ವಿಜಯಶ್ರೀಪುರ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರದ ಮೇಲೆ ಒತ್ತಡ

ಮೈಸೂರು: ಮೈಸೂರಿನ ವಿಜಯನಗರದ ವಿಜಯಶ್ರೀಪುರ ಬಡಾವಣೆಯ ಸಕ್ರಮೀಕರಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಚರ್ಚಿಸಿ ಇತ್ಯರ್ಥಪಡಿಸು ವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.

ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮುಖಂಡರೊಂದಿಗೆ ಸಭೆ ನಡೆಸಿ ಅಹವಾಲು ಆಲಿ ಸಿದ ಬಳಿಕ ಮಾತನಾಡಿದ ಅವರು, ವಿಜಯಶ್ರೀಪುರದ ಬಡಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿತ್ತು. ಈಗಾಗಲೇ ಈ ಪ್ರಕರಣ ಇತ್ಯರ್ಥ ಗೊಂಡಿದ್ದು, ಸರ್ಕಾರದ ಮಟ್ಟದಲ್ಲಿ ಮನೆಗಳ ಸಕ್ರಮೀ ಕರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಈಗಾಗಲೇ ಮುಡಾ ಆಯುಕ್ತರು ಮುಖ್ಯಮಂತ್ರಿಗಳಿಗೆ ವರದಿಯನ್ನು ಹೇಳಿ ದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಡಾ ವಣೆಯ ಸಕ್ರಮೀಕರಣ ಪ್ರಕ್ರಿಯೆ ನಡೆಸಲು ಸಾಧ್ಯ ವಾಗಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರೊಂದಿಗೆ ಮಾತನಾಡಿದ್ದೇನೆ. ಪ್ರತೀ ವಾರ ಕ್ಯಾಬಿನೆಟ್ ಸಭೆ ನಡೆಯುತ್ತದೆ. ಈ ತಿಂಗಳ ಅಂತ್ಯ ದೊಳಗೆ ವಿಜಯಶ್ರೀಪುರದ ಸಕ್ರಮೀಕರಣದ ಸಮಸ್ಯೆ ಯನ್ನು ಕ್ಯಾಬಿನೆಟ್‍ನಲ್ಲಿಟ್ಟು ಚರ್ಚಿಸುವಂತೆ ಒತ್ತಾಯಿ ಸುತ್ತೇನೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಯೊಂದಿಗೆ ಮಾತನಾಡಿದ್ದು, ಕ್ಯಾಬಿನೆಟ್ ಸಭೆಗೆ ವಿಜಯ ಶ್ರೀಪುರದ ದಾಖಲೆಗಳನ್ನು ಸಲ್ಲಿಸಲು ಸಿದ್ಧಪಡಿಸು ವಂತೆ ಮನವಿ ಮಾಡಿದ್ದೇನೆ ಎಂದರು.

ಈ ಬಡಾವಣೆಯಲ್ಲಿರುವ ಮನೆಗಳನ್ನು ನೆಲಸಮಗೊಳಿ ಸುವಂತೆ ಈ ಹಿಂದೆ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ನಂತರದ ದಿನಗಳಲ್ಲಿ ವಿವಾದ ಇತ್ಯರ್ಥವಾಗಿದ್ದು, ಇದೀಗ ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಬೇಕಾಗಿದೆ. ಅಲ್ಲಿನ ಮನೆಗಳನ್ನು ಸಕ್ರಮಗೊಳಿಸುವುದಕ್ಕೆ ಸರ್ಕಾರ ಅಗತ್ಯವಿರುವ ಬೆಟ್ಟರ್‍ಮೆಂಟ್ ಶುಲ್ಕ ಸಂಗ್ರಹಿಸಿ ಸ್ಥಳೀಯ ನಿವಾಸಿಗಳಿಗೆ ನೆರವಾಗುವಂತೆ ಕೋರಲಾಗಿದೆ. ಬಡಾವಣೆಯಲ್ಲಿ ಮೂಲ ಸೌಲಭ್ಯದ ಕೊರತೆ ಹೆಚ್ಚಾಗಿದ್ದು, ನಿವಾಸಿಗಳು ಪರಿತಪಿಸುತ್ತಿದ್ದಾರೆ. ಯುಜಿಡಿ, ಬೀದಿ ದೀಪ, ಸ್ವಚ್ಛತೆ ಸಮಸ್ಯೆ ತೀವ್ರಗೊಂಡಿತ್ತು. ಆದರೂ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶ ದಿಂದ ಸ್ವಚ್ಛತೆ ಮತ್ತು ಯುಜಿಡಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆ ಸದಸ್ಯೆ ವೇದಾವತಿ ಸ್ಥಳೀಯರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎಂದರು. ವಿವಿಧ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜಾರಿಗೊಳಿಸಿರುವ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನನಗೆ ಜನರ ಸಮಸ್ಯೆ ಬಗೆ ಹರಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ವಿಧಾನಸಭೆ, ಪಾಲಿಕೆ ಹಾಗೂ ಲೋಕಸಭಾ ಚುನಾವಣೆಯಿಂದಾಗಿ ಒಂದು ವರ್ಷ ಸಮಯ ವ್ಯರ್ಥವಾಗಿದೆ. ಇನ್ನು ನಾಲ್ಕು ವರ್ಷವಷ್ಟೇ ಕೆಲಸ ಮಾಡಲು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಂಡಿದ್ದೇನೆ ಎಂದರು. ಸಭೆಯಲ್ಲಿ ಸ್ಥಳೀಯ ನಿವಾಸಿಗಳಾದ ದಿನೇಶ್, ರಮೇಶ್, ರಂಗನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.