ಗಾಂಧೀಜಿ ಮಾರ್ಗದರ್ಶನ ಇಂದಿಗೂ ನಮಗೆ ಪ್ರಸ್ತುತ

ನವದೆಹಲಿ, ಆ.14- ಸ್ವಾತಂತ್ರ್ಯೋತ್ಸವ ದಿನ ಭಾರತದ ಪಾಲಿಗೆ ಅತ್ಯಂತ ಸಂತಸದ ದಿನ ಎಂದು ರಾಷ್ಟ್ರಪತಿ ಬಣ್ಣಿಸಿದ್ದಾರೆ. ಭಾರತದ 73ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತ ನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ದೇಶದ ಜನತೆಗೆ ಶಾಂತಿ, ಸಾಮರಸ್ಯ ಮತ್ತು ಸದ್ಭಾವನೆಯ ಸಂದೇಶ ಸಾರಿದರು.

ಗಾಂಧೀಜಿ ಮಾರ್ಗದರ್ಶನ ಇಂದಿಗೂ ನಮಗೆ ಪ್ರಸ್ತುತ. ಸ್ವಾತಂತ್ರ್ಯೋತ್ಸವ ಅಂಗವಾಗಿ ಕ್ರಾಂತಿವೀರರನ್ನು ಸ್ಮರಿಸು ತ್ತೇವೆ. ದೇಶವನ್ನು ಸ್ವತಂತ್ರವಾಗಿಸಲು ಹೋರಾಡಿದ ಪೀಳಿಗೆಯು, ಭಾರತೀ ಯರಿಗೆ ರಾಜಕೀಯ ಶಕ್ತಿಯನ್ನು ನೀಡಿದೆ. ದೇಶದ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಜಮ್ಮು-ಕಾಶ್ಮೀರ, ಲಡಾಖ್ ವಿಭಜನೆಯಿಂದ ಅಲ್ಲಿ ಜನತೆ ಖುಷಿಯಲ್ಲಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಶಿಕ್ಷಣ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳೂ ಉತ್ತಮ ರೀತಿಯಲ್ಲಿ ಲಭಿಸ ಲಿವೆ ಎಂದರು. ನಮ್ಮ ಗುರಿ ಏನಿದ್ದರೂ ರಾಷ್ಟ್ರದ ಅಭಿವೃದ್ಧಿಯ ವೇಗ ಹೆಚ್ಚಿಸು ವುದು. ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಹೆಚ್ಚಳಕ್ಕೆ ಕ್ರಮ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಅಲ್ಲದೇ ಪ್ರತಿ ಮನೆಯಲ್ಲೊಂದು ಶೌಚಾಲಯದ ವ್ಯವಸ್ಥೆಯಾಗಬೇಕಿದೆ ಎಂದರು.