ನಿರ್ಭಯಾ ಕೇಸ್; ಅಪರಾಧಿ ವಕೀಲರಿಗೆ 25 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

ನವದೆಹಲಿ,ಡಿ.19-ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ಪವನ್‍ಕುಮಾರ್, `ಘಟನೆ ನಡೆದಾಗ ನಾನು ಬಾಲಕನಾಗಿದ್ದೆ. ಹಾಗಾಗಿ ನನ್ನನ್ನೂ ಬಾಲಾಪರಾಧಿ ಎಂದೇ ಪರಿಗಣಿಸಿ, ಗಲ್ಲುಶಿಕ್ಷೆಯಿಂದ ಪಾರು ಮಾಡಿ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಅನಗತ್ಯವಾಗಿ ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೆ ಅಪರಾಧಿ ಪರ ವಕೀಲರಿಗೆ 25 ಸಾವಿರ ರೂ. ದಂಡವನ್ನೂ ವಿಧಿಸಿದೆ. ಅಪರಾಧಿಯ ಅರ್ಜಿಯನ್ನು ಗುರುವಾರ ಬೆಳಿÀಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮೊದಲಿಗೆ ಅಪರಾಧಿ ಪವನ್ ಗುಪ್ತಾ ಪರ ವಕೀಲರಿಗೆ ಸೂಕ್ತ ದಾಖಲೆ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಿ 2020ರ ಜ.24ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಇದಕ್ಕೆ ನಿರ್ಭಯಾ ಪೆÇೀಷಕರು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ನಿರ್ಭಯಾ ಪರ ವಕೀಲರು ಕೋರ್ಟ್‍ನ ಗಮನ ಸೆಳೆದಾಗ ಹೈಕೋರ್ಟ್ ಗುರುವಾರವೇ ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿತು. ಆದರೆ, ಮಾಹಿತಿ ನೀಡಿದರೂ ವಿಚಾರಣೆ ವೇಳೆಗೆ ಕೋರ್ಟ್‍ಗೆ ಆಗಮಿಸದ ಅಪರಾಧಿ ಪವನ್ ಪರ ವಕೀಲರಿಗೆ 25 ಸಾವಿರ ರೂ. ದಂಡ ವಿಧಿಸಿತು.