬಗೆಯ ಆಹಾರ ಪದಾರ್ಥ ಪೂರೈಸುವ ನಿಟ್ಟಿನಲ್ಲಿ ಈ ಮೇಳ ನಡೆಸಲಾಗುತ್ತಿದೆ. ಆ.3ರಂದು ಮಧ್ಯಾಹ್ನ 12ಕ್ಕೆ ಆಹಾರ ಮೇಳಕ್ಕೆ ಚಾಲನೆ ದೊರೆಯಲಿದೆ. ಮೇಳದಲ್ಲಿ ರುಚಿಕರವಾದ ತಿನಿಸುಗಳು ಲಭ್ಯವಿರುತ್ತದೆ. ಚೈನೀಸ್, ದಕ್ಷಿಣ ಮತ್ತು ಉತ್ತರ ಭೂ ಪ್ರದೇಶ ಗಳು ಹಾಗೂ ದೇಶದ ವಿವಿಧ ಬಗೆಯ ಸೀ ಫುಡ್‍ಗಳು ರಿಯಾಯಿತಿ ದರದಲ್ಲಿ ದೊರೆಯು ತ್ತದೆ. ಮೇಳದೊಂದಿಗೆ ವಿವಿಧ ಮನೋರಂಜನಾತ್ಮಕ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಳ್ಳಲು ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ವಿವರಗಳಿಗೆ ಮೊ.ಸಂ.9606080818 ಸಂಪರ್ಕಿಸಬಹುದು ಎಂದರು. ಗೋಷ್ಠಿಯಲ್ಲಿ ಫೋರಂ ಮಾಲ್‍ನ ಮಾರುಕಟ್ಟೆ ವಿಭಾಗದ ಧನಶೇಖರ್, ನವೀನ್, ವಿದ್ಯಾರಾಣಿ ಇದ್ದರು.