ಬಿಸಿಯೂಟ ತಯಾರಕರ ಪ್ರತಿಭಟನೆ

ಮೈಸೂರು: ಖಾಯಂ ಮಾಡಿ ಕನಿಷ್ಠ ವೇತನ 18 ಸಾವಿರ ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಿ ನಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಎಐಟಿ ಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ದಲ್ಲಿ 1.18 ಲಕ್ಷ ಬಿಸಿಯೂಟ ತಯಾರ ಕರು ಕಳೆದ 15 ವರ್ಷದಿಂದ ಕೆಲಸ ನಿರ್ವ ಹಿಸುತ್ತಿದ್ದಾರೆ. 600 ರೂ. ಗೌರವ ಧನ ದಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಸರ್ಕಾರದ ಇನ್ನಿತರೆ ಯಾವುದೇ ಸವಲತ್ತು ಬಿಸಿಯೂಟ ತಯಾರಕರಿಗೆ ದೊರಕುತ್ತಿಲ್ಲ. ಬಿಸಿಯೂಟ ತಯಾರಕರು ಸಂಕಷ್ಟದಲ್ಲಿ ದ್ದಾರೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿ ಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿ ಯೂಟ ತಯಾರಕರ ಸೇವೆಯನ್ನು ಖಾಯಂಗೊಳಿಸಬೇಕು. ಕನಿಷ್ಠ ವೇತನ 18 ಸಾವಿರ ನಿಗದಿ ಮಾಡಬೇಕು. ಇಸ್ಕಾನ್ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆ ಗಳಿಗೆ ಬಿಸಿಯೂಟದ ಜವಾಬ್ದಾರಿ ನೀಡ ಬಾರದು ಎಂದು ಆಗ್ರಹಿಸಿದರು.
ಬಿಸಿಯೂಟ ತಯಾರಕರಿಗೆ ಭದ್ರತೆ ನೀಡು ವುದರೊಂದಿಗೆ ಶಾಲಾ ಸಿಬ್ಬಂದಿಯೆಂದೇ ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿ ತರÀ ಬೇಕು. ಬಿಸಿಯೂಟ ಯೋಜನೆ ಎಂಬ ಹೆಸರನ್ನು ಕೈಬಿಟ್ಟು ಬಿಸಿಯೂಟ ಕಾರ್ಯ ಕ್ರಮ ಎಂದು ನಾಮಕರಣ ಮಾಡಬೇಕು. ಬಿಸಿಯೂಟ ಇವರಿಗೆ 2 ಲಕ್ಷ ರೂ. ಅಪ ಘಾತ ಪರಿಹಾರ, 5 ಲಕ್ಷ ರೂ. ಮರಣ ಪರಿ ಹಾರ ನೀಡಬೇಕು. ದಸರೆ ರಜೆ, ಬೇಸಿಗೆ ರಜೆ ದಿನಗಳಲ್ಲಿಯೂ ವೇತನ ನೀಡಬೇಕು. ಖಾಸಗಿ ಸಂಸ್ಥೆಗಳಿಗೆ ನೀಡಿರುವ ಜವಾ ಬ್ದಾರಿಯನ್ನು ಹಿಂಪಡೆಯಬೇಕು. 60 ವರ್ಷ ಮೇಲ್ಪಟ್ಟ ಕಾರ್ಯಕರ್ತೆಯರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ, 2 ಲಕ್ಷ ರೂ. ಇಡಿಗಂಟು ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಸಂಚಾಲಕರಾದ ಕೆ.ಜಿ.ಸೋಮರಾಜೇ ಅರಸ್, ಮಹದೇವಮ್ಮ, ಪದ್ಮಮ್ಮ, ಸಾವಿತ್ರಮ್ಮ, ಜಯಂತಿ, ಭಾಗ್ಯ, ಆರ್. ಪ್ರೇಮ, ವನಜಾಕ್ಷಿ, ಚಂದ್ರಮ್ಮ, ಪಾರ್ವ ತಮ್ಮ ಇನ್ನಿತರರು ಪ್ರತಿಭಟನೆಯಲ್ಲಿದ್ದರು.