ಸಮಯದ ಸರಿಯಾದ ಬಳಕೆ ಯಶಸ್ಸಿನ ಗುಟ್ಟು ಜಿಲ್ಲಾ ಯೊಜನಾ ನಿರ್ದೇಶಕ ಆರ್. ಲೋಕನಾಥ್

ಮೈಸೂರು: ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಯಶಸ್ಸಿಗೆ ಸಮಯದ ಸರಿಯಾದ ಬಳಕೆ ಅವಶ್ಯವಾದುದು ಎಂದು ಜಿಲ್ಲಾ ಯೋಜನಾ ನಿರ್ದೇಶಕ ಆರ್. ಲೋಕನಾಥ್ ಸಲಹೆ ನೀಡಿದರು.

ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಡಶಾಲೆ ಮತ್ತು ಕಾಲೇಜು ಕೊಠಡಿಯಲ್ಲಿ ಜ್ಞಾನಬುತ್ತಿ ಸಾಹಿತ್ಯ ಸಂಸ್ಕೃತಿ ಸಂಸ್ಥೆ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಠ್ಯಕ್ರಮಕ್ಕೆ ಯಾವುದೇ ನಿಯಮಿತಿ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿ ಗಳು ಇಂದು ಕಷ್ಟ ಪಟ್ಟರೆ ಮುಂದಿನ ದಿನಗಳಲ್ಲಿ ಸಂತೋಷದ ಜೀವನವನ್ನು ನಡೆಸಬಹುದು. ಯಾರು ಯಾರನ್ನು ಕಾಪಿ ಮಾಡಬೇಡಿ ಪ್ರತಿ ಯೊಬ್ಬರು ಸ್ವಂತಿಕೆಯನ್ನು ಬೆಳೆಸಿಕೊಳ್ಳಿ. ಅದರಿಂದ ಮಾತ್ರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಮಿಕ ಇಲಾಖೆ ಉಪ ಆಯುಕ್ತ ಎಸ್.ಬಿ ರವಿಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ತೆಗೆದುಕೊಂಡ ಮೇಲೆ ಪ್ರತಿಯೊಂದು ವಿಚಾರವನ್ನು ಗ್ರಹಿಸಬೇಕು. ವಿದ್ಯಾಸಂಪತ್ತು ಎಲ್ಲಾ ಸಂಪತ್ತುಗಳಿಗಿಂತ ಮಿಗಿಲಾದದ್ದು, ಕಲಿತ ವಿದ್ಯೆಯನ್ನು ಹಂಚಿಕೊಳ್ಳಿ. ಆಗ ಮಾತ್ರ ಇನ್ನು ಹೆಚ್ಚು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಕೆಎಸ್‍ಒಯು ಸಹಾಯಕ ಪ್ರಾಧ್ಯಾಪಕ ಡಾ.ಎನ್ ಆನಂದಗೌಡ, ಮೈಸೂರು ವಿವಿ ಪ್ರಾಧ್ಯಾಪಕ ಎ. ಬಾಲಸುಬ್ರಮಣಿಯನ್, ಎಸ್.ಬಿ.ಎಂ ಪ್ರಸನ್ನ, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣಗೌಡ, ಹೆಚ್. ಬಾಲಕೃಷ್ಣ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದರು.