ಮಳೆ ಪರಿಹಾರ ಕಾರ್ಯಕ್ಕೆ ತಾಲೂಕುವಾರು ತಂಡ ರಚನೆ

ಮಡಿಕೇರಿ:  ಮುಂಗಾರು ಮಳೆ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾ ಗಬಹುದಾದ ಭೂಕುಸಿತ, ಸಂಚಾರಕ್ಕೆ ಅಡ್ಡಿ, ಸಿವಿಲ್ ಕಾರ್ಯಗಳು ಮತ್ತು ಸಂತ್ರಸ್ಥ ರನ್ನು ಸ್ಥಳಾಂತರ ಮಾಡುವುದು, ಮತ್ತಿತರ ಕಾರ್ಯಗಳನ್ನು ಸಮರ್ಪಕವಾಗಿ ನಿಭಾ ಯಿಸಲು ತಹಶೀಲ್ದಾರರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.

ಮಡಿಕೇರಿ ತಾಲೂಕು ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೊಳಿಬಾಣೆ ಮತ್ತು ಅಯ್ಯಂಗೇರಿ ವ್ಯಾಪ್ತಿಗೆ ತಹಶೀಲ್ದಾ ರರು(ತಂಡದ ಮುಖ್ಯಸ್ಥರು), ಸಹಾಯಕ ಕಾರ್ಯ ಎಂಜಿನಿಯರ್ ಜಿಪಂ, ಸೆಸ್ಕ್ ಸಹಾಯಕ ಎಂಜಿನಿಯರ್, ಹೋಬಳಿ ಕೇಂದ್ರದ ಪರಿವೀಕ್ಷಕರು, ಗ್ರಾಪಂ ಅಭಿ ವೃದ್ಧಿ ಅಧಿಕಾರಿಗಳು, ವಲಯ ಅರಣ್ಯಾಧಿ ಕಾರಿಗಳು, ಅಗ್ನಿಶಾಮಕ ಠಾಣಾಧಿಕಾರಿ ಗಳು ಹಾಗೂ ಪೊಲೀಸ್ ನಿರೀಕ್ಷಕರನ್ನು ನಿಯೋಸಲಾಗಿದೆ. (ದೂ.08272-225691, ಮೊ.9448870811).

ಮಡಿಕೇರಿ ನಗರಸಭಾ ವ್ಯಾಪ್ತಿಯ ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ ಮತ್ತು ಪುಟಾಣ ನಗರ ವ್ಯಾಪ್ತಿಗೆ ಪೌರಾಯುಕ್ತರು(ತಂಡದ ಮುಖ್ಯಸ್ಥರು), ಸೆಸ್ಕ್ ಸಹಾಯಕ ಎಂಜಿನಿಯರ್, ಕಂದಾಯ ಅಧಿಕಾರಿ (ನಗರಸಭೆ), ಅಗ್ನಿಶಾಮಕ ಠಾಣಾಧಿಕಾರಿ.

ನಗರಸಭೆ ಕಚೇರಿ 08272-228323, 220579, ನಗರಸಭೆ ನಿಯಂತ್ರಣ ಕೊಠಡಿ 220111, ಮೊ.9886418888, 9743132759).
ವಿರಾಜಪೇಟೆ ತಾಲೂಕಿನ ಬೇತ್ರಿ, ಕರಡಿ ಗೋಡು, ಕುಟ್ಟ ಗ್ರಾಪಂ ವ್ಯಾಪ್ತಿಯ ಪೂಜಿಕಲ್ಲು, ನಿಟ್ಟೂರು ಗ್ರಾಪಂ ವ್ಯಾಪ್ತಿಯ ಲಕ್ಷ್ಮಣತೀರ್ಥ, ಕೊಡಂಗೇರಿ, ಗುಹ್ಯ ಕೀರೆಹೊಳೆ, ಬಲ್ಯ ಮಂಡೂರು ಹರಿಹರ ಸೇತುವೆ ವ್ಯಾಪ್ತಿಗೆ ತಹಶೀಲ್ದಾರರು(ತಂಡದ ಮುಖ್ಯಸ್ಥರು), ಎಇಇ ಲೋಕೋಪಯೋಗಿ ಇಲಾಖೆ, ಸೆಸ್ಕ್ ಸಹಾಯಕ ಎಂಜಿನಿಯರ್, ಕಂದಾಯ ಪರಿ ವೀಕ್ಷಕರು, ಗ್ರಾ.ಪಂ.ಪಿಡಿಒ, ವಲಯ ಅರ ಣ್ಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿ ಗಳು, ಪೊಲೀಸ್ ನಿರೀಕ್ಷಕರು. (ದೂ.08274- 249053, ಮೊ 9113027480).

ಸೋಮವಾರಪೇಟೆ ತಾಲೂಕಿನ ನೆಲ್ಯ ಹುದಿಕೇರಿ, ಬೆಟ್ಟದಕಾಡು ವ್ಯಾಪ್ತಿಗೆ ತಹ ಶೀಲ್ದಾರರು(ತಂಡದ ಮುಖ್ಯಸ್ಥರು), ಎಇಇ ಲೋಕೋಪಯೋಗಿ ಇಲಾಖೆ, ಸೆಸ್ಕ್ ಸಹಾ ಯಕ ಎಂಜಿನಿಯರ್, ಕಂದಾಯ ಪರಿ ವೀಕ್ಷಕರು, ಗ್ರಾಪಂ ಪಿಡಿಒ, ವಲಯ ಅರಣ್ಯಾ ಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿ, ಪೊಲೀಸ್ ನಿರೀಕ್ಷಕರು. (ದೂ.08276-282045, ಮೊ.9480073838).

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವ ಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆ ಉಂಟಾದಲ್ಲಿ ಕೂಡಲೇ ಕ್ರಮ ಕೈಗೊಳ್ಳು ವುದು, ಸಾರ್ವಜನಿಕರಿಂದ ಮಾಹಿತಿ ಬಂದಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳು ವಂತೆ ಸಂಬಂಧ ಇಲಾಖೆ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.

ತಹಶೀಲ್ದಾರರು ಮತ್ತು ತಾಪಂಇಒ ಅವರು ತಾಲೂಕು ವ್ಯಾಪ್ತಿಯಲ್ಲಿ ಮೇಲು ಸ್ತುವಾರಿ ನಡೆಸಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು. ಜೊತೆಗೆ ಉಪ ವಿಭಾಗಾಧಿಕಾರಿ ಅವರು ಜಿಲ್ಲಾ ವ್ಯಾಪ್ತಿ ಯಲ್ಲಿ ಮೇಲುಸ್ತುವಾರಿ ನೋಡಿಕೊಳ್ಳು ವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.