ಹುಲಿ, ಚಿರತೆ ಹೆಜ್ಜೆ ಗುರುತು ಪತ್ತೆ: ಆತಂಕ

ಬೇಗೂರು: ಬೇಗೂರು ಹೋಬಳಿ ಸಮೀಪದ ಸೋಮಹಳ್ಳಿ ಗ್ರಾಮದ ಜಮೀನೊಂದರಲ್ಲಿ ಹುಲಿ ಹಾಗೂ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿ ಸಿದೆ. ಸೋಮಹಳ್ಳಿ ಗ್ರಾಮ ದಿಂದ ಕಬ್ಬಹಳ್ಳಿಗೆ ತೆರಳುವ ಮಾರ್ಗದಲ್ಲಿ ಇರುವ ಪುಟ್ಟಸ್ವಾಮಿ ಮತ್ತು ನಾಗ ಮಲ್ಲಪ್ಪ ಅವರ ಜಮೀನಿನಲ್ಲಿ ಹೆಜ್ಜೆ ಗುರುತುಗಳು ಕಂಡುಬಂದಿದ್ದು ಮೊದಲಿಗೆ ಇದು ಚಿರತೆಯ ಹೆಜ್ಜೆಯ ಗುರುತುಗಳೆಂದು ಭಾವಿಸಿದ್ದ ರೈತರು ಅರಣ್ಯಾ ಇಲಾಖೆಗೆ ಮಾಹಿತಿ ನೀಡಿದರೆ. ಸ್ಥಳಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ವಲಯ ಅಧಿಕಾರಿ ನವೀನ್‍ಕುಮಾರ್ ಹಾಗೂ ಸಿಬ್ಬಂದಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿದರು.

ನಂತರ ಮಾತನಾಡಿದ ವಲಯ ಅರಣ್ಯಾದಿಕಾರಿ ನವೀನ್‍ಕುಮಾರ್ ಅವರು, ಕಳೆದ ಎರಡು ದಿನಗಳ ಹಿಂದೆ ಹುಲಿಯೊಂದು ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಇದು ನಾಲ್ಕು ವರ್ಷದ ಹುಲಿಯ ಹೆಜ್ಜೆ ಗುರುತು ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಮತ್ತೊಂದು ಜಮೀನಿನಲ್ಲಿ ಪತ್ತೆಯಾಗಿರುವ ಹೆಜ್ಜೆ ಗುರುತು ಚಿರತೆಯದ್ದು ಎಂದು ತಿಳಿಸಿದರು. ಹುಲಿಯು ಜನವಸತಿಯಿಂದ ದೂರವಿರುತ್ತದೆ ಆದ್ದರಿಂದ ರೈತರು ಭಯ ಪಡುವ ಅಗತ್ಯವಿಲ್ಲ. ಹುಲಿಯು ಓಂಕಾರ ಅರಣ್ಯ ವಲಯದಿಂದ ಹೊರ ಬಂದು ರಾಷ್ಟ್ರೀಯ ಹೆದ್ದಾರಿ ದಾಟಿ ಇಲ್ಲಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಮತ್ತೇ ಹೆಜ್ಜೆ ಗುರುತು ಕಂಡುಬಂದಲ್ಲಿ ಬೋನು ಇರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈತರಾದ ನಾಗಮಲ್ಲಪ್ಪ, ಗುರುಮಲ್ಲಪ್ಪ, ಪುಟ್ಟಸ್ವಾಮಿ, ಸುನೀಲ್, ನಾಗರಾಜು ಇದ್ದರು.