ರಂಗಭೂಮಿ ಮನುಷ್ಯನ ಅಹಂಕಾರವನ್ನ ಹತ್ತಿಕ್ಕುತ್ತದೆ

ಮೈಸೂರು: ರಂಗ ಭೂಮಿ ಮನುಷ್ಯನಲ್ಲಿರುವ ಅಹಂಕಾರ ವನ್ನು ಮುರಿಯುತ್ತದೆ ಎಂದು ಹೆಸರಾಂತ ವಾಗ್ಮಿ ಪೆÇ್ರ.ಎಂ.ಕೃಷ್ಣೇಗೌಡ ಹೇಳಿದರು.

ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ವಿವೇಕಾನಂದ ಪದವಿ ಪೂರ್ವ ಕಾಲೇ ಜಿನ ಸಭಾಂಗಣದಲ್ಲಿ ಆದಮ್ಯ ರಂಗಶಾಲೆ ಆಯೋಜಿಸಿದ್ದ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿಯಲ್ಲಿ ಎಲ್ಲಾ ಕಲಾವಿದ ರನ್ನು ಒಂದೇ ಭಾವನೆಯಲ್ಲಿ ಕಾಣುತ್ತೇವೆ ಎಂಬುದಕ್ಕೆ ಚಿತ್ರನಟ ಶಂಕರ್ ನಾಗ್ ಅವರು ಅತ್ಯುತಮ ಉದಾಹರಣೆ. ಅವರು ಸಿನಿಮಾ ದಲ್ಲಿ ಅಭಿನಯಿಸುವಾಗ ಚಿತ್ರೀಕರಣದ ವೇಳೆ ವಿಶೇಷವಾಗಿ ಗಮನಿಸಿಕೊಳ್ಳಲಾಗುತ್ತಿತ್ತು. ಆದರೆ, ನಾಟಕ ಮಾಡುವ ವೇಳೆ ಎಲ್ಲ ರಂತೆ ಅವರು ಒಬ್ಬರಾಗುತ್ತಿದ್ದರು ಎಂದರು.

ಮಕ್ಕಳು ಆಟವಾಡಬೇಕು. ಕುಣ ದು ಕುಪ್ಪಳಿಸಬೇಕು. ಮಕ್ಕಳನ್ನು ಮಕ್ಕಳಂತೆಯೇ ಕಾಣಬೇಕು. ಅವರಲ್ಲಿ ಭಯ ಹುಟ್ಟುವುದ ಕ್ಕಿಂತ ಮೊದಲೇ ಎಲ್ಲವನ್ನು ಕಲಿಸಬೇಕು. ಸಾಧ್ಯವಾದರೆ ಬಡವ-ಶ್ರೀಮಂತ, ಮೇಲು -ಕೀಳು ಎಂಬುದನ್ನು ತಿಳಿಸದಂತೆ ಬೆಳೆಸ ಬೇಕು. ಪೋಷಕರು ಮಕ್ಕಳಿಗೆ ದುಡ್ಡು ಮಾಡುವುದರ ಬದಲು ಕಷ್ಟದಲ್ಲಿರುವವ ರಿಗೆ ನೆರವಾಗುವ ಗುಣಗಳನ್ನು ಕಲಿಸ ಬೇಕು ಎಂದು ತಿಳಿಸಿದರು.

ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನಗೌಡ ಮಾತನಾಡಿ, ಪೋಷಕರು ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ, ಅದಕ್ಕೆ ಅನುಗುಣ ವಾಗಿ ಬೆಳೆಸಬೇಕು. ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾರೆ ಎಂದು ಹಿಯ್ಯಾಳಿಸಬಾರದು ಎಂದರು.

ಕುಣ ದು ಕುಪ್ಪಳಿಸಿದ ಬಾಲಂಗೋಚಿಗಳು: ಬಣ್ಣ ಬಣ್ಣದ ವೇಷಭೂಷಣಗಳಿಂದ ಕಂಗೊ ಳಿಸುತ್ತಿದ್ದ ಬಾಲಂಗೋಚಿಗಳು ಹಾಡು, ನೃತ್ಯ ಮತ್ತು ನಾಟಕಗಳ ಮಾಡಿ ಕುಣ ದು ಕುಪ್ಪಳಿಸಿದರು. ಮೊದಲಿಗೆ ವೇದಿಕೆಗೆ ಆಗ ಮಿಸಿದ ಚಿಣ್ಣರ ತಂಡ ‘ಗಜವದನ ಹೇ ರಂಬ…’ ಹಾಡನ್ನು ಹಾಡಿ ಸಾಂಸ್ಕøತಿಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ‘ಶರಣು ಹೇಳಿವ್ರಿ ಸ್ವಾಮಿ’, ‘ಒಳ್ಳೆ ಸಮಯ’, ‘ಶಿವನೆ ನಿನ್ನಾಟ ಬಲ್ಲವರು ಯಾರ್ಯಾರೋ’, ‘ಉರಿವುದು ಮೂಗು’, ‘ಎಣ್ಣೆ ಕಾಯಿ ನಾ ತಂದು’, ‘ಆಚೆಮನೆ ಸುಬ್ಬಮ್ಮನಿಗೆ’ ಎಂಬ ರಂಗಗೀತೆಗಳನ್ನು ಹಾಡಿ ಮೆಚ್ಚುಗೆ ಪಡೆದರು.

ನಂತರ ಕಾಡು ಕುರುಬರ ನೃತ್ಯ ಮಾಡಿದ ಎಳೆಯರು, ‘ಮರದ ತಾಯಿ’, ‘ಜಿಲೇಬಿ ಸಂಚಾರ’ ಮತ್ತು ‘ಹಕ್ಕಿಹಾಡು’ ನಾಟಕ ಗಳನ್ನು ಮಾಡಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಸಿ.ಕೆ. ಮಹೇಂದ್ರ, ಆದಮ್ಯ ರಂಗಶಾಲೆ ಸ್ಥಾಪಕ ಚಂದ್ರು ಮಂಡ್ಯ ಉಪಸ್ಥಿತರಿದ್ದರು.