ಸೂಯೇಜ್ ಫಾರಂ ದುರ್ವಾಸನೆಯಿಂದ ಸುತ್ತಮುತ್ತಲ ಜನರಿಗೆ ಶೀಘ್ರ ಮುಕ್ತಿ

ಮೈಸೂರು, ಅ.31-ಮೈಸೂರಿನ ಸೂಯೇಜ್ ಫಾರಂ ಸುತ್ತಮುತ್ತಲ ಬಡಾ ವಣೆ ನಿವಾಸಿಗಳಿಗೆ ದುರ್ವಾಸನೆಯಿಂದ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದೆ.

ಇದೇ ಪ್ರಥಮ ಬಾರಿಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ಸಂಸದ ಪ್ರತಾಪ್ ಸಿಂಹ, ಸೂಯೇಜ್ ಫಾರಂ ಕಸದ ಸಮಸ್ಯೆ ಯನ್ನು ಶಾಶ್ವತವಾಗಿ ಪರಿಹರಿಸುವ ಭರವಸೆ ನೀಡಿ, ಅಗತ್ಯ ಕ್ರಮಕ್ಕೂ ಮುಂದಾಗಿದ್ದಾರೆ.

ಸೂಯೇಜ್ ಫಾರಂನಲ್ಲಿ ಈಗಾಗಲೇ 1.50 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಇದರ ದುರ್ವಾಸನೆಯಿಂದ ಸುತ್ತಮುತ್ತಲ ನಿವಾಸಿಗಳು ನರಕಯಾತನೆ ಅನುಭವಿ ಸುತ್ತಿದ್ದಾರೆ. ಈ ತ್ಯಾಜ್ಯವನ್ನು ಶಾಶ್ವತವಾಗಿ ತೆರವುಗೊಳಿಸಲು ಅಗತ್ಯವಿರುವ 20-30 ಕೋಟಿ ರೂ. ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಹಾಗೂ ಸಿಎಂ ಯಡಿಯೂರಪ್ಪ ಅವರ ಬಳಿ ಕಾಡಿಬೇಡಿ ಯಾದರೂ ಮಂಜೂರು ಮಾಡಿಸುವ ಭರವಸೆ ನೀಡಿದರು. ಅಲ್ಲದೆ ಈ ಸಂಬಂಧ ನ.2ರಂದು ಬೆಳಿಗ್ಗೆ 9.30ಕ್ಕೆ ಸೂಯೇಜ್ ಫಾರಂ ಆವರಣ ದಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ.