ಒಂದೇ ಟಿಕೆಟ್‍ನಲ್ಲಿ ಅರಮನೆ, ಮೃಗಾಲಯ ವೀಕ್ಷಣೆ ವ್ಯವಸ್ಥೆ ಕುರಿತು ಚರ್ಚಿಸುವಂತೆ ಅಧಿಕಾರಿಗಳಿಗೆ ಪ್ರವಾಸೋದ್ಯಮ ಕಾರ್ಯದರ್ಶಿ ಸೂಚನೆ

ಮೈಸೂರು,ಜು.24(ವೈಡಿಎಸ್)-ಪ್ರವಾಸಿ ಗರು ಒಂದೇ ಟಿಕೆಟ್‍ನಲ್ಲಿ ಅರಮನೆ ಮತ್ತು ಮೃಗಾಲಯ ವೀಕ್ಷಿಸುವಂತೆ ಮಾಡುವ ಕುರಿತು ಚರ್ಚಿಸುವಂತೆ ಪ್ರವಾಸೋಧ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ಅರಮನೆ ಮಂಡಳಿಯ ಸಭಾಂಗಣದಲ್ಲಿ ಬುಧವಾರ ನಡೆದ ಅರ ಮನೆ-ಮೃಗಾಲಯದ ಅಧಿಕಾರಿಗ ಳೊಂದಿಗಿನ ಸಭೆಯಲ್ಲಿ ಪ್ರವಾಸಿಗರು ಒಂದೇ ಬಾರಿಗೆ ಟಿಕೆಟ್ ಪಡೆದು ಅರಮನೆ ಮತ್ತು ಮೃಗಾಲಯ ವೀಕ್ಷಿಸಲು ಅನುವು ಮಾಡಿಕೊಡುವ ಬಗ್ಗೆ, ಆನ್‍ಲೈನ್‍ನಲ್ಲಿ ಟಿಕೆಟ್ ಹೆಚ್ಚು ಖರೀದಿರುವಂತೆ ಮಾಡಲು ಯಾವ ಕ್ರಮ ವಹಿಸಬೇಕು ಮತ್ತಿತರೆ ವಿಷಯಗಳ ಕುರಿತು ಚರ್ಚಿಸಲಾಯಿತು.

ಈ ವೇಳೆ ಟಿ.ಕೆ.ಅನಿಲ್ ಕುಮಾರ್ ಮಾತನಾಡಿ, ಮೃಗಾಲಯ ಮತ್ತು ಅರ ಮನೆಗೆ ಭೇಟಿ ನೀಡುವ ಪ್ರವಾಸಿಗರು ಇವುಗಳ ವೀಕ್ಷಣೆಗೆ ಪ್ರತ್ಯೇಕ ಟಿಕೆಟ್ ಪಡೆ ಯುವ ಬದಲಾಗಿ ಒಂದೇ ಟಿಕೆಟ್ ಪಡೆದು ಎರಡನ್ನೂ ವೀಕ್ಷಿಸುವಂತೆ ಮಾಡಿದರೆ ಅನುಕೂಲವಾಗಲಿದೆ. ಈ ಕುರಿತು ಚರ್ಚಿ ಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು, ಕಳೆದ ವರ್ಷ 35 ಲಕ್ಷ ಪ್ರವಾಸಿಗರು ಅರ ಮನೆಗೆ ಭೇಟಿ ನೀಡಿದ್ದು, ಅದರಲ್ಲಿ 3968 ಮಂದಿ ಮಾತ್ರ ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ. ಅರಮನೆ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ 10 ರೂ. ಮತ್ತು ಮಕ್ಕಳಿಗೆ 30ರೂ. ಟಿಕೆಟ್ ದರ ನಿಗದಿ ಮಾಡಿರುವು ದರಿಂದ ಆನ್‍ಲೈನ್‍ನಲ್ಲಿ ಬುಕ್ ಮಾಡು ತ್ತಿಲ್ಲ. ಅರಮನೆಯಲ್ಲಿ ಹಲವು ಟಿಕೆಟ್ ಕೌಂಟರ್‍ಗಳಿದ್ದು, ಸುಲಭವಾಗಿ ಟಿಕೆಟ್ ಖರೀದಿಸುತ್ತಿದ್ದಾರೆ. ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿದರೆ ಅದನ್ನು ರದ್ದು ಮಾಡಬೇಕಾ ದರೆ ಸಮಸ್ಯೆಯಾಗಲಿದೆ ಎಂದು ಬುಕ್ ಮಾಡುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ಅನಿಲ್‍ಕುಮಾರ್ ಅವರು ಪ್ರತಿಕ್ರಿಯಿಸಿ, ಆನ್‍ಲೈನ್ ಟಿಕೆಟ್ ಹೆಚ್ಚು ಮಾಡಲು ಯಾವ ಕ್ರಮ ವಹಿಸಬೇ ಕೆಂಬುದರ ಬಗ್ಗೆ ಚರ್ಚಿಸಬೇಕು. ಜತೆಗೆ ಅರಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ಅವಶ್ಯಕತೆಗೆ ತಕ್ಕಂತೆ ಗೈಡರ್ಸ್‍ಗಳನ್ನು ನೇಮಕ ಮಾಡಿಕೊಳ್ಳುವಂತೆಯೂ ಸೂಚಿಸಿದರು.

ನಂತರ ಪ್ರವಾಸೋಧ್ಯಮ ಇಲಾಖೆ ಸಹಾಯಕ ಕಾರ್ಯದರ್ಶಿ ಅನಿಲ್ ಕುಮಾರ್, ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೆಶಕ ಕುಮಾರ್ ಪುಷ್ಕರ್ ಅವರು ಮಿನಿ ವಾಹನದಲ್ಲಿ ಅರಮನೆ ಟಿಕೆಟ್ ಕೌಂಟರ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಮೃಗಾಲಯ ನಿರ್ದೇಶಕ ಅಜಿತ್, ಬುಕ್ ಮೈ ಶೋನ ವೆಂಕಟೇಶ್, ಅರ ಮನೆ ಮಂಡಳಿ ಅಧಿಕಾರಿಗಳಾದ ಸಂಜಯ್, ಸಮರ್ಥ್, ಸತೀಶ್, ವಿನೂತ್ ಮತ್ತಿತರರು ಉಪಸ್ಥಿತರಿದ್ದರು.