ನಾಳೆ, ನಾಡಿದ್ದು ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ

ಮೈಸೂರು: ಮೈಸೂರು ನಗರಕ್ಕೆ ಕಬಿನಿ ನದಿ ಮೂಲದಿಂದ ನೀರು ಸರಬರಾಜು ಮಾಡುವ ಮುಖ್ಯ ಏರು ಕೊಳವೆ ಮಾರ್ಗದಲ್ಲಿ ತುರ್ತು ನಿರ್ವಹಣೆ ಕೆಲಸ ಕೈಗೊಳ್ಳುವುದರಿಂದ ಏ.29 ಮತ್ತು 30ರಂದು ಮೈಸೂರಿನ 42ನೇ ವಾರ್ಡ್, 44ರಿಂದ 51ನೇ ವಾರ್ಡ್‍ವರೆಗೆ ಹಾಗೂ 54ರಿಂದ 65ನೇ ವಾರ್ಡ್ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.