ಅರಸೀಕೆರೆ: ತಾಲೂಕಿನ ಬಾಣಾವರ ಪಟ್ಟಣದ ಲ್ಲಿರುವ ಪಾಳೆಗಾರರ ಕಾಲದ ಕೋಟೆಯ ಗೋಡೆಯ ಒಂದು ಭಾಗ ಕುಸಿದಿದ್ದು, ಕೋಟೆ ಶಿಥಿಲವಾಗುತ್ತಿದೆ ಎಂದು ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾವಿರ ವರ್ಷಗಳ ಹಿಂದಿನ ಈ ಕೋಟೆಯ ಗೋಡೆಯು ಕೆಲವೆಡೆ ಶಿಥಿಲವಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಗೋಡೆಯ ಒಂದು ಪಾಶ್ರ್ವ ಕುಸಿದು ಬಿದ್ದಿದೆ. ಐತಿಹಾಸಿಕ ಸ್ಮಾರಕವನ್ನು ಪುರಾತತ್ವ ಇಲಾಖೆಯವರು ತಕ್ಷಣವೇ ದುರಸ್ತಿಪಡಿಸಬೇಕು. ಕೋಟೆಯ ಉಳಿದ ಭಾಗವನ್ನೂ ಸಂರಕ್ಷಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. 10ನೇ ಶತಮಾನದಲ್ಲಿ ಹೊಯ್ಸಳ ಅರಸರ ಕಾಲದಲ್ಲಿ ಈ ಕೋಟೆ ನಿರ್ಮಿತವಾಗಿದೆ. ಸೈನಿಕರ ತಂಗುದಾಣ, ಶಸ್ತ್ರಾಸ್ತ್ರಗಳ ಸಂಗ್ರಹಾಗಾರವಾಗಿ ಬಳಕೆಯಾಗುತ್ತಿತ್ತು ಎಂದು ತಿಳಿದುಬಂದಿದೆ.