ಸಾಹಿತಿಗಳು ಬರವಣಿಗೆ  ಮೂಲಕ ಸಮಾಜವನ್ನು ಎಚ್ಚರಿಸಬೇಕು

ಮೈಸೂರು:  ಸಾಹಿತಿಗಳು, ಬರವಣಿಗೆ ಮೂಲಕ ಸಮಾಜ ವನ್ನು ಎಚ್ಚರಿಸುವ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕೆಂದು ಕವಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ವಿಜಯಧ್ವನಿ ಪ್ರತಿಷ್ಠಾನದ ಸಾಂಸ್ಕøತಿಕ ಸಂಸ್ಥೆ ವಾರ್ಷಿಕೋತ್ಸವ, ಕಾವ್ಯ ಮಿತ್ರ ಪ್ರಕಾಶನ ಹುಬ್ಬಳ್ಳಿ ಸಂಸ್ಥೆಯ ಉದ್ಘಾಟನೆ ಹಾಗೂ ಯುವಕವಿ ನಿತೀನ್ ನೀಲಕಂಠ ಅವರ `ಕೂಲಿಂಗ್ ಗ್ಲಾಸ್ ಕನಸುಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ರಾಜಕೀಯದ ಸ್ಥಿತಿಗತಿಯನ್ನು ಗಮನಿಸಿದರೆ ಕವಿಗಳ, ಕಲಾವಿದರ ಸಾಮಾಜಿಕ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂಬುದು ನನ್ನ ಭಾವನೆ. ಸಾಂಸ್ಕøತಿಕ ಶಾಸಕರಾಗಿ ಸಮಾಜವನ್ನು ಎಚ್ಚರಿಸುವ ಕಾರ್ಯವಾಗಬೇಕು. ಜಾತಿ, ಧರ್ಮದ ಸಂಕೋಲೆಯಲ್ಲಿ ಸಿಲುಕದೆ ಮಾನ ವೀಯತೆಯನ್ನು ಮಾತ್ರ ಮೂಲಮಂತ್ರ ವನ್ನಾಗಿ ಮಾಡಿಕೊಂಡು ದಿಟ್ಟವಾಗಿ ಸಾಹಿತ್ಯದ ಚಾಟಿ ಬೀಸಬೇಕು. ನೊಂದವರ ಧನಿಯಾಗಿ, ಎಲ್ಲರ ಒಳಿತಿಗಾಗಿ ಬರೆಯ ಬೇಕೆಂಬ ಇಂಗಿತ ವ್ಯಕ್ತಪಡಿಸಿದ ಅವರು, ಸಂಘ ಸಂಸ್ಥೆಯ ಹಣವನ್ನು ಸಧ್ವಿನಿ ಯೋಗ ಮಾಡಿಕೊಳ್ಳಬೇಕು. ದಡ ತಲುಪಿದಾಗ ದೋಣ ಯನ್ನು ದೂಡುವ ಕೆಲಸ ಎಂದಿಗೂ ಆಗಬಾರದೆಂದು ಸಲಹೆ ನೀಡಿದರು.

ಕೌಟಿಲ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಆರ್.ರಘು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾವ್ಯ ಮಿತ್ರ ಪ್ರಕಾಶನ ಗೌರವ ಸಲಹೆಗಾರ ಸೋಮು ರೆಡ್ಡಿ, ಗೌರವಾಧ್ಯಕ್ಷ ರೇಖಾ ಕೊಟ್ಟೂರು, ವಿಜಯಧ್ವನಿ ಪ್ರತಿಷ್ಠಾನ ಅಧ್ಯಕ್ಷೆ ಆರ್.ಸಿ.ರಾಜಲಕ್ಷ್ಮೀ, ಲೇಖಕಿ ಎ.ಹೇಮಗಂಗಾ, ಕವಿ ನಿತೀನ್ ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು.