`ಸ್ಕಿಜೋಫ್ರೀನಿಯಾ’ಗೆ ಚಿಕಿತ್ಸೆ ಇದೆ : ಡಾ.ಚಿದಂಬರ

ಮೈಸೂರು: ವಾಸ್ತ ವತೆಯಿಂದ ದೂರ ಉಳಿದು ಭ್ರಮೆ ಹಾಗೂ ಅರ್ಥವಿಲ್ಲದ ನಂಬಿಕೆಗಳೊಂದಿಗೆ ಬಳ ಲುವ ಲಕ್ಷಣವುಳ್ಳ `ಸ್ಕಿಜೋಫ್ರೀನಿಯಾ (ಛಿದ್ರ ಮನಸ್ಕತೆ)’ ಮಾನಸಿಕ ಕಾಯಿಲೆ ಕುರಿತಂತೆ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯ ಕ್ರಮ ವಿಭಾಗ, ಕಾವೇರಿ ನರ್ಸಿಂಗ್ ಶಾಲೆ ಮತ್ತು ಕಾಲೇಜು ಹಾಗೂ ಶಾಂತವೇರಿ ಗೋಪಾಲಗೌಡ ನರ್ಸಿಂಗ್ ಶಾಲೆ ಮತ್ತು ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಜಾಥಾದಲ್ಲಿ `ಸ್ಕಿಜೋಫ್ರೀನಿಯಾ’ ಮಾನ ಸಿಕ ಕಾಯಿಲೆಗೆ ಚಿಕಿತ್ಸೆ ಇದೆ ಎಂಬ ಸಂದೇಶ ರವಾನಿಸಲಾಯಿತು.

`ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ’ ಅಂಗವಾಗಿ ನಡೆದ ಈ ಜಾಥಾಕ್ಕೆ ನಜರ್ ಬಾದಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವ ರಣದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಚಿದಂಬರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸ್ಕಿಜೋ ಫ್ರೀನಿಯಾ ಮಾನಸಿಕ ಕಾಯಿಲೆ ಸಾಮಾನ್ಯ ವಾಗಿ 15ರಿಂದ 25 ವರ್ಷ ವಯೋ ಮಾನದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳು ತ್ತದೆ. ಆಲೋಚನೆ ಹಾಗೂ ಭಾವನೆಗಳಲ್ಲಿ ವಾಸ್ತವ ಇಲ್ಲದೇ ಇರುವುದು ಈ ಕಾಯಿ ಲೆಯ ಪ್ರಮುಖ ಲಕ್ಷಣ. ಅನುವಂಶೀ ಯತೆ ಹಾಗೂ ಬಾಲ್ಯದಲ್ಲಿ ನಕಾರಾತ್ಮಕ ಅನುಭವ ಸೇರಿದಂತೆ ಅನೇಕ ಕಾರಣ ಗಳಿಂದ ಈ ಕಾಯಿಲೆ ಬರಬಹುದಾಗಿದೆ. ಬಹುತೇಕ ಈ ಕಾಯಿಲೆ ಗುಣಪಡಿಸಲು ಸಾಧ್ಯವಿದ್ದು, ಸರ್ಕಾರ ಉಚಿತ ಚಿಕಿತ್ಸೆಗೂ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಎಸ್‍ಪಿ ಕಚೇರಿ ವೃತ್ತ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ವೃತ್ತ, ನಜರ್ ಬಾದ್ ಮುಖ್ಯ ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಜಾಥಾ ಸಾಗಿ ಜಾಗೃತಿ ಮೂಡಿ ಸಿತು. ಕಾವೇರಿ ನರ್ಸಿಂಗ್ ಶಾಲೆ ಮತ್ತು ಕಾಲೇಜು ಹಾಗೂ ಶಾಂತವೇರಿ ಗೋಪಾಲ ಗೌಡ ನರ್ಸಿಂಗ್ ಶಾಲೆ ಮತ್ತು ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಎಂ. ಎಸ್.ಮಂಜುಪ್ರಸಾದ್, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ.ಎ.ಆರ್.ನರೇಂದ್ರ ಮತ್ತಿತರರು ಹಾಜರಿದ್ದರು.