ವೈಭವದ ಶ್ರೀ ಕರಿಯಮ್ಮ, ಶ್ರೀ ಮಲ್ಲಿಗೆಮ್ಮ ಅಂಬಾರಿ ಉತ್ಸವ

ಅರಸೀಕೆರೆ: ನಗರದ ಗ್ರಾಮ ದೇವತೆಗಳಾದ ಶ್ರೀಕರಿಯಮ್ಮ ಮತ್ತು ಶ್ರೀಮಲ್ಲಿಗೆಮ್ಮನವರ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಆನೆ ಅಂಬಾರಿ ಉತ್ಸವ ಮೈಸೂರು ದಸರಾ ವೈಭವ ನೆನಪಿಸುವಂತೆ ಜರುಗಿತು.

50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಆನೆ ಅಂಬಾರಿ ಉತ್ಸವಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ದರು. ನಂತರ ಆನೆ ಅಂಬಾರಿ ಉತ್ಸವ ನಗರದ ಕರಿಯಮ್ಮ ದೇವಸ್ಥಾನದಿಂದ ಮೆರ ವಣಿಗೆಯಲ್ಲಿ ಹೊರಟು ಪೇಟೆ ಬೀದಿ, ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇವ ಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಿ.ಹೆಚ್. ರಸ್ತೆ, ಸಾಯಿನಾಥ ರಸ್ತೆ, ಕೆ.ಟಿ.ರಸ್ತೆ, ಶ್ಯಾನು ಭೋಗರ ಬೀದಿ, ಮಲ್ಲಿಗೆಮ್ಮ ದೇವಸ್ಥಾ ನದ ಬೀದಿ ಒಳಗೊಂಡಂತೆ ಹಲವು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತ ಮಧ್ಯರಾತ್ರಿ ವರೆಗೂ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಅಂಬಾರಿ ವೈಭವ ಕಣ್ತುಂಬಿಕೊಂಡು, ದೇವರ ಕೃಪೆಗೆ ಪಾತ್ರರಾದರು.

ಕಲಾ ತಂಡಗಳ ಸಾಥ್: ಆನೆ ಅಂಬಾರಿ ಉತ್ಸವಕ್ಕೆ ವೀರಗಾಸೆ, ನಾದಸ್ವರ, ಡೊಳ್ಳು ಕುಣಿತ, ತಮಟೆ ವಾದ್ಯ, ನಾಸಿಕ್ ಡೋಲ್ ಬೊಂಬೆ ಕುಣಿತ, ಕೇರಳ ಚಂಡೆ ವಾದ್ಯ, ಕರಡೆ ವಾದ್ಯ ಸೇರಿದಂತೆ ವಿವಿಧ ಜಾನ ಪದ ಕಲಾ ತಂಡಗಳು ಸಾಥ್ ನೀಡಿದವು. ಹೆದ್ದಾರಿ ಬದಿಯ ಇಕ್ಕೆಲಗಳಲ್ಲಿ ನೆರೆದಿದ್ದ ಅಪಾರ ಸಂಖ್ಯೆ ಭಕ್ತರು ಉತ್ಸವ ಕಣ್ತುಂಬಿ ಕೊಂಡರೆ ಮತ್ತೆ ಕೆಲವರು ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿ ದರು. ದೇವಿಯರ ಉತ್ಸವ ಸಾಗುವ ನಗರದ ಪ್ರಮುಖ ರಸ್ತೆಗಳನ್ನು ಹಸಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸ ಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿ ಸಿದ್ದರು. ದೇವಾಲಯ ಸಮಿತಿ ಸದಸ್ಯರು, ಸಂಘ ಸಂಸ್ಥೆಗಳ ಮುಖಂಡರು, ಚುನಾ ಯಿತ ಜನಪ್ರತಿನಿಧಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕಳೆದ ದಶಕಗಳಿಂ ದಲೂ ಉತ್ತಮ ಮಳೆಯಾಗದೇ ತಾಲೂಕು ಭೀಕರ ಬರ ಎದುರಿಸುತ್ತಿದ್ದು ಈ ಬಾರಿ ಯಾದರೂ ಉತ್ತಮ ಮಳೆಯಾಗಿ ಅನ್ನ ದಾತರ ಬದುಕು ಹಸನಾಗಲಿ ಎಂದು ಭಕ್ತರು ದೇವಿಯರನ್ನು ಪ್ರಾರ್ಥಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಮೆರವಣಿಗೆಯಲ್ಲಿ ಸ್ಥಳೀಯ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಗಂಡಸಿ ಗಂಗಾಧರ್, ತಾ.ಕರವೇ ಅಧ್ಯಕ್ಷ ಹೇಮಂತ್‍ಕುಮಾರ್, ಕಿರಣ್ ಕುಮಾರ್, ನಗರಸಭೆ ಸದಸ್ಯ ದರ್ಶನ್, ದಿಲೀಪ್‍ಕುಮಾರ್, ಪ್ರಸನ್ನಕುಮಾರ್, ಶಿವನ್‍ರಾಜ್, ಎಸ್‍ಎಲ್‍ಎನ್ ಯೋಗೀಶ್, ರಮೇಶ್, ವಿಭವ್, ಹೇಮಂತ್, ರಘು, ಲೋಕೇಶ್, ಗಂಡಸಿ ಸಂಜಯ್ ಕುಮಾರ್, ನಾಗಭೂಷಣ ಉಪಸ್ಥಿತರಿದ್ದರು.