ಮೈಸೂರು, ಚಾ.ನಗರ ಜಿಲ್ಲೆಯ ಶ್ರೀ ಬೀರದೇವರುಗಳ ವೈಭವಯುತ ಮೆರವಣಿಗೆ

ಮೈಸೂರು: ಶ್ರೀ ಕಾಗಿನೆಲೆ ಶಾಖಾ ಮಠದ ವತಿಯಿಂದ ಮೈಸೂರಿನ ಸಿದ್ದಾರ್ಥನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಶ್ರೀ ಕನಕ ಭವನ’ ಲೋಕಾರ್ಪಣೆ ಅಂಗವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಗಡಿ ದೇವರಾದ ಶ್ರೀ ಬೀರದೇವರುಗಳ ಮೆರ ವಣಿಗೆ ವೈಭವಯುತವಾಗಿ ಗುರುವಾರ ಸಂಜೆ ನೆರವೇರಿತು.

ಕಾಗಿನೆಲೆ ಶಾಖಾ ಮಠದ ಪೀಠಾಧ್ಯಕ್ಷ ರಾದ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಹಾಗೂ ಶ್ರೀ ಶಿವಾನಂದಾಪುರಿ ಸ್ವಾಮೀಜಿಯವರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ‘ಗಂಗೆ ಪೂಜೆ’ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಜಿಲ್ಲೆಯ 70ಕ್ಕೂ ಹೆಚ್ಚು ಗಡಿ ಬೀರ ದೇವರುಗಳ ನೂರೆಂಟು ಕಳಸಗಳನ್ನು ಹೊತ್ತ ಮಹಿಳೆಯರು, ನಂದಿಧ್ವಜ, ಡೊಳ್ಳು ಕುಣಿತ, ಗೊರವ ಕುಣಿತ ಸೇರಿ ದಂತೆ ಹತ್ತಾರು ಸಾಂಸ್ಕøತಿಕ ಕಲಾತಂಡ ಗಳ ಜತೆಗೆ ಸಂಗೊಳ್ಳಿ ರಾಯಣ್ಣನ ಬಾವುಟ ಹಿಡಿದ ನೂರಾರು ಯುವಕರ ಬೈಕ್ ರ್ಯಾಲಿ ಮೆರವಣಿಗೆಯಲ್ಲಿ ಸಾಗಿತು.

ಮೆರವಣಿಗೆಯು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಾಪುರದಮ್ಮನವರ ದೇವಸ್ಥಾನದಿಂದ ಹೊರಟು ರಮಾ ವಿಲಾಸ ರಸ್ತೆ, ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ನಜರ್‍ಬಾದ್ ಮುಖ್ಯ ರಸ್ತೆ ಮೂಲಕ ಮಠ ತಲುಪಿ ಕಳಸ ಪ್ರತಿಷ್ಠಾಪಿಸಲಾಯಿತು. ನಂತರ ಶ್ರಿಗಳು ಹೋಮ-ಹವನಗಳು ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಸಮವಸ್ತ್ರದಲ್ಲಿ ಕÀಂಗೊಳಿಸಿದ ಮಹಿಳೆಯರು: ಮೆರವಣಿಗೆಯಲ್ಲಿ ಬೀರ ದೇವರುಗಳ 108 ಕಳಸಗಳನ್ನು ಹೊತ್ತು ಹಳದಿ ಸಮವಸ್ತ್ರ ಧರಿಸಿ ಸಾಗಿದ ಮಹಿಳೆ ಯರು ಎಲ್ಲರ ಗಮನ ಸೆಳೆದರು. ಹಾಗೆಯೇ ಕುರುಬ ಸಮುದಾಯದ ಹಿರಿ ಯರು ದೇವರ ಸ್ತುತಿಗಳನ್ನು ಹಾಡುವ ಮೂಲಕ ಮೆರವಣಿಗೆಗೆ ಮೆರುಗು ತಂದರು.

ಮಾಜಿ ಸಂಸದ ಸಿ.ಹೆಚ್.ವಿಜಯ ಶಂಕರ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಮರೀಗೌಡ, ನಗರ ಪಾಲಿಕೆ ಸದಸ್ಯ ಜೆ.ಗೋಪಿ, ಕನಕದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎನ್.ಕುಮಾರಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಶಿವಣ್ಣ, ಎಂ.ಕೆ.ಶಂಕರ್, ಚೌಹಳ್ಳಿ ಪುಟ್ಟಸ್ವಾಮಿ, ಮಾಜಿ ಮೇಯರ್ ಭೈರಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಜಿ.ರವಿಶಂಕರ್, ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆಹುಂಡಿ ಮಹದೇವ್, ಮೈಸೂರು ತಾಲೂಕು ಕುರುಬರ ಸಂಘದ ಗೌರವಾಧ್ಯಕ್ಷ ನಾಡನಹಳ್ಳಿ ರವಿ, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ಬಸವರಾಜ, ಮುಖಂಡರಾದ ಸಿದ್ದು, ಕೆಂಪಣ್ಣ, ಸುಪ್ರಿಯಾ ಮಹದೇವ್, ಎಂ.ನಾಗರಾಜ್, ವಿಶ್ವ, ಸೋಮಣ್ಣ, ಬೆಳ್ಳೇಗೌಡ ಸೇರಿದಂತೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.