ಸಾಮಾಜಿಕ ಜಾಲತಾಣಗಳ ಬಳಕೆಯ ಅರಿವಿಲ್ಲದೆ ಸಮಯ ವ್ಯಯವಾಗುತ್ತಿದೆ

ಮೈಸೂರು: ‘ಮಾನವನ ಬದುಕಿ ನಲ್ಲಿ ಸಮಯ ಅತ್ಯಂತ ಮಹತ್ವವಾದುದು. ಆದರೆ ಇಂದು ಯುವಜನತೆ ಸಮಯ ವನ್ನು ವ್ಯರ್ಥ ಮಾಡುತ್ತಿದ್ದಾರೆ. ಅದರ ಲ್ಲಿಯೂ ಸಾಮಾಜಿಕ ಜಾಲತಾಣಗಳ ಬಳ ಕೆಯ ಅರಿವಿಲ್ಲದೆ ಅವುಗಳಿಗೆ ದಾಸರಾಗಿ ಸಮಯ ವ್ಯರ್ಥವಾಗುತ್ತಿದೆ’ ಎಂದು ಸಾಹಿತಿ ಹಾಗೂ ಪತ್ರಕರ್ತರೂ ಆದ ಡಾ.ಗಣೇಶ ಅಮೀನಗಡ ಅಭಿಪ್ರಾಯಪಟ್ಟರು.

ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಜಾಣ-ಜಾಣೆಯರ ಬಳಗವು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತ ನಾಡುತ್ತಿದ್ದರು. ‘ಸಾಮಾಜಿಕ ಜಾಲತಾಣ ಗಳನ್ನು ಬಳಸುವಾಗ ಎಚ್ಚರವಿರಬೇಕು. ಬಳಸುವ ಮೊದಲೇ ಅದರ ಒಳಿತು ಕೆಡುಕುಗಳ ಬಗ್ಗೆ ಯೋಚಿಸಬೇಕು. ಸಾಮಾ ಜಿಕ ಜಾಲತಾಣಗಳ ಮೂಲಕ ಇಂದು ಮೋಸ, ವಂಚನೆಗಳು ಹೆಚ್ಚುತ್ತಿವೆ. ಎಷ್ಟೋ ಸಂದರ್ಭಗಳಲ್ಲಿ ಮೋಸ ಹೋದ ಮೇಲೆ ನಮ್ಮ ಅರಿವಿಗೆ ಬರುತ್ತದೆ. ಗಾಜಿನ ಮನೆ ಯಲ್ಲಿ ವಾಸಿಸುವ ರೀತಿಯಲ್ಲಿ ಇವುಗಳನ್ನು ಬಳಸುವಾಗ ಎಚ್ಚರವಿರಬೇಕು. ಪತ್ರಿಕೆಗಳು ಮಾಹಿತಿಯ ಜೊತೆಗೆ ಭಾಷಾಶುದ್ಧಿ, ಶಬ್ದ ಸಂಪತ್ತು ಹೆಚ್ಚಿಸುವುದರಿಂದ ಅವುಗಳನ್ನು ಹೆಚ್ಚೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳಿ. ಸಮಯವನ್ನು ಸದುಪಯೋಗ ಪಡಿಸಿ ಕೊಂಡು ಉತ್ತಮ ಸಾಧನೆ ಮಾಡಿ’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬ ಶಿವಯ್ಯ ‘Éಯಾವುದೇ ಪ್ರಬಂಧದ ಬರ ವಣಿಗೆ ಚಿಂತನೆಗೆ ಹಚ್ಚುವಂತಿರಬೇಕು. ಸಮಾಜ ಮುಖಿಯಾಗಿ ಆಲೋಚಿಸಿ ಬರೆಯುವ ಪ್ರಬಂಧವು ಉತ್ತಮ ಬರವಣಿಗೆಯ ಸ್ಥಾನ ಪಡೆಯಬಲ್ಲುದು. ಸ್ನೇಹಿತರೊಂದಿಗೆ ಚರ್ಚಿಸಿ, ವಿಮರ್ಶೆ ಮಾಡಿ ಬರೆದರೆ ಅದು ಆಕರ್ಷಕವಾಗಿಯೂ ವಿಮರ್ಶಾ ತ್ಮಕವಾಗಿಯೂ ಇರುತ್ತದೆ. ಆದ್ದರಿಂದ ಯಾವುದೇ ವಿಷಯವನ್ನು ಮೊದಲು ನೀವೇ ಚೆನ್ನಾಗಿ ಮನನಮಾಡಿಕೊಂಡು ನಂತರ ಬರವಣಿಗೆ ರೂಪಕ್ಕಿಳಿಸಿದರೆ ಉತ್ತಮ ಬರವ ಣಿಗೆ ಹೊಮ್ಮಲು ಸಾಧ್ಯ’ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಮಹದೇವಪ್ಪನವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ರಾದ ಡಾ.ಬಿ.ಎಸ್.ಸುದೀಪ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತ ಕೋರಿದರು. ಕು.ಜ್ಯೋತಿಭಟ್ ಪ್ರಾರ್ಥಿಸಿದರು. ಕು. ಆರ್.ಮಂಜುಳಾ ವಂದಿಸಿದರು. ಕು.ಕೆ.ಕೆ. ಹರ್ಷಿತಾ ನಿರೂಪಿಸಿದರು. ಅಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿ ದ್ದರು. ಸುಮಾರು 50ಕ್ಕೂ ಹೆಚ್ಚಿನ ವಿದ್ಯಾರ್ಥಿ ಗಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.