ಇಂದು ಜನಪದ ಮಹಾಕಾವ್ಯ ‘ಧರೆಗೆ ದೊಡ್ಡೋರು ಮಂಟೇಸ್ವಾಮಿ’ ಕೃತಿ ಬಿಡುಗಡೆ

ಮೈಸೂರು,ಜ.17(ಎಂಟಿವೈ)- ಮೈಸೂರು ಕಲಾಮಂದಿರದಲ್ಲಿ ನಾಳೆ (ಜ. 18) ಮಧ್ಯಾಹ್ನ 3.30ಕ್ಕೆ ಬೆಟ್ಟದ ಬೀಡು ಸಿದ್ಧಶೆಟ್ಟರು ಹಾಡಿ ರುವ ಡಾ.ಪಿ.ಕೆ.ರಾಜಶೇಖರ ಅವರು ಸಂಪಾದಿಸಿರುವ ಜನಪದ ಮಹಾಕಾವ್ಯ ಧರೆಗೆ ದೊಡ್ಡೋರು ಮಂಟೇಸ್ವಾಮಿ ಕೃತಿ ಬಿಡುಗಡೆ ಸಮಾರಂಭÀ ಜರುಗಲಿದೆ ಎಂದು ಆಕಾಶವಾಣಿ ಉದ್ಘೋಷಕ ಮೈಸೂರು ಉಮೇಶ್ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾರು ಜನಪದ ಗಾಯಕರು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೃತಿ ಬಿಡುಗಡೆ ಗೊಳಿಸಲಿz್ದÁರೆ. ಆದಿಚುಂಚನಗಿರಿ ಶಾಖಾಮಠದ ಸೋಮೇಶ್ವರ ನಾಥ ಸ್ವಾಮೀಜಿ ಜನಪದ ಗಾಯಕ ರತ್ನ ಕೃತಿ ಬಿಡುಗಡೆಗೊಳಿಸಲಿz್ದÁರೆ. ಚಿಂತಕ ಡಾ.ಬಂಜೆಗೆರೆ ಜಯಪ್ರಕಾಶ್ ಕೃತಿ ಕುರಿತು ಮಾತನಾಡಲಿz್ದÁರೆ. ಶಾಸಕ ಸಿ.ಎಸ್.ಪುಟ್ಟ ರಾಜು ಅಧÀ್ಯP್ಷÀತೆ ವಹಿಸಲಿz್ದÁರೆ. ಬೊಪ್ಪನಗೌಡನಪುರ ಮಂಟೇಸ್ವಾಮಿ ಮಹಾಸಂಸ್ಥಾನ ಮಠ ಆಡಳಿತಾಧಿಕಾರಿ ಪ್ರಭÀುದೇವರಾಜೇ ಅರಸ್, ಹೊನ್ನಾಯಕನಹಳ್ಳಿ ಮಠಾಧಿಪತಿ ಎಂ.ಎಲï.ವರ್ಚಸೀ ಶ್ರೀಕಂಠಸಿದ್ಧಲಿಂಗರಾಜೇ ಅರಸ್, ಕುರುಬನಕಟ್ಟೆ ಮಠಾಧಿಪತಿ ಮರುಣಲಿಂಗರಾಜೇ ಅರಸ್ ಸಾನ್ನಿಧÀ್ಯ ವಹಿಸಲಿz್ದÁರೆ ಎಂದು ವಿವರಿಸಿದರು.

ಕೃತಿ ಕತೃ ಡಾ.ಪಿ.ಕೆ.ರಾಜಶೇಖರ್ ಮಾತನಾಡಿ, ಜನಪದ ಮಹಾಭಾರತ ಮಹಾಕಾವ್ಯ ಬರೆಯುವ ಸಮಯದ¯್ಲÉೀ ಈ ಕಾವ್ಯದ ಸಂಗ್ರಹದಲ್ಲಿ ತೊಡಗಿದೆ. ಬೆಟ್ಟದಬೀಡು ಸಿದ್ಧಶೆಟ್ಟರು ಅವರು ಸಿಕ್ಕ ಸಮಯದಲ್ಲಿ ಅವರೊಡನೆ ಮುಖಾಮುಖಿ ಯಾಗಿ 10 ವರ್ಷಗಳ ಅಂತರದಲ್ಲಿ ಮಹಾಕಾವ್ಯ ರಚನೆ ಮಾಡಿz್ದÉೀನೆ. ಕನ್ನಡ ಸಾರಸ್ವತ ಲೋಕ ಈ ಕಾವ್ಯವನ್ನು ಒಪ್ಪಿಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಯಾರೂ ಸಹ ನಿರ್ಲಕ್ಷಿಸದೇ ಕಾವ್ಯವನ್ನು ಸ್ವೀಕರಿಸಬೇಕೆಂದು ಮನವಿ ಮಾಡಿದರು.

ಮಹಾಜನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಆರ್.ತಿಮ್ಮೇಗೌಡ ಮಾತನಾಡಿ, ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಜಾನಪದ ಮಹಾಕಾವ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮಲೈ ಮಹಾಮಹ ದೇಶ್ವರ ಮಹಾಕಾವ್ಯ, ಜನಪದ ಮಹಾಭಾರತ ಮಹಾಕಾವ್ಯ ಜಾನಪದ ಲೋಕದಲ್ಲಿ ವಿಶೇಷ ಮೈಲುಗಲ್ಲು. ಇದೀಗ ಮಂಟೇಸ್ವಾಮಿ ಅವರ ಕುರಿತಾಗಿ ಮಹಾಕಾವ್ಯ ಬರೆದಿ z್ದÁರೆ ಎಂದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಜಗದೀಶ್, ಕೃಷ್ಣಪ್ಪ ಇದ್ದರು.