ನಾಳೆ ಯೂತ್ ಹಾಸ್ಟೆಲ್ ಗಂಗೋತ್ರಿ  ಘಟಕದ 30ನೇ ವಾರ್ಷಿಕೋತ್ಸವ

ಮೈಸೂರು,ಜ.17-ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ 30ನೇ ವಾರ್ಷಿಕೋ ತ್ಸವ ಸಮಾರಂಭ ಜ.19ರಂದು ಕೃಷ್ಣ ಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ. ಅಂದು ಸಂಜೆ ಏರ್ಪಡಿಸಲಾಗಿರುವ ವಿಶೇಷ ಛಾಯಾ ಚಿತ್ರ ಪ್ರದರ್ಶನವನ್ನು `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಂಡೀಪುರ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕ ಹೆಚ್.ಸಿ. ಕಾಂತಾರಾಂ ಭಾಗವಹಿಸುವರು. ಅತಿಥಿಗಳಾಗಿ ಮೈಸೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ. ಪ್ರಶಾಂತ್, ಮೈಸೂರು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹೆಚ್.ಜನಾರ್ಧನ್, ವೈಹೆಚ್‍ಎಐ ಕರ್ನಾಟಕ ರಾಜ್ಯ ಶಾಖೆಯ ಕಾರ್ಯದರ್ಶಿ ಛಾವಾ ಸುಬ್ಬರಾವ್ ಪಾಲ್ಗೊಳ್ಳಲಿದ್ದಾರೆ. ಮೈಸೂರು ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ ಕಾರ್ಯಾ ಧ್ಯಕ್ಷ ವೈ.ಎನ್.ರಾಜೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 3ರಿಂದ ಸಂಜೆ 4.30 ಮತ್ತು ರಾತ್ರಿ 7ರಿಂದ 8ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.