ನಾಳೆ `ಮೇಘ ಮಾಸದಲ್ಲಿ ವಸಂತ ಗೀತೆಗಳು’ ಸಂಗೀತ ಸಂಜೆ

ಮೈಸೂರು: ಹಳೆ ಬೇರು ಹೊಸ ಚಿಗುರು ಗಾಯಕರ ಗೆಳೆ ಯರ ಬಳಗದ ವತಿಯಿಂದ ಜೂ.15ರ ಸಂಜೆ 5 ಗಂಟೆಗೆ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ `ಮೇಘ ಮಾಸದಲ್ಲಿ ವಸಂತ ಗೀತೆಗಳು’ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ ರೇವಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಳಗದ ಕಾರ್ಯದರ್ಶಿ ರೇವಣ್ಣ ಮಾತನಾಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಹುಣಸೂರು ಶಾಸಕ ಅಡ ಗೂರು ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸು ವರು. ಸಚಿವ ಸಾ.ರಾ.ಮಹೇಶ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಜಿ.ರವಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್ ಇನ್ನಿತರರು ಮುಖ್ಯ ಅತಿಥಿ ಯಾಗಿ ಭಾಗವಹಿಸುವರು ಎಂದರು. `ಸಾಧನೆ ಹಲವಾರು- ಸಾಧಿಸಬೇಕಿರುವುದು ನೂರಾರು’ ಘೋಷ ವಾಕ್ಯದೊಡನೆ ಒಂದು ವರ್ಷ ಪೂರೈಸಿದ ಸರ್ಕಾರವನ್ನು ಅಭಿ ನಂದಿಸಲಾಗುವುದು ಎಂದರು. ಕಾರ್ಯ ಕ್ರಮದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ ಎಂದರು. ಗೋಷ್ಠಿಯಲ್ಲಿ ನೇತ್ರ ತಜ್ಞ ಡಾ.ಶ್ರೀನಿವಾಸಮೂರ್ತಿ ಇದ್ದರು.