ಮಕ್ಕಳಲ್ಲಿ ತಂತ್ರಜ್ಞಾನ ಆವಿಷ್ಕಾರದ ಅರಿವು ಮೂಡಿಸುವುದು ಅವಶ್ಯ

ಮೈಸೂರು,ಜ.11(ವೈಡಿಎಸ್)-ವಿಜಯನಗರ ದಲ್ಲಿರುವ ಭಾರತೀಯ ವಿದ್ಯಾಭವನದ ಸಭಾಂ ಗಣದಲ್ಲಿ ಶಂಕರ್ ಬೆಳ್ಳೂರು ಅವರ `ಅಟ್ ದಿ ಕ್ರಾಸ್‍ರೋಡ್ಸ್’ ಪುಸ್ತಕವನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು.

ಬೆಂಗಳೂರು ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಅವರು ಪುಸ್ತಕ ಬಿಡು ಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಆಗ ಮಿಸಿದ್ದ ಯುನಿಲಾಗ್ ಕಾಂಟೆಂಟ್ ಸಲ್ಯುಶನ್ಸ್ ಕಂಪೆನಿ ಅಧ್ಯಕ್ಷ ಕೆ.ಅಚ್ಚುತ ಬಾಚಳ್ಳಿ ಮಾತನಾಡಿ, ನಮ್ಮ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಕಲಿಸು ತಂತ್ರಜ್ಞಾನದ ನೆರವು ಬಳಸುತ್ತೇವೆ. ಆದರೆ ಕೇವಲ ತಂತ್ರಜ್ಞಾನದ ಬಳಕೆ ಮಾತ್ರ ಸಾಲದು. ತಂತ್ರ ಜ್ಞಾನದ ಆವಿಷ್ಕಾರ ಹೇಗೆ ಎಂಬುದನ್ನೂ ಮಕ್ಕಳಿಗೆ ಕಲಿಸಿಕೊಡಬೇಕಿದೆ ಎಂದು ಹೇಳಿದರು.

ನಾವು ತರಗತಿಗೆ ತಂತ್ರಜ್ಞಾನವನ್ನು ತರುತ್ತಿ ದ್ದೇವೆ. ಶಿಕ್ಷಕರು ಪವರ್ ಪಾಯಿಂಟ್ ಪ್ರೆಸೆಂಟೇ ಷನ್ ಮೂಲಕ ಪಾಠ ಮಾಡುತ್ತಾರೆ. ಮಕ್ಕಳು ಟ್ಯಾಬ್ಲೆಟ್‍ಗಳನ್ನು ಬಳಸುತ್ತಾರೆ. ಇವೆಲ್ಲವೂ ಒಳ್ಳೆಯದೆ. ಆದರೆ ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆಯೇ ಹೊರತು, ಆ ತಂತ್ರಜ್ಞಾನ ವನ್ನು ಹೇಗೆ ಆವಿಷ್ಕರಿಸಬೇಕು ಎಂಬುದನ್ನು ಕಲಿಸಿಕೊಡುವುದರಲ್ಲಿ ಎಡವಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಬಿವಿಬಿ ಅಧ್ಯಕ್ಷ ಎನ್.ರಾಮಾ ನುಜ ಮಾತನಾಡಿ, ಶಂಕರ್ ಬೆಳ್ಳೂರು ಅವರ ಪುಸ್ತಕದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ನೀಡುವುದು ಸೇರಿದಂತೆ ಸಾಕಷ್ಟು ಮಾಹಿತಿ ಇದೆ ಎಂದು ಹೇಳಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಮೈಸೂರು ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ, ಕೃತಿ ಕರ್ತೃ ಶಂಕರ್ ಬೆಳ್ಳೂರು ಉಪಸ್ಥಿತರಿದ್ದರು.