ಭ್ರೂಣಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ: ನ್ಯಾ.ಶಿವಾನಂದ ಲಕ್ಷ್ಮಣ ಅಂಚಿ

ವಿರಾಜಪೇಟೆ: ಮಕ್ಕಳು ದೇಶದ ಪ್ರಜೆಗಳು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆದರೆ, ಕೂಡಲೇ ಶಿಕ್ಷಕರಿಗೆ ಅಥವಾ ತಮ್ಮ ಪೋಷಕರಿಗೆ ತಿಳಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಾ ನಂದ ಲಕ್ಷ್ಮಣ ಅಂಚಿ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಸಂತ ಅನ್ನಮ್ಮ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ‘ಅಂತರರಾಷ್ಟ್ರೀಯ ಹೆಣ್ಣು ಮಗು ವಿನ ದಿನಾಚರಣೆ ಮತ್ತು ಭ್ರೂಣಪತ್ತೆ ತಡೆಕಾಯ್ದೆಯ ಬಗ್ಗೆ’ ಸಂತ ಅನ್ನಮ್ಮ ದ್ವಿಶತಮಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಮಾತನಾಡಿ, ಭ್ರೂಣಹತ್ಯೆ ಮಾಡಿದವರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ಹಾಗೂ ಪ್ರಕರಣಗಳಲ್ಲಿ ಸುಳ್ಳು ಸಾಕ್ಷಿ ಹೇಳಿದ ವರಿಗೂ ಶಿಕ್ಷೆ ಆಗುತ್ತದೆ. ಹೆಣ್ಣು ಮಕ್ಕಳಿಗೆ ಯಾರಾದರು ಕಿರುಕುಳ ನೀಡಿದರೆ ನ್ಯಾಯಾಲಯಕ್ಕೆ ತಿಳಿಸಿ ಸಾಧ್ಯವಾದಲ್ಲಿ ಬರೆದು ಕಳುಹಿಸಿದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಹೆಣ್ಣು ಮಕ್ಕಳಿಗೆ ಅನೇಕ ಕಾನೂನುಗಳಿದ್ದು ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ನೀಡಲಾಗುವುದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗ ಬೇಕು ಎಂದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕ ಚಂದ್ರಹಾಸ ಭಟ್ ಅವರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ತಿಳಿದುಕೊಂಡು ಅದನ್ನು ಬಳಕೆ ಮಾಡುವಂತಾಗ ಬೇಕು. ಸಿಗುವಂತಹ ಅವಕಾಶಗಳನ್ನು ಸದುಪಯೋಗ ಪಡಿಸಿ ಕೊಳ್ಳಬೇಕು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆದ ಸಂದರ್ಭ ನಿಮಗೆ ಒಳಿತನ್ನು ಬಯಸುವ ಶಿಕ್ಷಕರಿಗೆ ಹಾಗೂ ಮನೆಯವರಿಗೆ ಕೂಡಲೇ ತಿಳಿಸುವಂತಾಗಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಎಂ.ಎಂ.ನಂಜಪ್ಪ ಮಾತನಾಡಿ, ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿ ರುವ ದೇಶವಾಗಿದ್ದು, ಹೆಣ್ಣೊಂದು ಕಲಿತರೆ ಕುಟುಂಬವೇ ಕಲಿತಂತೆ ಹೆಣ್ಣು ಮಕ್ಕಳು ಶಿಶ್ತಿನಿಂದ ವಿದ್ಯೆ ಕಲಿತು ಜೀವನದ ಗುರಿಮುಟ್ಟುವಂತಾಗಬೇಕು ಎಂದರು. ಸಭೆ ಯಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ಜಫ್ರಿ ಡಿಸಿಲ್ವಾ ಸ್ವಾಗತಿಸಿ ವಂದಿಸಿದರು.