ಮೈಸೂರಿಗೆ ಹರಿದು ಬಂದ ಪ್ರವಾಸಿಗರ ದಂಡು

ಮೈಸೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರದ್ದೇ ಕಾರುಬಾರು ಕಂಡು ಬಂದಿತು.

ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ದೊರೆತ ರಜಾವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಯುವ ನಿಟ್ಟಿನಲ್ಲಿ ವಿವಿಧ ರಾಜ್ಯ ಹಾಗೂ ವಿವಿಧ ದೇಶಗಳ ಸಾವಿರಾರು ಪ್ರವಾಸಿಗರು ಮೈಸೂರಿಗೆ ತಂಡೋಪತಂಡವಾಗಿ ಆಗಮಿಸಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮೈಸೂರಿಗೆ ಬಂದ ಪ್ರವಾಸಿಗರು ಅರ ಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆಆರ್‍ಎಸ್, ನಂಜನಗೂಡು, ಶ್ರೀರಂಗ ಪಟ್ಟಣ, ನಿಮಿಷಾಂಭ, ತಲಕಾಡು ಸೇರಿ ದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದು, ಸ್ಥಳೀಯ ಪ್ರವಾಸೋದ್ಯಮ ಕಳೆ ಕಟ್ಟಿದೆ.

ಮೈಸೂರು ಅರಮನೆಗೆ ಇಂದು ಬೆಳಿಗ್ಗೆ ಸುಮಾರು 15ರಿಂದ 20 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಅರಮನೆಯ ಸೌಂದರ್ಯವನ್ನಲ್ಲದೇ, ಅರಮನೆಯ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು. ನಂತರ ದೇಶದಲ್ಲಿ ನಂ.1 ಮೃಗಾಲಯ ಎಂಬ ಕೀರ್ತಿಗೆ ಪಾತ್ರ ವಾಗಿರುವ ಮೈಸೂರಿನ ಚಾಮ ರಾಜೇಂದ್ರ ಮೃಗಾಲಯಕ್ಕೂ ಪ್ರವಾಸಿಗರ ದಂಡು ತೆರಳಿ ಸಂಭ್ರಮಿಸಿತು. ಚಾಮುಂಡಿಬೆಟ್ಟಕ್ಕೆ ಬೆಳಗಿನಿಂದಲೇ ಪ್ರವಾಸಿಗರು ಆಗಮಿಸು ತ್ತಿದ್ದುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಿದ್ದರಿಂದ ದೇವಾಲಯದ ಸಿಬ್ಬಂದಿ ಪರದಾಡುವಂತಾಯಿತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಹಲವು ಭಕ್ತರು ದೇವಾಲಯದ ಹೊರಗಿ ನಿಂದಲೇ ದೇವಿಯ ದರ್ಶನ ಪಡೆದು ವಾಪಸ್ಸಾಗುವ ದೃಶ್ಯ ಕಂಡುಬಂತು.