ಕಸದ ಬುಟ್ಟಿಗಳಿದ್ದ ಸ್ಟ್ಯಾಂಡ್ ಈಗ ಮಕ್ಕಳ ಉಯ್ಯಾಲೆ ಆಟಿಕೆ!

ಮೈಸೂರು: ಮೈಸೂರು ನಗರ ಪಾಲಿಕೆ, ಚಿಕ್ಕಗಡಿಯಾರ ಬಳಿ ಅಳವಡಿಸಿರುವ ಕಸ ಸಂಗ್ರಹಿಸುವ ಪ್ಲಾಸ್ಟಿಕ್ ಬುಟ್ಟಿ ನಾಪತ್ತೆಯಾಗಿದ್ದು, ಇದಕ್ಕೆ ಆಧಾರವಾಗಿ ಅಳವಡಿಸಿದ್ದ ಕಬ್ಬಿಣದ ಸ್ಟಾಂಡೀಗ ಚಿಕ್ಕ ಮಕ್ಕಳ ಉಯ್ಯಾಲೆ ಆಟಿಕೆಯಾಗಿ ಪರಿವರ್ತಿತವಾಗಿದೆ.

ಮೈಸೂರು ನಗರ ಹೃದಯ ಭಾಗದ ದೇವರಾಜ ಮಾರುಕಟ್ಟೆ ಮುಂಭಾಗದ ಚಿಕ್ಕಗಡಿಯಾರ ಬಳಿ ಮಕ್ಕಳಿಬ್ಬರು ಕಸ ಹಾಕುವ ಪ್ಲಾಸ್ಟಿಕ್ ಬುಟ್ಟಿಗೆ ಆಧಾರವಾಗಿ ಅಳವಡಿಸಿದ್ದ ಕಬ್ಬಿಣದ ಸ್ಯಾಂಡ್‍ನಲ್ಲಿ ಸ್ವಚ್ಛಂದವಾಗಿ ಉಯ್ಯಾಲೆ ಆಡುತ್ತಿದ್ದಾರೆ.

ಆದರೆ, ಕಸ ಸಂಗ್ರಹಿಸಲು ಇಟ್ಟಿದ್ದ ಪ್ಲಾಸ್ಟಿಕ್ ಬುಟ್ಟಿಗಳನ್ನು ಕಳವು ಮಾಡಿರುವುದರ ಪರಿವೇ ಇಲ್ಲದ ಮಕ್ಕಳು, ಉಯ್ಯಾಲೆ ಆಡುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತಾದರೂ ಈ ಘಟನೆ ನಾಗರಿಕ ಸಮಾಜವನ್ನು ಪ್ರಶ್ನಿಸುವಂತಿತ್ತು. ಕಸ ಸಂಗ್ರಹಿಸುವ ಪ್ಲಾಸ್ಟಿಕ್ ಬುಟ್ಟಿಗಳನ್ನೇ ಬಿಡದ ಅನಾಗರಿಕರು, ಇನ್ನು ಮೈಸೂರಿನ ಸ್ವಚ್ಛತೆಗೆ ಹೇಗೆ ಸಹಕರಿಸುಯಾರು?.