ಇಂದು ವರ್ಷದ ಮೊದಲ ಚಂದ್ರ ಗ್ರಹಣ

ನವದೆಹಲಿ, ಜ.9-ಈ ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ (ನಾಳೆ) ಸಂಭವಿಸಲಿದ್ದು, ಭಾರತ, ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಗೋಚರ ವಾಗಲಿದೆ. ನಾಳೆ ರಾತ್ರಿ 10.37ಕ್ಕೆ ಪ್ರಾರಂಭವಾಗಿ ಜ.11 ಮುಂಜಾನೆ 2.42ರವರೆಗೆ ಜರುಗಲಿದೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಗೋಚರವಾಗಲಿದೆ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಲು ಯಾವುದೇ ಅಡಚಣೆ ಇಲ್ಲ. ಈ ವರ್ಷದಲ್ಲಿ ನಾಳೆಯದೂ ಸೇರಿದಂತೆ ಒಟ್ಟು 4 ಚಂದ್ರಗ್ರಹಣ ನಡೆಯಲಿದೆ. ಜೂನ್ 5, ಜುಲೈ 5 ಹಾಗೂ ನವೆಂಬರ್ 30ಕ್ಕೆ ಮುಂದಿನ 3 ಚಂದ್ರಗ್ರಹಣಗಳು ಸಂಭವಿಸಲಿದೆ.