ಮಠದ ಆವರಣದಲ್ಲಿ ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ

ಗದಗ: ತೋಂಟದಾರ್ಯ ಸ್ವಾಮೀಜಿ ಕ್ರಿಯಾ ಸಮಾಧಿ ಬಳಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ, ಲಿಂಗಾಯತ ಧರ್ಮದ ವಿಧಿ-ವಿಧಾನ ಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ತೋಂಟ ದಾರ್ಯ ಶ್ರೀಗಳು ಮಣ್ಣಲ್ಲಿ ಮಣ್ಣಾದರು. ಪೆÇಲೀಸ್ ಪಡೆಗಳು ಶ್ರೀಗಳ ಅಂತ್ಯಕ್ರಿಯೆ ವೇಳೆ ನಾಡಗೀತೆಯೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚಿಸಿವೆ. ಲಿಂಗಾಯತ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ತೋಂಟದಾರ್ಯ ಮಠದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರವು ಪುಷ್ಪ, ವಿಭೂತಿ ಉಂಡೆಗಳನ್ನು ಅರ್ಪಿ ಸುವ ಮೂಲಕ ವಿಧಿ-ವಿಧಾನ ಪೂರ್ಣ ವಾಯಿತು. ಇಲ್ಲಿ ಸಾವಿರಾರು ಭಕ್ತರು, ಮಠಾ ಧೀಶರು ಮತ್ತು ರಾಜಕೀಯ ಮುಖಂಡರು ಭಾಗಿಯಾಗಿದ್ದರು. ನೂತನ ಉತ್ತರಾಧಿಕಾರಿ ಸಿದ್ದರಾಮ ಸ್ವಾಮೀಜಿ ಹಾಗೂ ಆನಂದಪುರ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಪೂಜೆ ನೆರವೇರಿತು. ಲಿಂಗಾಯತ ಧರ್ಮದ ಅಷ್ಠಾವರಣ, ಪಂಚಾಚಾರ್ಯ ಷಟ್‍ಸ್ಥಲ, ವಿಭೂತಿ, ಬಿಲ್ವಪತ್ರೆ, ವಚನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.