ಕೊರೊನಾ ವಿರುದ್ಧ ಶ್ರಮಿಸುತ್ತಿರುವ ಆರೋಗ್ಯ, ಕಂದಾಯ ಅಧಿಕಾರಿಗಳ ಸುರಕ್ಷತೆ ಮುಖ್ಯ

ತಿ.ನರಸೀಪುರ, ಏ.21(ಎಸ್‍ಕೆ)- ಕೊರೊನಾ ನಿಯಂತ್ರಿಸಲು ತಮ್ಮ ಪ್ರಾಣ ವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿ ರುವ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸುರಕ್ಷತೆ ಮುಖ್ಯ ಎಂದು ತಾಪಂ ಮಾಜಿ ಅಧ್ಯಕ್ಷ ಚೆಲುವರಾಜು ಅಭಿಪ್ರಾಯಪಟ್ಟರು.

ತಾಪಂ ಸಭಾಂಗಣದಲ್ಲಿ ಕಂದಾಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಗಳು ಹಾಗೂ ನೌಕರರಿಗೆ ತಹಸೀಲ್ದಾರ್ ಡಿ.ನಾಗೇಶ್ ಮೂಲಕ ಮಾಸ್ಕ್ ವಿತರಿಸಿ ಮಾತನಾಡಿದರು. ಕೊರೊನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂಕಷ್ಟ ಸಮಯದಲ್ಲಿ ತಮ್ಮ ಜೀವವನ್ನೇ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಆಧುನಿಕ ಕಾಲದ ದೇವರುಗಳಿದ್ದಂತೆ. ಹಾಗೆಯೇ ಹಗಲು ಇರುಳೆನ್ನದೆ ಸಂಸಾರದೆಡೆಗೆ ಗಮನಹರಿ ಸದೆ ಕೊರೊನಾ ಹತೋಟಿಗೆ ತರಲು ಶ್ರಮಿಸು ತ್ತಿರುವ ಕಂದಾಯ ಇಲಾಖೆಯು ಸಾರ್ವಜನಿಕ ವಲಯದಲ್ಲಿ ಬಹುಮುಖ್ಯವಾಗಿದೆ. ಅವರ ಸುರಕ್ಷತೆಯೆ ಬಹಳ ಮುಖ್ಯ. ಇದನ್ನರಿತು ಅವರಿಗೆ ಮಾಸ್ಕ್  ನೀಡುವ ಮೂಲಕ ಅಲ್ಪ ಸೇವೆ ಮಾಡಿರುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಕೊರೊನಾ ಸೋಂಕಿತ ರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರು ವವರನ್ನು  ಪತ್ತೆ ಹಚ್ಚಿ ಎಲ್ಲರನ್ನು ಹೋಂ ಕ್ವಾರೆಂಟೈನ್‍ನಲ್ಲಿಟ್ಟು ತಾಲೂಕಿಗೆ ಯಾವುದೇ ಪಾಸಿಟಿವ್ ಕೇಸ್ ಬರದಂತೆ ಆರೋಗ್ಯ ಇಲಾಖೆ ನಿಗಾ ವಹಿಸಬೇಕೆಂದು ಡಾ.ರವಿ ಕುಮಾರ್ ಅವರಿಗೆ ಮನವಿ ಮಾಡಿದರು.

ತಾಲೂಕು ವೈದ್ಯಾಧಿಕಾರಿ ಡಾ.ರವಿ ಕುಮಾರ್ ಮಾತನಾಡಿ, ಸದ್ಯಕ್ಕೆ ತಾಲೂಕಿನಲ್ಲಿ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಕೆಲ ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಹೋಂ ಕ್ವಾರೆಂಟೈನ್‍ನಲ್ಲಿಡಲಾಗಿದ್ದು, ಅವರೆ ಲ್ಲರ ವರದಿ ನೆಗೆಟಿವ್ ಬಂದಿದೆ. ತಾಲೂಕಿನ ಜನತೆ ಭಯ ಪಡುವ ಅಗತ್ಯ ವಿಲ್ಲ ಎಂದರು. ತಹಶೀಲ್ದಾರ್ ಡಿ.ನಾಗೇಶ್, ತಾಪಂ ಇಓ ಜೆರಾಲ್ಡ್ ರಾಜೇಶ್, ಶಿರಸ್ತೇ ದಾರ್ ಪ್ರಭುರಾಜ್, ತಾಪಂ ಅಧ್ಯಕ್ಷ ಹ್ಯಾಕ ನೂರು ಉಮೇಶ್, ಕುಕ್ಕೂರು ಗಣೇಶ್, ಸಾಜಿದ್ ಅಹಮದ್ ಮತ್ತಿತರರಿದ್ದರು.