ಅಭಿವೃದ್ಧಿ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿ ಪಾತ್ರ ಹಿರಿದು

ಮಡಿಕೇರಿ: ಯುವ ಜನಾಂ ಗವು ಸಾಕಷ್ಟು ಜವಾಬ್ದಾರಿಯನ್ನು ಹೊಂದಿದ್ದು, ಇಂದಿನ ಯುವಕರಿಗೆ ಸರಿಯಾದ ಮಾರ್ಗ ದರ್ಶನ ನೀಡಬೇಕು. ಭಾರತದ ಗಡಿ ಯಲ್ಲಿ ರಕ್ಷಣೆ ಮಾಡುತ್ತಿರುವ ಯೋಧರು ಕೂಡ ಯುವಜನರಾಗಿದ್ದು, ಅವರನ್ನು ಸ್ಮರಿಸಬೇಕಿದೆ. ಭವ್ಯ ರಾಷ್ಟ್ರದ ನಿರ್ಮಾ ಣಕ್ಕೆ ಯುವ ಶಕ್ತಿಯ ಪಾತ್ರ ಮಹತ್ತರ ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.

ನೆಹರು ಯುವ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ “ಜಿಲ್ಲಾ ಯುವ ಸಮ್ಮೇಳನ, ಕಾರ್ಯಾಗಾರ, ಯುವ ಪ್ರಶಸ್ತಿ, ಕ್ರೀಡಾ ಸಾಮಗ್ರಿ ವಿತರಣೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಜನತೆ ಸಾಮಾಜಿಕ ಜಾಲತಾಣ ಗಳ ದುರ್ಬಳಕೆಯಿಂದ ದೂರವಿರಬೇಕು. ವಿಶ್ವ ಭಾರತದ ಕಡೆಗೆ ತಿರುಗಿ ನೋಡು ವಂತಾಗಿದ್ದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.

ಯುವ ಜನತೆಯನ್ನು ದೃಢಗೊಳಿಸಲು ಯುವ ಸಮ್ಮೇಳನಗಳು ಮತ್ತು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಸ್ವಾಮಿ ವಿವೇ ಕಾನಂದರ ಆದರ್ಶ ಜೀವನವನ್ನು ಇಂದಿನ ಯುವಜನತೆ ಅನುಸರಿಸಬೇಕು. ದೇಶದ ಅಭಿವೃದ್ಧಿ ಮತ್ತು ಏಕತೆಗೆ ಯುವ ಜನತೆ ಪಣತೊಡಬೇಕು ಎಂದು ಕರೆ ನೀಡಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತ ನಾಡಿ, ಯುವ ಜನತೆಯು ಮೊಬೈಲ್ ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು. ಸಮಯ ಯಾರಿಗೂ ಕೂಡ ಕಾಯುವು ದಿಲ್ಲ. ಆದ್ದರಿಂದ ಸಮಯ ಪ್ರಜ್ಞೆ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸ ಬೇಕು ಎಂದು ಕರೆ ನೀಡಿದರು.

ಉನ್ನತ ಮಟ್ಟದ ಅಧಿಕಾರಿಗಳಾಗಿ ಸಮಾ ಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ಯೂತ್ ಕ್ಲಬ್‍ಗಳು, ಯುವ ಸಮ್ಮೇಳನ ಗಳು ಯುವಜನತೆಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಯುವ ಜನತೆಯು ಭವಿಷ್ಯ ಭಾರತದ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ, ರಾಷ್ಟ್ರದ ಅಭಿವೃದ್ಧಿಗೆ ಯುವ ಜನತೆಯ ಪಾತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಯುವ ಸಮ್ಮೇಳನ ಯುವಜನತೆಯ ಗುರುತಿಸುವಿಕೆಗೆ ವೇದಿಕೆ ಕಲ್ಪಿಸುತ್ತಿದೆ. ದೇಶದ ಅಭಿವೃದ್ಧಿಗೆ ಯುವ ಜನತೆಯು ಶ್ರಮಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ತಾಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್, ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿಗಳು ಜಸಿಂತ ಡಿಸೋಜ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಇತರರು ಇದ್ದರು.

ಉಪನ್ಯಾಸಕ ಡಾ.ಕೆ.ಸಿ.ದಯಾನಂದ ಅವರು ‘ಪ್ರಸ್ತುತ ಸಮಾಜದಲ್ಲಿ ಯುವ ಜನತೆ’ ಕುರಿತು ಮಾತನಾಡಿದರು. ನೆಲ್ಲಿಹುದಿಕೇರಿಯ ಡೋಮಿನೋಸ್ ಕಲಾ ಮತ್ತು ಕ್ರೀಡಾ ಯುವಕ ಸಂಘಕ್ಕೆ ಜಿಲ್ಲಾ ಯುವ ಪ್ರಶಸ್ತಿ ನೀಡಲಾಯಿತು. ವೈಯಕ್ತಿಕ ಸಾಧನೆಗಾಗಿ ನೇತ್ರಾವತಿ ಮತ್ತು ಗಾಯತ್ರಿ ಯುವ ಪ್ರಶಸ್ತಿಯನ್ನು ಪಡೆದರು. ಹೀಗೆ ಅತ್ಯುತ್ತಮ ಜಿಲ್ಲಾ ಯುವಕ ಸಂಘ, ಸ್ವಚ್ಛ ಭಾರತ ಯುವ ಪ್ರಶಸ್ತಿಯನ್ನು ಮಾಲ್ದಾರೆ ಯುವಕ ಸಂಘ, ಡೋಮಿನೋಸ್ ಕಲಾ ಮತ್ತು ಕ್ರೀಡಾ ಯುವಕ ಸಂಘ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘವು ಮುಡಿಗೇರಿ ಸಿಕೊಂಡಿತು. ಕೆ.ಕೆ.ಗಣೇಶ್ ಸ್ವಾಗತಿಸಿ ದರು, ಕೆ.ಎಂ.ಮೋಹನ್ ವಂದಿಸಿದರು.