ಸರ್ವರ ಹಿತ ಬಯಸುವ ಪುರೋಹಿತರ ಅವಹೇಳನ

ಮೈಸೂರು, ಜು.11(ಎಂಕೆ)- ಎಲ್ಲರ ಹಿತ ಬಯಸುವ ಪುರೋಹಿತರನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಅವಹೇಳನ ಕಾರಿಯಾಗಿ ಬಿಂಬಿಸಲಾಗುತ್ತಿದೆ ಎಂದು ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂ ಗಾರ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಶ್ರೀರಾಮಮಂದಿರದಲ್ಲಿ ಗುರು ವಾರ ಏರ್ಪಡಿಸಿದ್ದ ‘ಪುರೋಹಿತರು ಮತ್ತು ಅರ್ಚಕರ ಕುಂದು-ಕೊರತೆ’ ಸಭೆಯಲ್ಲಿ ಮಾತನಾಡಿದ ಅವರು, ಪುರೋಹಿತರಾಗು ವುದು ಅಷ್ಟು ಸುಲಭವಲ್ಲ. ವಿಶ್ವವಿದ್ಯಾನಿಲಯ ದಲ್ಲಿ ಪಿಹೆಚ್.ಡಿ ಪದವಿ ಪಡೆಯುವುದಕ್ಕಿಂತ ವೇದ, ಶಾಸ್ತ್ರಗಳ ಅಧ್ಯಯನ ಕಷ್ಟಕರವಾದದ್ದು. ಕನಿಷ್ಠ 2 ವರ್ಷ ವೇದಗಳ ಅಧ್ಯಯನ ಮಾಡಿದವರನ್ನು ಸಾಮಾನ್ಯ ಹಾಗೂ 10 ವರ್ಷ ಅಧ್ಯಯನ ಮಾಡಿದವರನ್ನು ಮಾತ್ರ ಉತ್ತಮ ಪುರೋಹಿತರು ಎಂದು ಗುರುತಿಸಲು ಸಾಧ್ಯ ಎಂದು ತಿಳಿಸಿದರು.

Àುರೋಹಿತಶಾಹಿ ನಿನ್ನೆ ಮೊನ್ನೆಯದಲ್ಲ. ಹರಪ್ಪ ನಾಗರಿಕತೆ ಕಾಲದಲ್ಲೂ ಪುರೋ ಹಿತಶಾಹಿ ಇತ್ತೆಂಬ ಉಲ್ಲೇಖವಿದೆ. ಯಾವುದೇ ಶುಭ ಕಾರ್ಯಗಳಿಗೂ ಪುರೋ ಹಿತರು ಬೇಕೇ ಬೇಕು. ಎಂತಹ ಜ್ಞಾನಿ ಯಾದರೂ ಪುರೋಹಿತರಿಲ್ಲದೆ ಆತ ಯಾವ ಕಾರ್ಯಕ್ಕೂ ಮುಂದಾಗುವುದಿಲ್ಲ. ತನ್ನ ಒಳಿತನ್ನು ಲೆಕ್ಕಿಸದೆ ಇತರರ ಕ್ಷೇಮ ಕ್ಕಾಗಿ ಎಷ್ಟು ಹಣ ನೀಡಿದರೂ ಕರ್ತವ್ಯ ನಿರ್ವ ಹಿಸುವ ಮನೋಭಾವನೆಯನ್ನು ಪುರೋ ಹಿತರು ಹೊಂದಿರುತ್ತಾರೆ. ಹೀಗಿರುವಾಗÀ ಇವರ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಖಂಡಿಸಿದರು.

ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಪೌರೋಹಿತ್ಯ ಮಾಡುವವರು ಅನಾದಿ ಕಾಲದಿಂದಲೂ ತಮಗೆಷ್ಟೇ ಕಷ್ಟವಿದ್ದರೂ ಇತರರು ಸುಖವಾಗಿರಲಿ ಎಂದು ಭಗವಂತ ನಲ್ಲಿ ಪ್ರಾರ್ಥಿಸುತ್ತಾ ಬಂದಿದ್ದಾರೆ. ಹುಟ್ಟಿ ನಿಂದ ಸಾಯುವವರೆಗೂ ಎಲ್ಲ ಶುಭ ಕಾರ್ಯಗಳಿಗೂ ಆಗಮಿಸಿ, ಮನೆಯವರಲ್ಲಿ ಒಂದು ಧನಾತ್ಮಕÀ ಆತ್ಮಸ್ಥೈರ್ಯ ತುಂಬು ತ್ತಾರೆ. ಆದ್ದರಿಂದ ಪುರೋಹಿತರ ಶ್ರೇಯೋ ಭಿವೃದ್ಧಿಗಾಗಿ ಪ್ರತೀ ಜಿಲ್ಲೆಯಲ್ಲೂ ವಿಪ್ರ ಸಹಾಯವಾಣಿ ಆರಂಭಿಸಿ, 15 ಜನರನ್ನು ಸಂಚಾಲಕರನ್ನಾಗಿ ನೇಮಿಸಲಾಗುವುದು ಎಂದು ಹೇಳಿದರು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ವೇದಾಭ್ಯಾಸ ಮಾಡಿದ ಯುವಕರಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಹಾಗಾಗಿ ಸನಾತನ ಧರ್ಮ ಹಾಗೂ ಪೌರೋಹಿತ್ಯದ ಉಳಿವಿಗಾಗಿ ವಿಪ್ರ ಸಮಾಜದ ಯುವಕರು ನಿಷ್ಠೆಯಿಂದ ವೇದಾ ಭ್ಯಾಸ ಮಾಡಬೇಕು. ಜತೆಗೆ ಎಲ್ಲರೂ ಸಂಘ ಟಿತರಾಗಬೇಕೆಂದು ಸಲಹೆ ನೀಡಿದರು.

ಶ್ರೀ ಅಭಿನವ ರಾಮಾನುಜ ಸ್ವಾಮೀಜಿ, ಉತ್ತರಾದಿ ಮಠದ ಆಡಳಿತಾಧಿಕಾರಿ ಅನಿ ರುದ್ಧ ಆಚಾರ್ಯ, ಕೃಷ್ಣಧಾಮದ ಅಧ್ಯಕ್ಷ ಕೃಷ್ಣದಾಸ್ ಪುರಾಣಿಕ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಹೆಚ್.ಜಿ.ಗಿರಿಧರ್, ಗೋಪಾಲ್‍ರಾವ್, ಸಿ.ವಿ.ಪಾರ್ಥಸಾರಥಿ, ಶಂಕರ್ ನಾರಾ ಯಣ ಶಾಸ್ತ್ರಿ, ಪ್ರಹ್ಲಾದ್, ಮಂಜುನಾಥ ಶಾಸ್ತ್ರಿ, ಪ್ರಶಾಂತ್, ಸುರೇಶ್ ಮುಳ್ಳೂರು, ಎಂ.ಆರ್.ಬಾಲಕೃಷ್ಣ, ಅಪೂರ್ವ ಸುರೇಶ್, ವಿಕ್ರಂ ಅಯ್ಯಂಗಾರ್, ಜಯಸಿಂಹ ಶ್ರೀಧರ್, ಕಡಕೊಳ ಜಗದೀಶ್, ಸುಚೀಂದ್ರ, ಚಕ್ರಪಾಣಿ, ಕೆ.ಎಂ.ನಿಶಾಂತ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.