ಮೈಸೂರು: ಬೋಧಕರು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ತುಂಬುವುದರೊಂದಿಗೆ ಪರಿಸರ ಕಾಳಜಿ ಬೆಳೆಸುವ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಸಮಿತಿ ಹಿರಿಯ ಸಂಪನ್ಮೂಲ ವ್ಯಕ್ತಿ ಡಾ.ಬಿ.ದಿವಾಕರ್ ಸಲಹೆ ನೀಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನ ದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಸಮಿತಿ (ಎಂಜಿಎನ್‍ಸಿಆರ್‍ಇ)ಯು ಸೋಮವಾರ ಆಯೋಜಿಸಿದ್ದ ‘ಶಾಲೆ ಮತ್ತು ಶಿಕ್ಷಕರ ಶಿಕ್ಷಣದ ಪಠ್ಯಕ್ರಮದಲ್ಲಿ ಅನುಭವದ ಕಲಿಕೆ ಮತ್ತು ಶಿಕ್ಷಣ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಇಂದು ಗುಣಮಟ್ಟದ ಶಿಕ್ಷಣ ನೀಡು ವುದಕ್ಕೆ ಆದ್ಯತೆ ನೀಡಬೇಕು. ಗುಣಮಟ್ಟದ ಬೋಧನೆಗೆ ಬೇಕಾದ ಕೌಶಲ್ಯ ಬೋಧಕರಿಗೆ ಇರಬೇಕು. ಇದಕ್ಕಾಗಿ ತರಬೇತಿ ಪಡೆದುಕೊಳ್ಳುವ ಅಗತ್ಯವಿದೆ ಎಂದರು.
ಗ್ರಾಮೀಣ ಜನರಿಗೆ ಮೂಲಭೂತ ಶಿಕ್ಷಣ ನೀಡಿ ಉದ್ಯಮಶೀಲ ಪ್ರವೃತ್ತಿ ಬೆಳೆಸುವುದಕ್ಕೆ ಕ್ರಮ ಕೈಗೊಳ್ಳÀ ಬೇಕು. ಸಮಾಜ ಕಾರ್ಯ, ಗ್ರಾಮೀಣ ಸಮುದಾಯ ಅಭಿವೃದ್ಧಿ, ಮಹಿಳಾ ಆರೋಗ್ಯ ಮತ್ತು ಸಬಲೀಕರಣ, ಪರಿಸರ ಕಾಳಜಿ ಆಶಯದೊಂದಿಗೆ ಎಂಜಿಎನ್‍ಸಿ ಆರ್‍ಇ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಸಮುದಾಯಗಳೊಂದಿಗೆ ಸಂಪರ್ಕ ಹೊಂದಬೇಕು. ಸಮಾಜ ಕಾರ್ಯ, ಆರೋಗ್ಯ, ಪರಿಸರ, ವಾಣಿಜ್ಯ ವಿಭಾಗದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಪ ನ್ಮೂಲ ವ್ಯಕ್ತಿಗಳು ಗ್ರಾಮೀಣ ಜನರಲ್ಲಿ ತಿಳುವಳಿಕೆ ಮೂಡಿಸಿ ಅವರನ್ನು ಅಭಿವೃದ್ಧಿಯತ್ತ ಕೊಂಡೊ ಯ್ಯಲು ಪ್ರಯತ್ನಿಸಬೇಕು. ಈ ಬಗ್ಗೆ ಅರಿವು ಮೂಡಿ ಸುವುದರೊಂದಿಗೆ ತರಬೇತಿ ನೀಡಲು ನಮ್ಮ ಸಂಸ್ಥೆ ದೇಶಾದ್ಯಂತ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದ ಬೋಧಕರು, ಸಂಶೋ ಧನಾ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ತಜ್ಞರು ಸಂವಾದ ನಡೆಸಿ ಬೋಧನಾ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಶಿಕ್ಷಣ ವಿಭಾಗದ ಅಧ್ಯಾಪಕಿ ನಿಂಗಮ್ಮ ಪ್ರೊ.ಸಿ.ಬೆಟ್ಸೂರ್ ಹಾಗೂ ಇನ್ನಿತರರು ಇದ್ದರು.