ಡಾ.ಎಸ್.ಎಲ್.ಭೈರಪ್ಪರ `ಉತ್ತರ ಕಾಂಡ’ ಕುರಿತು ವಿಚಾರ ಸಂಕಿರಣ

ಮೈಸೂರು:  ಶ್ರೀರಂಗ ಪಟ್ಟಣದ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ಯಿಂದ ಸೆ.30ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ಶಾರದ ವಿಲಾಸ ಕಾಲೇಜಿನ ಶತಮಾನೋತ್ಸವ ಭವನ ದಲ್ಲಿ ಡಾ.ಎಸ್.ಎಲ್.ಭೈರಪ್ಪನವರ `ಉತ್ತರ ಕಾಂಡ’ ಕೃತಿ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಏರ್ಪಡಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಗ.ನಾ.ಭಟ್ಟ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕುವೆಂಪು ಭಾಷಾ ಭಾರತೀ ಮಾಜಿ ಛೇರ್ಮನ್ ಡಾ.ಪ್ರಧಾನ ಗುರುದತ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸರಸ್ವತಿ ಸಮ್ಮಾನ್ ಪುರಸ್ಕøತ ಹಾಗೂ ಕಾದಂಬರಿ ಕತೃ ಡಾ.ಎಸ್.ಎಲ್.ಭೈರಪ್ಪ ಉಪಸ್ಥಿತರಿರುವರು. ಕಾದಂಬರಿಯ `ಸೀತೆಯ ಮನೋ ಮಂಥನ’ದ ಬಗ್ಗೆ ಅಂಕಣಗಾರ್ತಿ ಸಹನಾ ವಿಜಯಕುಮಾರ್, `ಭೈರಪ್ಪ ಚಿತ್ರಿತ ರಾಮ’ ಬಗ್ಗೆ ವಿಮರ್ಶಕ ಗ.ನಾ.ಭಟ್ಟ, `ಭೈರಪ್ಪನವರ ಸೃಷ್ಟಿಶೀಲತೆಯಲ್ಲಿ ಲಕ್ಷ್ಮಣ, ಊರ್ಮಿಳೆ, ತಾರೆ ಮೊದಲಾದವರು ಬಗ್ಗೆ ವಿಮರ್ಶಕಿ ಆಶಾ ರಘು ಹಾಗೂ `ಉತ್ತರಕಾಂಡದಲ್ಲಿ ಮನುಷ್ಯ ನಿಸಗರ್À ಸಂಬಂಧ’ ಕುರಿತು ಮಾತನಾಡಲಿದ್ದಾರೆ ಎಂದರು. ಸುದ್ದಿಗೋಷ್ಠಿ ಯಲ್ಲಿ ಎಸ್.ಎಲ್.ಕೃಷ್ಣಪ್ರಸಾದ್, ಗೀತಾ ಎಂ.ಹೆಗ್ಡೆ ಉಪಸ್ಥಿತರಿದ್ದರು.