ದೇವಾಲಯ, ಮಠಗಳಿಗೆ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರ ಭೇಟಿ

ತಿ.ನರಸೀಪುರ, ಜು.20(ಎಸ್‍ಕೆ)- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ನೂತನ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ ಅವರು ಮಂಗಳವಾರ ಹಲವು ದೇವಾಲಯ ಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ವಿವಿಧ ಮಠಗಳಿಗೆ ತೆರಳಿ ಹರಗುರುಚರ ಮೂರ್ತಿಗಳ ಆಶೀರ್ವಾದ ಪಡೆದರು.
ರಾಜ್ಯ ಸರ್ಕಾರ ಕಾ.ಪು.ಸಿದ್ದಲಿಂಗ ಸ್ವಾಮಿ ಅವರ ಪಕ್ಷನಿಷ್ಠೆ ಗುರುತಿಸಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮಠ-ಮಂದಿರಗಳಿಗೆ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ದೇವರು ಮತ್ತು ಮಠಾಧೀಶರ ಆಶೀರ್ವಾದ ಪಡೆದರು.

ಪಟ್ಟಣದ ಶ್ರೀಮಹದೇಶ್ವರ ಭವನದಲ್ಲಿ ಸನ್ಮಾನ ಸ್ವೀಕರಿಸಿದ ಕಾ.ಪು.ಸಿದ್ದಲಿಂಗಸ್ವಾಮಿ ಮಾತನಾಡಿ, ಐತಿಹಾಸಿಕ ಹಾಗೂ ಚಾರಿತ್ರಿಕ ಹಿನ್ನೆಲೆಯುಳ್ಳ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಎಲ್ಲರೊಟ್ಟಿಗೆ ದುಡಿಯುತ್ತೇನೆ. ರಾಜ್ಯ ರಾಜ ಕಾರಣ ಹಾಗೂ ಪಕ್ಷಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದ ಅಗತ್ಯವಿದೆ. ಪ್ರವಾಸೋದ್ಯಮ ರಂಗದಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಗಳು ಹಾಗೂ ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

ಈ ವೇಳೆ ಉದ್ಯಮಿ ಹೋಟೆಲ್ ಲಿಂಗರಾಜು(ರಾಜಣ್ಣ), ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ನಂಜನಗೂಡು ಎಪಿಎಂಸಿ ಮಾಜಿ ಅಧ್ಯಕ್ಷ ಚಿನ್ನಂಬಳ್ಳಿ ಮಂಜುನಾಥ, ಗ್ರಾಪಂ ಸದಸ್ಯ ಸಂತೆ ಮರಳ್ಳಿ ಮಹೇಶ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ವೆಂಕಟರಮಣ ಶೆಟ್ಟಿ, ವರುಣ ಪ್ರಧಾನ ಕಾರ್ಯದರ್ಶಿ ರಂಗು ನಾಯಕ, ಮುಖಂಡರಾದ ಬಿಳಿಗೆರೆ ಮಹೇಶ, ಬಾಗಳಿ ಯೋಗೇಶ, ತಿರುಮಕೂಡಲು ದೀಪು ಹಾಗೂ ಇನ್ನಿತರರಿದ್ದರು.